ADVERTISEMENT

Tokyo Olympics: ಕೈತಪ್ಪಿದ ಒಲಿಂಪಿಕ್ ಪದಕ; ಬೇಸರ ವ್ಯಕ್ತಪಡಿಸಿದ ಅದಿತಿ

ಪಿಟಿಐ
Published 7 ಆಗಸ್ಟ್ 2021, 7:20 IST
Last Updated 7 ಆಗಸ್ಟ್ 2021, 7:20 IST
ಅದಿತಿ ಅಶೋಕ್
ಅದಿತಿ ಅಶೋಕ್    

ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಂತಹ ದೊಡ್ಡ ವೇದಿಕೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿರುವುದು ಸಂತಸ ತಂದಿಲ್ಲ ಎಂದು ಭಾರತದ ಯುವ ಗಾಲ್ಫರ್ ಅದಿತಿ ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಮಹಿಳೆಯರ ಗಾಲ್ಫ್ ವಿಭಾಗದಲ್ಲಿ ಅದಿತಿ ಅಶೋಕ್ ಅವರಿಗೆ ಕೂದಲೆಳೆಯ ಅಂತರದಲ್ಲಿ ಪದಕ ಕೈತಪ್ಪಿತ್ತು. ಅವರ ಭಾವನೆಗಳಲ್ಲೂ ಇದು ವ್ಯಕ್ತವಾಗಿತ್ತು.

ಹಾಗಿದ್ದರೂ ಐತಿಹಾಸಿಕ ಸಾಧನೆ ಮಾಡಿರುವ ಆದಿತಿ, ಒಲಿಂಪಿಕ್ಸ್ ಗಾಲ್ಫ್‌ ಇತಿಹಾಸದಲ್ಲೇ ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಗಾಲ್ಫರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ:

ADVERTISEMENT

'ಬೇರೆ ಯಾವುದೇ ಟೂರ್ನಿಯಾದರೂ ನಾನು ಖುಷಿಪಡುತ್ತಿದ್ದೆ. ಆದರೆ ಒಲಿಂಪಿಕ್ಸ್‌ನಂತಹ ದೊಡ್ಡ ವೇದಿಕೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಸಂತಸಪಡುವುದು ಕಷ್ಟ. ನಾನು ಉತ್ತಮ ಪ್ರದರ್ಶನ ನೀಡಿದ್ದು, ಶೇಕಡಾ 100ರಷ್ಟು ಪ್ರಯತ್ನಪಟ್ಟಿದ್ದೇನೆ' ಎಂದಿದ್ದಾರೆ.

ಮೊದಲ ಮೂರು ಸುತ್ತಿನಲ್ಲಿ ಪದಕ ಬೇಟೆಯಲ್ಲಿದ್ದ ಅದಿತಿ, ನಾಲ್ಕನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. 'ನಾನು ಅನೇಕ ಅವಕಾಶಗಳನ್ನು ಕೈಚೆಲ್ಲಿದೆ. ಇಂದಿನ ದಿನ ಕೆಟ್ಟದಾಗಿತ್ತು. ಇದರಿಂದ ಹಿನ್ನಡೆ ಅನುಭವಿಸಿದ್ದೇನೆ' ಎಂದು ಹೇಳಿದ್ದಾರೆ.

ಈ ಪ್ರದರ್ಶನದಿಂದ ಯುವ ಕ್ರೀಡಾಪಟುಗಳು ಗಾಲ್ಫ್ ಕ್ರೀಡೆಯತ್ತ ಆಸಕ್ತಿ ತೋರಲಿದ್ದು, ಹೆಚ್ಚಿನ ಬೆಂಬಲ ಸಿಗಲಿದೆ ಎಂಬುದರ ಬಗ್ಗೆ ಅದಿತಿ ಭರವಸೆ ವ್ಯಕ್ತಪಡಿಸಿದ್ದಾರೆ.

'ಪದಕ ಗೆಲ್ಲಬಹುದಾಗಿತ್ತು. ಆದರೂ ಎಲ್ಲರೂ ಸಂತಸಗೊಂಡಿದ್ದಾರೆ ಎಂದು ನಂಬಿದ್ದೇನೆ. ಅಷ್ಟೊಂದು ಮಂದಿ ಟಿವಿಯಲ್ಲಿ ಗಾಲ್ಫ್ ಕ್ರೀಡೆಯನ್ನುವೀಕ್ಷಿಸುತ್ತಾರೆ' ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.

'ನಾನು ಗಾಲ್ಫ್ ಆಡಲು ಪ್ರಾರಂಭಿಸಿದಾಗ ಮುಂದೊಂದು ದಿನ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದೇನೆ ಎಂದು ಅಂದುಕೊಂಡಿರಲಿಲ್ಲ. ಗಾಲ್ಫ್ ಒಲಿಂಪಿಕ್ ಕ್ರೀಡೆಯ ಭಾಗವೂ ಆಗಿರಲಿಲ್ಲ. ಕಠಿಣ ಪರಿಶ್ರಮ ವಹಿಸಿದರೆಈ ಹಂತಕ್ಕೆ ತಲುಪಬಹುದಾಗಿದೆ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.