ADVERTISEMENT

Tokyo Olympics: ಆರ್ಚರಿ; ಕ್ವಾರ್ಟರ್‌ಫೈನಲ್‌ ತಲುಪಿದ ದೀಪಿಕಾ ಕುಮಾರಿ

ರಷ್ಯಾದ ಕ್ಸೆನಿಯಾ ಪೆರೋವಾ ವಿರುದ್ಧ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2021, 3:11 IST
Last Updated 30 ಜುಲೈ 2021, 3:11 IST
@Tokyo2020hi‌ (ಟ್ವಿಟರ್‌ ಚಿತ್ರ)
@Tokyo2020hi‌ (ಟ್ವಿಟರ್‌ ಚಿತ್ರ)   

ಟೊಕಿಯೊ:ಒಲಿಂಪಿಕ್ಸ್‌ ಕ್ರೀಡಾಕೂಟದಮಹಿಳೆಯರ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿಭಾರತದದೀಪಿಕಾ ಕುಮಾರಿ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರಷ್ಯಾದ ಕ್ಸೆನಿಯಾ ಪೆರೋವಾ ಅವರನ್ನು ದೀಪಿಕಾ 6-5 ಅಂತರದಿಂದ ಪರಾಭವ ಗೊಳಿಸಿದರು.

ಕ್ವಾರ್ಟರ್‌ಫೈನಲ್‌ ಸೆಣಸಾಟ ಇಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ.

ADVERTISEMENT

ಶೂಟಿಂಗ್; ಫೈನಲ್‌ ತಲುಪಲು ವಿಫಲವಾದ ಮನು, ರಾಹಿ
ಭಾರತದ ಶೂಟರ್‌ಗಳಾದ ಮನು ಭಾಕರ್‌ ಮತ್ತು ರಾಹಿ ಸರನೊಬತ್‌ ಅವರು ಮಹಿಳೆಯರ 25 ಮೀ ಶೂಟಿಂಗ್ ಸ್ಪರ್ಧೆಯಲ್ಲಿಫೈನಲ್‌ ತಲುಪಲು ವಿಫಲರಾದರು.

ಮನು582 ಪಾಯಿಂಟ್ಸ್ ಮತ್ತು ರಾಹಿ 573ಪಾಯಿಂಟ್ಸ್ ಗಳಿಸಿದರಾದರೂ, ಫೈನಲ್‌ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.