ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ವಿಭಾಗದಲ್ಲಿ ಸತತ ಎರಡನೇ ಸೋಲಿಗೆ ಶರಣಾಗಿರುವ ಬಿ. ಸಾಯಿ ಪ್ರಣೀತ್, ಕೂಟದಿಂದಲೇ ನಿರ್ಗಮಿಸಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ 'ಡಿ' ಗುಂಪಿನ ಎರಡನೇ ಪಂದ್ಯದಲ್ಲಿ 13ನೇ ಶ್ರೇಯಾಂಕಿತ ಸಾಯಿ ಪ್ರಣೀತ್ ಅವರು ವಿಶ್ವ ನಂ.29 ರ‍್ಯಾಂಕ್‌ನ ಹಾಲೆಂಡ್‌ನ ಮಾರ್ಕ್ ಕಾಲ್ಜೆವ್ ವಿರುದ್ಧ 14-21, 14-21ರ ಅಂತರದ ನೇರ ಸೆಟ್‌ಗಳಲ್ಲಿ ಸೋಲು ಅನುಭವಿಸಿದರು.
ವಿಶ್ವ ನಂ.15ನೇ ರ‍್ಯಾಂಕ್‌ನ ಪ್ರಣೀತ್, 40 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಸೋಲೊಪ್ಪಿಕೊಂಡರು.
ಮೊದಲ ಸುತ್ತಿನ ಪಂದ್ಯದಲ್ಲಿ ಇಸ್ರೇಲ್‌ನ ಮಿಶಾ ಝಿಲ್ಬರ್‌ಮನ್ ವಿರುದ್ಧ ಸಾಯಿ ಪ್ರಣೀತ್ 17-21, 15-21ರ ಅಂತರದಲ್ಲಿ ಪರಾಭವಗೊಂಡಿದ್ದರು.
ಈ ಮೂಲಕ ತಮಗಿಂತಲೂ ಕೆಳಗಿನ ರ‍್ಯಾಂಕ್‌ನ ಆಟಗಾರರ ವಿರುದ್ಧ ಮೇಲುಗೈ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಚೊಚ್ಚಲ ಒಲಿಂಪಿಕ್ಸ್ ಅಭಿಯಾನದಲ್ಲಿ ನಿರಾಸೆ ಅನುಭವಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.