ಲಂಡನ್: ನೆದರ್ಲೆಂಡ್‌ನಲ್ಲಿ ನಡೆದ ಯುರೋಪಿಯನ್ ಗರ್ಲ್ಸ್ ಒಲಿಂಪಿಯಾಡ್‌ನಲ್ಲಿ ಇನ್‌ಫಾರ್ಮ್ಯಾಟಿಕ್ಸ್ ಸ್ಪರ್ಧೆಯಲ್ಲಿ ಲಂಡನ್‌ನ 17 ವರ್ಷದ ಬಾಲಕಿ ಆನ್ಯಾ ಗೋಯಲ್ ಭಾರತ ತಂಡದ ಪರವಾಗಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಅಲೆನ್ಸ್ ಶಾಲೆಯ ವಿದ್ಯಾರ್ಥಿನಿ ಆನ್ಯಾ ಗೋಯಲ್ ಅವರು ಸುಮಾರು 50 ರಾಷ್ಟ್ರಗಳು ಭಾಗವಹಿಸಿದ್ದ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.
‘ಭಾರತದ ಪರವಾಗಿ ಆಟವಾಡಿ ಬೆಳ್ಳಿ ಪದಕ ಗೆದ್ದಿರುವುದು ಸಂತಸ ತಂದಿದೆ’ ಎಂದು ಗೋಯಲ್ ಹೇಳಿದ್ದಾರೆ.
‘ಸ್ಪರ್ಧೆಯಲ್ಲಿ ತಲಾ ಐದು ತಾಸುಗಳ ಎರಡು ಸೆಷನ್ಸ್ ಇದ್ದವು. ಪ್ರತಿ ಸೆಷನ್‌ನಲ್ಲಿಯೂ ನಾಲ್ಕು ಪ್ರಾಬ್ಲಂಗಳನ್ನು ನೀಡಲಾಗಿತ್ತು. ಅವು ಹೆಚ್ಚು ಸಂಕೀರ್ಣವಾಗಿದ್ದವು. ಕೋಡಿಂಗ್ ಅನ್ವಯಿಸುವುದು ಹೆಚ್ಚು ಸವಾಲಾಗಿತ್ತು. ಐದು ಗಂಟೆಯೂ ಬಹಳ ಬೇಗ ಸಾಗುತ್ತಿತ್ತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.