ADVERTISEMENT

PHOTOS | ಕಮಲ್‌ಪ್ರೀತ್ 'ಕಮಾಲ್'; ಇತಿಹಾಸ ರಚಿಸುವ ತವಕ

ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಭಾರತದ ಕಮಲ್‌ಪ್ರೀತ್ ಕೌರ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಶನಿವಾರ ನಡೆದ ಮಹಿಳೆಯರ ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದ ಕೌರ್, ಪದಕ ಸುತ್ತಿಗೆ ಲಗ್ಗೆಯಿಟ್ಟರು. ಇದು ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಪರ್ಧಿಯಿಂದ ದಾಖಲಾದ ಶ್ರೇಷ್ಠ ಸಾಧನೆಯಾಗಿದೆ. (ಚಿತ್ರ ಕೃಪೆ: ಎಎಫ್‌ಪಿ/ಎಪಿ/ಪಿಟಿಐ)

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 6:35 IST
Last Updated 31 ಜುಲೈ 2021, 6:35 IST
ಕಮಲ್‌ಪ್ರೀತ್ ಕೌರ್, ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್ಸ್‌ಗೆ ಲಗ್ಗೆ
ಕಮಲ್‌ಪ್ರೀತ್ ಕೌರ್, ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್ಸ್‌ಗೆ ಲಗ್ಗೆ    
25 ವರ್ಷದ ಕಮಲ್‌ಪ್ರೀತ್ ಕೌರ್, ತಮ್ಮ ಮೂರನೇ ಹಾಗೂ ಕೊನೆಯ ಪ್ರಯತ್ನದಲ್ಲಿ 64 ಮೀಟರ್ ದೂರ ಡಿಸ್ಕಸ್ ಎಸೆದರು.
ಪಂಜಾಬ್‌ನ ಕಮಲ್‌ಪ್ರೀತ್ ಕೌರ್ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 60.29 ಮೀ, 63.97 ಮೀ. ಮತ್ತು 64 ಮೀ. ದೂರ ಡಿಸ್ಕಸ್ ಎಸೆದರು.
ಒಲಿಂಪಿಕ್ಸ್ ಅಥ್ಲಿಟಿಕ್ಸ್ ವಿಭಾಗದಲ್ಲಿ ಭಾರತೀಯ ಸ್ಪರ್ಧಿಗಳು ಇದುವರೆಗೆ ಪದಕವನ್ನು ಗೆದ್ದಿಲ್ಲ.
ಇತಿಹಾಸ ರಚಿಸುವ ತವಕದಲ್ಲಿ ಕಮಲ್‌ಪ್ರೀತ್ ಕೌರ್
ಒಲಿಂಪಿಕ್ಸ್ ಡಿಸ್ಕಸ್ ಥ್ರೊ ವಿಭಾಗದಲ್ಲಿ ಭಾರತದ ಶ್ರೇಷ್ಠ ಸಾಧನೆ
ಮಹಿಳೆಯರ ಡಿಸ್ಕಸ್ ಥ್ರೊ ಫೈನಲ್ ಸ್ಪರ್ಧೆಯು ಆಗಸ್ಟ್ 2ರಂದು ನಡೆಯಲಿದೆ
ವಿಶ್ವದ ಅಗ್ರ ಸ್ಪರ್ಧಿಗಳಿಗೆ ಕಮಲ್‌ಪ್ರೀತ್ ಪೈಪೋಟಿ
ಕಮಲ್‌ಪ್ರೀತ್ ಪದಕ ಗೆಲ್ಲಲಿ ಎಂಬುದು ಅಭಿಮಾನಿಗಳ ಹಾರೈಕೆ
ಒಲಿಂಪಿಕ್ಸ್‌ನಲ್ಲಿ ಭಾರತದ ಭರವಸೆಯಾಗಿರುವ ಕಮಲ್‌ಪ್ರೀತ್ ಕೌರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.