ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ದಿನವಾದ ಶುಕ್ರವಾರ ಭಾರತೀಯ ಅಥ್ಲೀಟ್‌ಗಳು ಮತ್ತೆ ಎರಡು ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
ಷಾಟ್‌ಪಟ್ ಪಟು ತಜಿಂದರ್‌ಪಾಲ್ ಸಿಂಗ್ ತೂರ್ ಮತ್ತು ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಈ ಪೈಕಿ ತಜಿಂದರ್‌ಪಾಲ್ ಈ ಕೂಟದಲ್ಲಿ ಸತತ ಎರಡನೇ ಸಲ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ತಮ್ಮ ಎರಡನೇ ಪ್ರಯತ್ನದಲ್ಲಿ 20.23 ಮೀ. ದೂರ ಎಸೆಯುವ ಮೂಲಕ ತಜಿಂದರ್‌ಪಾಲ್ ಚಿನ್ನದ ಪದಕ ತಮ್ಮದಾಗಿಸಿದರು.
ಮತ್ತೊಂದೆಡೆ 3000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಪಾರುಲ್, ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇನ್ನು ಲಾಂಗ್ ಜಂಪರ್ ಶೈಲಿ ಸಿಂಗ್ ಅವರಿಗೆ ಚಿನ್ನ ಕೈತಪ್ಪಿದ್ದು, ಬೆಳ್ಳಿ ಪದಕ ಜಯಿಸಿದ್ದಾರೆ.
ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಐದು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಜಯಿಸಿದೆ.
ಚಿನ್ನ: 5
ಮಹಿಳೆಯರ 100 ಮೀ. ಹರ್ಡಲ್ಸ್: ಜ್ಯೋತಿ ಯೆರ‍್ರಾಜಿ
ಪುರುಷರ 1,500 ಮೀ. ಓಟ: ಅಜಯ್ ಕುಮಾರ್ ಸರೋಜ್
ಪುರುಷರ ಟ್ರಿಪಲ್ ಜಂಪ್: ಅಬ್ದುಲ್ಲಾ ಅಬೂಬಕ್ಕರ್
ಷಾಟ್‌ಪಟ್ ಪಟು: ತಜಿಂದರ್‌ಪಾಲ್ ಸಿಂಗ್ ತೂರ್
ಸ್ಟೀಪಲ್‌ಚೇಸ್: ಪಾರುಲ್ ಚೌಧರಿ
ಬೆಳ್ಳಿ: 1
ಲಾಂಗ್ ಜಂಪ್: ಶೈಲಿ ಸಿಂಗ್
ಕಂಚು: 3
ಮಹಿಳೆಯರ 400 ಮೀ. ಓಟ: ಐಶ್ವರ್ಯಾ ಮಿಶ್ರಾ
ಡೆಕಾಥ್ಲಾನ್: ತೇಜಸ್ವಿನ್ ಶಂಕರ್
ಪುರುಷರ 10,000 ಮೀ. ನಡಿಗೆ: ಅಭಿಷೇಕ್ ಪಾಲ್
ಒಟ್ಟು ಪದಕಗಳ ಸಂಖ್ಯೆ: 9
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.