ADVERTISEMENT

ಉದ್ದೀಪನ ಮದ್ದು ಸೇವನೆ: ಸ್ಪ್ರಿಂಟರ್ ದ್ಯುತಿ ಚಾಂದ್ ತಾತ್ಕಾಲಿಕ ಅಮಾನತು

ಪಿಟಿಐ
Published 18 ಜನವರಿ 2023, 22:52 IST
Last Updated 18 ಜನವರಿ 2023, 22:52 IST
ದ್ಯುತಿ ಚಾಂದ್‌– ಎಎಫ್‌ಪಿ ಚಿತ್ರ
ದ್ಯುತಿ ಚಾಂದ್‌– ಎಎಫ್‌ಪಿ ಚಿತ್ರ   

ನವದೆಹಲಿ: ಭಾರತದ ಸ್ಪ್ರಿಂಟರ್ ದ್ಯುತಿ ಚಾಂದ್‌ ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿದ್ದು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ಕಳೆದ ವರ್ಷ ಡಿಸೆಂಬರ್‌ 5ರಂದು ಭುವನೇಶ್ವರದಲ್ಲಿ ದ್ಯುತಿ ಅವರಿಂದ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿತ್ತು. ಇದರಲ್ಲಿ ನಿಷೇಧಿತ ಅಂಶ ಇರುವುದು ಪತ್ತೆಯಾಗಿತ್ತು. ದ್ಯುತಿ ಅವರು ಸ್ನಾಯು ಮತ್ತು ಮೂಳೆಗಳ ಬಲವರ್ಧನೆಗಾಗಿ ಈ ಪದಾರ್ಥವನ್ನು ಸೇವಿಸಿದ್ದರೆಂದು ಹೇಳಲಾಗಿದೆ.

ಜ. 3ರಂದು ರಾಷ್ಟ್ರೀಯ ಉದ್ದೀ ಪನ ಮದ್ದು ತಡೆ ಘಟಕವು ದ್ಯುತಿ ಅವರಿಗೆ ಬರೆದ ಪತ್ರದಲ್ಲಿ ನಿಷೇಧಿತ ಪದಾರ್ಥ ಸೇವಿಸಿರುವುದನ್ನು ತಿಳಿಸಿದೆ.

ADVERTISEMENT

ದ್ಯುತಿ ಅವರು, ಜಕಾರ್ತದಲ್ಲಿ 2018ರಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದ 100 ಮತ್ತು 200 ಮೀಟರ್ಸ್ ಓಟಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಸದ್ಯ ‘ಎ’ ಸ್ಯಾಂಪಲ್ ಪರೀಕ್ಷೆಯಲ್ಲಿ ಮದ್ದಿನ ಅಂಶ ಇರುವುದು ಕಂಡುಬಂದಿದೆ. ಒಂದು ವೇಳೆ ಬಿ ಸ್ಯಾಂಪಲ್‌ನಲ್ಲೂ ಸಾಬೀತಾದರೆ ದ್ಯುತಿ ಅವರು ನಾಲ್ಕು ವರ್ಷಗಳ ಅವಧಿಗೆ ಅಮಾನತಾಗುವ
ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.