ADVERTISEMENT

ಕಾಮನ್ವೆಲ್ತ್ ಚೆಸ್‌: ಶುಭಿ ಗುಪ್ತಾಗೆ ಎರಡು ಪದಕ

ಪಿಟಿಐ
Published 10 ಸೆಪ್ಟೆಂಬರ್ 2024, 19:30 IST
Last Updated 10 ಸೆಪ್ಟೆಂಬರ್ 2024, 19:30 IST
ಚೆಸ್‌
ಚೆಸ್‌   

ನವದೆಹಲಿ: ಭಾರತದ ಶುಭಿ ಗುಪ್ತಾ ಅವರು ಶ್ರೀಲಂಕಾದ ಕಲುತರಾದಲ್ಲಿ ನಡೆದ ಕಾಮನ್ವೆಲ್ತ್ ಚೆಸ್‌ ಚಾಂಪಿಯನ್‌ಷಿಪ್‌ನ 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಮತ್ತು 20 ವರ್ಷದೊಳಗಿನವರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಮಹಿಳಾ ಫಿಡೆ ಮಾಸ್ಟರ್ ಆಗಿರುವ ಶುಭಿ, 19 ವರ್ಷದೊಳಗಿನವರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಅವರು 16 ವರ್ಷದೊಳಗಿನವರ ವಿಭಾಗದಲ್ಲಿ ಅಜೇಯ ಪ್ರದರ್ಶನ ನೀಡಿ, ಏಳು ಪಂದ್ಯಗಳನ್ನು ಗೆದ್ದು, ಎರಡನ್ನು ಡ್ರಾ ಮಾಡಿಕೊಂಡು ಸಂಭವನೀಯ ಒಂಬತ್ತರಲ್ಲಿ ಎಂಟು ಪಾಯಿಂಟ್ಸ್ ಕಲೆಹಾಕಿದರು. ಭಾರತದ ಇನ್ನಿಬ್ಬರು ಆಟಗಾರ್ತಿಯರಾದ ಮೃತಿಕಾ ಮಲಿಕ್‌ (7 ಪಾಯಿಂಟ್ಸ್‌) ಮತ್ತು ಯಶ್ವಿ ಜೈನ್‌ (6.5) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

20 ವರ್ಷದೊಳಗಿನವರ ಬಾಲಕಿ ಯರ ವಿಭಾಗದಲ್ಲೂ ಮೂರನೇ ಸ್ಥಾನ ಗಳಿಸಿದರು.

ADVERTISEMENT

ಉತ್ತರ ಪ್ರದೇಶದ ಗಾಜಿಯಾಬಾದ್‌ ನವರಾದ ಶುಭಿ ₹ 1ಲಕ್ಷ ಬಹುಮಾನ ಪಡೆದಿದ್ದಾರೆ.

ಈ ಹಿಂದೆ ಅವರು ಕಾಮನ್ವೆಲ್ತ್‌ ಯೂತ್ ಚಾಂಪಿಯನ್‌ಷಿಪ್‌ನ 12 ವರ್ಷದೊಳಗಿವನವರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಎರಡು ವರ್ಷಗಳ ಹಿಂದೆ ವಿಶ್ವ ಕೆಡೆಟ್‌ ಚಾಂಪಿಯನ್‌ಷಿಪ್‌ ಅನ್ನೂ ಗೆದ್ದುಕೊಂಡಿದ್ದರು.

ಓಪನ್ ವಿಭಾಗದಲ್ಲಿ ಭಾರತದ ಎಸ್‌.ಪಿ.ಸೇತುರಾಮನ್ ಮತ್ತು ಎನ್‌.ಆರ್‌.ವಿಘ್ನೇಶ್ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಪಡೆದರು. ಅವರು 9 ಸುತ್ತುಗಳಿಂದ ತಲಾ ಏಳು ಪಾಯಿಂಟ್ಸ್ ಸಂಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.