ಟೋಕಿಯೊ: ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚೀನಾ ಶೂಟರ್ಮೊದಲ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ಸ್ ವಿಭಾಗದಲ್ಲಿ ಚೀನಾದ ಯಾಂಗ್ ಚಿಯಾನ್ ಚಿನ್ನದ ಪದಕ ಗೆದ್ದಿದ್ದಾರೆ.
ಈ ಮೂಲಕ ಟೋಕಿಯೊ ಒಲಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಸ್ಪರ್ಧಿ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.
ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇಳವೆನ್ನಿಲ ವಾಳರಿವನ್ ಹಾಗೂ ಅಪೂರ್ವಿ ಚಾಂಡೇಲ ಅನುಕ್ರಮವಾಗಿ 16 ಹಾಗೂ 36ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ನಿರಾಸೆ ಅನುಭವಿಸಿದರು.
ಇದರೊಂದಿಗೆ ಚೀನಾ ತಂಡವು ಚಿನ್ನದ ಬೇಟೆಯನ್ನು ಪ್ರಾರಂಭಿಸಿದೆ. ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲುವ ರಾಷ್ಟ್ರಗಳಲ್ಲಿ ಚೀನಾ ಒಂದಾಗಿದೆ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ 26 ಚಿನ್ನ ಗೆದ್ದು ಮೂರನೇ ಸ್ಥಾನ ಪಡೆದಿತ್ತು. ಅಮೆರಿಕ 46 ಚಿನ್ನಗಳೊಂದಿಗೆ ಪ್ರಥಮ ಸ್ಥಾನ ಗೆದ್ದಿತ್ತು. ಈ ಬಾರಿಯೂ ಅಮೆರಿಕಕ್ಕೆ ನಿಕಟ ಪೈಪೋಟಿ ಒಡ್ಡುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.