ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ತೋರಿದ ಹೊರತಾಗಿಯೂ ಭಾರತ ಮಹಿಳಾ ಹಾಕಿ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು. ಎದುರಾಳಿ ತಂಡಗಳಿಗೆ ತಡೆಗೋಡೆಯಂತೆ ಪರಿಣಮಿಸಿದ್ದ ಗೋಲ್‌ಕೀಪರ್ ಸವಿತಾ ಪೂನಿಯಾ ಅವರ ಆಟಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗಬೇಸ್‌ಲೈನ್ ವೆಂಚರ್ಸ್ ಕಂಪೆನಿಯುಪೂನಿಯಾ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರಾಯೋಜಕತ್ವ ವಹಿಸಿದೆ.
ಈ ಬಗ್ಗೆ ಮಾತನಾಡಿರುವ ಸವಿತಾ, ʼಒಲಿಂಪಿಕ್ಸ್ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಬೇಸ್‌ಲೈನ್ ವೆಂಚರ್ಸ್ ಅನ್ನು ಪ್ರತಿನಿಧಿಸುವುದುಅದ್ಭುತ. ನಮ್ಮ ಪರಿಶ್ರಮವನ್ನು ಗುರುತಿಸಿದಾಗಮತ್ತು ಮೆಚ್ಚಿಕೊಂಡಾಗ ಆಗುವ ಸಂತಸಕ್ಕಿಂತ ದೊಡ್ಡ ಭಾವನೆ ಜಗತ್ತಿನಲ್ಲಿ ಬೇರೊಂದಿಲ್ಲ. ದೇಶದ ಹಲವು ಅಗ್ರಮಾನ್ಯ ಕ್ರೀಡಾಪಟುಗಳನ್ನುಬೇಸ್‌ಲೈನ್ ವೆಂಚರ್ಸ್ ಪ್ರತಿನಿಧಿಸುತ್ತದೆ. ನಾನೂ ಅದನ್ನು ಎದುರು ನೋಡುತ್ತಿದ್ದೇನೆ. ಈ ಕಂಪೆನಿಯು ನಾನು ನನ್ನ ದೇಶಕ್ಕಾಗಿಅತ್ಯುನ್ನತ ಮಟ್ಟದಲ್ಲಿ ಸಾಧನೆ ಮಾಡಲು ಹಿಂದೆಂದಿಗಿಂತಲೂ ಹೆಚ್ಚು ಉತ್ತೇಜನ ನೀಡಲಿದೆʼ ಎಂದಿದ್ದಾರೆ.
ಮಹಿಳಾ ಹಾಕಿಯ ಅತ್ಯುತ್ತಮ ಗೋಲ್‌ಕೀಪರ್ ಎನಿಸಿರುವ ಪೂನಿಯಾ, ಹರಿಯಾಣದ ಸಿರ್ಸಾ ಜಿಲ್ಲೆಯ ಜೋಧಕಾನ್‌ನವರು. ಭಾರತ ಹಾಕಿಯʼಗೋಡೆʼ ಖ್ಯಾತಿಯ ಇವರು,2014ರ ಏಷಿಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಮತ್ತು 2018ರ ಏಷಿಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಸೇರಿ ಹಲವು ಸ್ಮರಣೀಯ ಗೆಲುವುಗಳನ್ನು ದಾಖಲಿಸಿದ ವೇಳೆ ತಂಡದ ಭಾಗವಾಗಿದ್ದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ1-0 ಅಂತರದ ಐತಿಹಾಸಿಕ ಜಯ ಗಳಿಸಿದಾಗಲೂ, ಪೂನಿಯಾ ನಿರ್ಣಾಯಕ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.