ADVERTISEMENT

Tokyo Olympics | ಶೂಟಿಂಗ್‌ನಲ್ಲಿ ಗುರಿ ತಪ್ಪಿದ ದೀಪಕ್, ದಿವ್ಯಾಂಶ್

ಪಿಟಿಐ
Published 25 ಜುಲೈ 2021, 6:38 IST
Last Updated 25 ಜುಲೈ 2021, 6:38 IST
ದಿವ್ಯಾಂಶ್ ಸಿಂಗ್ ಪನ್ವರ್
ದಿವ್ಯಾಂಶ್ ಸಿಂಗ್ ಪನ್ವರ್   

ಟೋಕಿಯೊ: ಭಾರತದ ದೀಪಕ್ ಕುಮಾರ್ ಮತ್ತು ದಿವ್ಯಾಂಶ್ ಸಿಂಗ್ ಪನ್ವರ್ ಪುರುಷರ 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಅನುಕ್ರಮವಾಗಿ 26 ಹಾಗೂ 32ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇದರೊಂದಿಗೆ ಪದಕ ಸುತ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾಗಿದ್ದಾರೆ. ಅಲ್ಲದೆ ಮಹಾಕ್ರೀಡಾಕೂಟದಲ್ಲಿ ಭಾರತೀಯ ಶೂಟರ್‌ಗಳಿಂದ ನಿರಾಶದಾಯಕ ಪ್ರದರ್ಶನ ಮುಂದುವರಿದಿದೆ.

ಅಸಕಾ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ದೀಪಕ್ ಹಾಗೂ ದಿವ್ಯಾಂಶ್ ಅನುಕ್ರಮವಾಗಿ 624.7 ಹಾಗೂ 622.8 ಅಂಕಗಳನ್ನು ಕಲೆ ಹಾಕಿದರು.

ಒಟ್ಟು 47 ಸ್ಪರ್ಧಿಗಳು ಭಾಗವಹಿಸಿದ ಶೂಟಿಂಗ್ ಸ್ಪರ್ಧೆಯಲ್ಲಿ ಯಾವುದೇ ಹಂತದಲ್ಲೂ ದೀಪಕ್ ಹಾಗೂ ದಿವ್ಯಾಂಶ್ ಅವರಿಂದ ಪೈಪೋಟಿ ಮೂಡಿಬಂದಿರಲಿಲ್ಲ.

ಅರ್ಹತಾ ಸುತ್ತಿನಲ್ಲಿ ದಾಖಲೆಯ 632.7 ಸ್ಕೋರ್ ಕಲೆ ಹಾಕಿರುವ ಚೀನಾದ ಹೋರನ್ ಯಾಂಗ್ ಪದಕ ಸುತ್ತಿಗೆ ಅರ್ಹತೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.