ADVERTISEMENT

ಮ್ಯಾರಥಾನ್ ವೇಳೆ ನೀರಿನ ಬಾಟಲಿ ಬೀಳಿಸಿ ಕೆಂಗಣ್ಣಿಗೆ ಗುರಿಯಾದ ಫ್ರಾನ್ಸ್ ಅಥ್ಲೀಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2021, 12:37 IST
Last Updated 11 ಆಗಸ್ಟ್ 2021, 12:37 IST
ಟ್ವಿಟರ್ ಸ್ಕ್ರೀನ್‌ಶಾಟ್ @bennysaint
ಟ್ವಿಟರ್ ಸ್ಕ್ರೀನ್‌ಶಾಟ್ @bennysaint   

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯುತ್ತಿರುವಾಗ ಫ್ರಾನ್ಸ್‌ನ ಅಥ್ಲೀಟ್, ಟ್ರ್ಯಾಕ್ ಬದಿಯಲ್ಲಿರಿಸಿದ ನೀರಿನ ಬಾಟಲಿಗಳನ್ನು ಬೀಳಿಸುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಮ್ಯಾರಥಾನ್ ಸ್ಪರ್ಧೆ ನಡೆಯುತ್ತಿರುವಾಗಲೇ ಅಥ್ಲೀಟ್‌ಗಳ ಬಾಯಾರಿಕೆ ನೀಗಿಸುವ ಸಲುವಾಗಿ ಟ್ರ್ಯಾಕ್ ಬದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಆದರೆ ಫ್ರಾನ್ಸ್ ಮೂಲದ ಅಥ್ಲೀಟ್ ಮೊಹಾದ್ ಅಮ್ದೊನಿ, ಟ್ರ್ಯಾಕ್ ಬದಿಯಲ್ಲಿ ಮೇಜಿನ ಮೇಲೆ ಸಾಲು ಸಾಲಾಗಿ ಇರಿಸಲಾಗಿದ್ದ ನೀರಿನ ಬಾಟಲಿಗಳನ್ನೆಲ್ಲ ಬೀಳಿಸುತ್ತಾರೆ. ಕ್ರೀಡಾಸ್ಫೂರ್ತಿ ಮೆರೆಯದ ಫ್ರಾನ್ಸ್‌ ಅಥ್ಲೀಟ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೊನೆಗೂ ಸ್ಪಷ್ಟನೆ ನೀಡಿರುವ ಮೊಹಾದ್, ನೀರು ಕುಡಿಯುವುದಕ್ಕಾಗಿ ಬಾಟಲಿ ತೆಗೆಯಲು ಯತ್ನಿಸುವ ವೇಳೆ ಕೈಯಿಂದ ಬಾಟಲಿ ಜಾರಿ ಬಿದ್ದಿತ್ತು ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೂ ಮೊಹಾದ್ ಅಮ್ದೊನಿಗೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಅಲ್ಲದೆ 17ನೇಯವರಾಗಿ ಗುರಿ ಮುಟ್ಟಿದರು. ಈ ವಿಭಾಗದಲ್ಲಿ ಚಿನ್ನದ ಪದಕವು ಕೀನ್ಯಾ ಅಥ್ಲೀಟ್‌ ಪಾಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.