ADVERTISEMENT

ರಾಷ್ಟ್ರೀಯ ಹಾಕಿ: ತಮಿಳುನಾಡು ಗೋಲುಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 14:35 IST
Last Updated 7 ನವೆಂಬರ್ 2024, 14:35 IST
ಹಾಕಿ ಇಂಡಿಯಾ
ಹಾಕಿ ಇಂಡಿಯಾ   

ಚೆನ್ನೈ: ಆತಿಥೇಯ ಚೆನ್ನೈ ತಂಡವು ಇಲ್ಲಿ ನಡೆಯುತ್ತಿರುವ 14ನೇ ಹಾಕಿ ಇಂಡಿಯಾ ಸೀನಿಯರ್‌ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗುರುವಾರ 43–0 ಗೋಲುಗಳಿಂದ ಅಂಡಮಾನ್‌ ಮತ್ತು ನಿಕೋಬರ್‌ ತಂಡವನ್ನು ಸೋಲಿಸಿತು.

ತಮಿಳುನಾಡು ತಂಡದ ನಾಯಕ ಕಾರ್ತಿ ಎಸ್. 13 ಗೋಲುಗಳನ್ನು ದಾಖಲಿಸಿದರೆ, ಸೋಮಣ್ಣ ಬಿ.ಪಿ. ಮತ್ತು ಸುಂದರ ಪಾಂಡಿ ತಲಾ 9 ಬಾರಿ ಚೆಂಡನ್ನು ಗುರಿ ಸೇರಿಸಿದರು. ಮಾರೇಶ್ವರನ್ ಶಕ್ತಿವೇಲು ಆರು ಗೋಲು ಗಳಿಸಿದರೆ, ಪೃಥ್ವಿ ಜಿ.ಎಂ, ಸೆಲ್ವರಾಜ್ ಕನಕರಾಜ್ ಮತ್ತು ಶ್ಯಾಮ್ ಕುಮಾರ್ ಕ್ರಮವಾಗಿ ಮೂರು, ಎರಡು ಮತ್ತು ಒಂದು ಗೋಲು ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು 17–0ಯಿಂದ ಆಂಧ್ರಪ್ರದೇಶ ತಂಡವನ್ನು ಸೋಲಿಸಿತು. ಶ್ರೇಯಸ್ ಧುಪೆ (5 ಗೋಲು), ಸೌರಭ್ ಪಾಶಿನೆ (3 ಗೋಲು), ಯೂಸುಫ್ ಅಫ್ಫಾನ್, ಸುಶೀಲ್ ಧನ್ವರ್ ಮತ್ತು ಮೊಹಮ್ಮದ್ ಝೈದ್ ಖಾನ್ (ತಲಾ ಎರಡು ಗೋಲು), ಅರ್ಮಾನ್ ಖುರೇಷಿ, ಮೊಹಮ್ಮದ್ ಉಮರ್ ಮತ್ತು ಮೊಹಮ್ಮದ್ ನಿಜಾಮುದ್ದೀನ್ (ತಲಾ ಒಂದು ಗೋಲು) ಗಳಿಸಿದರು.

ADVERTISEMENT

ಇತರ ಪಂದ್ಯಗಳಲ್ಲಿ ಉತ್ತರ ಪ್ರದೇಶವು 4–1ರಿಂದ ದೆಹಲಿ ತಂಡದ ವಿರುದ್ಧ; ಚಂಡೀಗಢ 9–0ಯಿಂದ ಉತ್ತರಖಂಡ ವಿರುದ್ಧ; ಮಿಜೋರಾಂ 2–1ರಿಂದ ತೆಲಂಗಾಣ ವಿರುದ್ಧ ಜಯ ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.