ADVERTISEMENT

Pro Kabaddi: ಯು ಮುಂಬಾ – ಬೆಂಗಾಲ್ ಪಂದ್ಯ ರೋಚಕ ಟೈ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:27 IST
Last Updated 26 ಅಕ್ಟೋಬರ್ 2024, 16:27 IST
ಬೆಂಗಾಲ್ ವಾರಿಯರ್ಸ್ ಆಟಗಾರ, ಎದುರಾಳಿ ಮುಂಬಾ ತಂಡದ ರೇಡರ್‌ನ ಕಾಲೆಳೆಯಲು ಯತ್ನಿಸಿದ್ದು ಹೀಗೆ...
ಬೆಂಗಾಲ್ ವಾರಿಯರ್ಸ್ ಆಟಗಾರ, ಎದುರಾಳಿ ಮುಂಬಾ ತಂಡದ ರೇಡರ್‌ನ ಕಾಲೆಳೆಯಲು ಯತ್ನಿಸಿದ್ದು ಹೀಗೆ...   

ಹೈದರಾಬಾದ್: ಪಂದ್ಯದ ಕೊನೆಯ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಟೈ ಸಾಧಿಸಿತು. ಇದರಿಂದಾಗಿ ಉಭಯ ತಂಡಗಳು ತಲಾ 3 ಅಂಕ ಹಂಚಿಕೊಂಡವು.

ಇದು ಹಾಲಿ ಟೂರ್ನಿಯಲ್ಲಿ ಟೈ ಆದ ಮೊದಲ ಪಂದ್ಯ. ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಎರಡೂ ತಂಡಗಳು 31-31ರಲ್ಲಿ ಸಮಬಲ
ಸಾಧಿಸಿದವು.

ಪಂದ್ಯ ಮುಕ್ತಾಯಕ್ಕೆ 2 ನಿಮಿಷಗಳಿರುವಾಗ 31-29ರಲ್ಲಿ ಮುನ್ನಡೆ ಹೊಂದಿದ್ದ ಮುಂಬಾ ಇದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಮುಂಬಾ ತಂಡದ ಪರ ಮಂಜೀತ್ (7 ಅಂಕ), ಸೋಮವೀರ್ (5 ಅಂಕ), ರೋಹಿತ್ ರಾಘವ್ (4 ಅಂಕ) ಗಮನ ಸೆಳೆದರು.

ADVERTISEMENT
ಮುಂಬಾ ಆಟಗಾರರು ಎದುರಾಳಿ ರೇಡರ್‌ನನ್ನು ಯಶಸ್ವಿಯಾಗಿ ಕ್ಯಾಚ್‌ ಮಾಡಿದರು.

ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ (8 ಅಂಕ), ಮಯೂರ್ ಕದಂ (6) ಉತ್ತಮ ಪ್ರದರ್ಶನ ನೀಡಿದರು.

ವಿರಾಮದ ವೇಳೆಗೆ ಬೆಂಗಾಲ್ ಏಳು ಅಂಕಗಳಿಂದ ಮುಂದಿತ್ತು. ಆದರೆ ಚೇತರಿಸಿದ ಮುಂಬೈ ಸಮಬಲ ಮಾಡಿತಲ್ಲದೇ, ಎದುರಾಳಿಯನ್ನು ಒಮ್ಮೆ ಆಲೌಟ್‌ ಮಾಡಿ ಅಲ್ಪಮುನ್ನಡೆ ಪಡೆಯಿತು. ಆದರೆ ಕೊನೆಗಳಿಗೆಯಲ್ಲಿ ಒತ್ತಡಕ್ಕೀಡಾಗಿ ಟೈಗೆ ತೃಪ್ತಿಪಡಬೇಕಾಯಿತು.

ಭಾನುವಾರದ ಪಂದ್ಯಗಳು:

ಜೈಪುರ ಪಿಂಕ್ ಪ್ಯಾಂಥರ್ಸ್– ತಮಿಳ್ ತಲೈವಾಸ್ (ರಾತ್ರಿ 8.00).

ಯು.ಪಿ. ಯೋಧಾಸ್ – ಗುಜರಾತ್ ಜೈಂಟ್ಸ್ (ರಾತ್ರಿ 9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.