ಟೋಕಿಯೊ: ಭಾರತದ ಭರವಸೆಯಾಗಿದ್ದ ಓಟಗಾರ್ತಿ ದ್ಯುತಿ ಚಾಂದ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಮಹಿಳೆಯರ 200 ಮೀಟರ್ ಹೀಟ್ 4ರಲ್ಲಿ ಸ್ಪರ್ಧಿಸಿದ ದ್ಯುತಿ ಚಾಂದ್ ಕೊನೆಯವರಾಗಿ ಗುರಿ ಮುಟ್ಟಿದರು.
23.85 ಸೆಕೆಂಡುಗಳಲ್ಲಿ ಗುರಿ ತಲುಪಿದ ದ್ಯುತಿ, ಈ ಋತುವಿನ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದರೂ ಸೆಮಿಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ.
ಒಟ್ಟಾರೆಯಾಗಿ 41 ಸ್ಪರ್ಧಿಗಳ ಪೈಕಿ 38ನೇ ಸ್ಥಾನ ಪಡೆದರು. ಈ ಹಿಂದೆ 200 ಮೀ. ಓಟದಲ್ಲಿ 23 ಸೆಕೆಂಡುಗಳಲ್ಲಿ ಗುರಿ ಮುಟ್ಟಿರುವುದು ದ್ಯುತಿ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ಎಲ್ಲಏಳು ಹೀಟ್ಸ್‌ನ ಅಗ್ರ ಮೂವರು ಮತ್ತುಬಳಿಕದ ಅತಿ ವೇಗದ ಮೂವರು ಅಥ್ಲೀಟ್‌ಗಳು ಸೆಮಿಫೈನಲ್‌ಗೆ ಅರ್ಹತೆಯನ್ನು ಪಡೆದಿದ್ದಾರೆ.
ಮಹಿಳೆಯರ 100 ಮೀಟರ್ ಓಟದಲ್ಲೂ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ದ್ಯುತಿ ಚಾಂದ್ ವಿಫಲರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.