ಟೋಕಿಯೊ: ಅರ್ಹತಾ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವ ಮೂಲಕ ಭಾರತದ ನಿರೀಕ್ಷೆಯಾಗಿದ್ದ ಶೂಟರ್ ಸೌರಭ್ ಚೌಧರಿ, ಪದಕ ಸುತ್ತಿನಲ್ಲಿ ಗುರಿ ತಪ್ಪುವ ಮೂಲಕ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶನಿವಾರ ಅಸಕಾ ರೇಂಜ್‌ನಲ್ಲಿ ನಡೆದ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ನಿರಾಸೆ ಅನುಭವಿಸಿದರು.
ಅಲ್ಲದೆ 137.4 ಸ್ಕೋರ್ ದಾಖಲಿಸಿ ಹಿನ್ನೆಡೆಗೊಳಗಾದರು. ಇದರೊಂದಿಗೆ ಪದಕದ ಕನಸು ಭಗ್ನಗೊಂಡಿತ್ತು.
ಏಷ್ಯಾ ಗೇಮ್ಸ್ ಹಾಗೂ ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಸಾಧನೆ ಮಾಡಿರುವ ಸೌರಭ್‌ಗೆ ಪದಕದ ಸುತ್ತಿನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ.
ಇದಕ್ಕೂ ಮೊದಲು ಅರ್ಹತಾ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಸೌರಭ್ ಚೌಧರಿ ಫೈನಲ್‌ಗೆ ಲಗ್ಗೆಯಿಟ್ಟಿದ್ದರು.
ಇದೇ ವಿಭಾಗದಲ್ಲಿ ಸ್ಪರ್ಧಿಸಿದ ಭಾರತದವರೇ ಆದ ಅಭಿಷೇಕ್ ವರ್ಮಾ ಅರ್ಹತಾ ಸುತ್ತಿನಿಂದಲೇ ಹೊರಬಿದ್ದರು. ಅವರು ಅರ್ಹತಾ ಸುತ್ತಿನಲ್ಲಿ 17ನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.