ADVERTISEMENT

ವಿಶ್ವ ಅಂಧರ ಚೆಸ್‌ ಚಾಂಪಿಯನ್‌ಷಿಪ್‌: ಲುಬೋವ್, ಜೂನಿಯಾಗೆ ಕಿರೀಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 23:30 IST
Last Updated 6 ಅಕ್ಟೋಬರ್ 2024, 23:30 IST
ಉಕ್ರೇನ್‌ ಝಿಲ್ಟ್‌ಝೋವಾ ಲಿಸೆಂಕೊ ಲುಬೋವ್
ಉಕ್ರೇನ್‌ ಝಿಲ್ಟ್‌ಝೋವಾ ಲಿಸೆಂಕೊ ಲುಬೋವ್   

ಬೆಂಗಳೂರು: ನಿರೀಕ್ಷೆಯಂತೆ ಉಕ್ರೇನ್‌ ಝಿಲ್ಟ್‌ಝೋವಾ ಲಿಸೆಂಕೊ ಲುಬೋವ್ ಮತ್ತು ಪೋಲೆಂಡ್‌ನ ಸಾಲೊಮನ್ ಜೂಲಿಯಾ ಅವರು ಐಬಿಸಿಎ 12ನೇ ವಿಶ್ವ ಅಂಧರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಜೂನಿಯರ್‌ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ನಗರದ ಚಾನ್ಸರಿ ಪೆವಿಲಿಯನ್‌ನಲ್ಲಿ ಭಾನುವಾರ ಮುಕ್ತಾಯವಾದ ಟೂರ್ನಿಯ ಒಂಬತ್ತು ಸುತ್ತಿನಲ್ಲಿ ಗರಿಷ್ಠ 9 ಪಾಯಿಂಟ್ಸ್‌ಗಳನ್ನು ಸಂಪಾದಿಸಿದ ಅವರು 12ನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಅವರು ಶನಿವಾರ ಎಂಟು ಸುತ್ತಿನ ಮುಕ್ತಾಯಕ್ಕೆ ಪ‍್ರಶಸ್ತಿಯನ್ನು ಖಚಿತಪಡಿಸಿಕೊಂಡಿದ್ದರು.

ಪೋಲೆಂಡ್‌ನ ಇಗೆಮನ್ ಎಮಿಲಿಯಾ 7.5 ಅಂಕಗಳೊಂದಿಗೆ ಬೆಳ್ಳಿ ಗೆದ್ದರೆ, ಪೋಲೆಂಡ್‌ನ ಮತ್ತೊಬ್ಬ ಸ್ಪರ್ಧಿ ಟ್ರಿಯಾನ್‌ಸ್ಕಾ ಎಮಿಲಿಯಾ 7 ಪಾಯಿಂಟ್‌ಗಳೊಂದಿಗೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ADVERTISEMENT

ಜೂನಿಯರ್‌ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ಸಾಲೊಮನ್ ಜೂಲಿಯಾ ಮತ್ತು ಅಗ್ರ ಶ್ರೇಯಾಂಕದ ಪೋಲೆಂಡ್‌ನ ರೇಸಿಸ್ ಮೈಕೆಲ್ ಅವರ ಮಧ್ಯೆ ಆರಂಭಿಕ ಸುತ್ತಿನಿಂದಲೂ ತೀವ್ರ ಪೈಪೋಟಿ ಇತ್ತು. ಮೂರನೇ ಸುತ್ತಿನಲ್ಲಿ ಮುಖಾಮುಖಿಯಾಗಿದ್ದಾಗ ಡ್ರಾ ಮಾಡಿಕೊಂಡಿದ್ದ ಇವರು, ಅಂತಿಮ ಸುತ್ತಿನ ವರೆಗೂ ಅಗ್ರಸ್ಥಾನಕ್ಕೆ ಪೈಪೋಟಿ ನಡೆಸಿದ್ದರು.

ಅಂತಿಮವಾಗಿ ಜೂಲಿಯಾ ಅರ್ಧ ಪಾಯಿಂಟ್ ಅಂತರದಲ್ಲಿ ಚಿನ್ನ ಗೆದ್ದರೆ, ರೇಸಿಸ್‌ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಕಜಕಸ್ತಾನದ ಕುವಾನಶುಲಿ ನುರ್ಗಿಸಾ ಕಂಚಿನ ಪದಕ ಗೆದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.