ADVERTISEMENT

ಸ್ನೂಕರ್: ಲೀಗ್‌ ಹಂತಕ್ಕೆ ವೀರೇಶ್‌ ಲಗ್ಗೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 19:31 IST
Last Updated 11 ಸೆಪ್ಟೆಂಬರ್ 2021, 19:31 IST
ವೀರೇಶ್‌
ವೀರೇಶ್‌   

ಬೆಂಗಳೂರು: ಅಂತಿಮ ಸುತ್ತಿನಲ್ಲಿ ಎಂ.ಎಸ್‌.ಅರುಣ್ ಎದುರು ಜಯ ಗಳಿಸಿದ ಎಚ್‌.ಡಿ.ವೀರೇಶ್ ಅವರು ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ ಆಶ್ರಯದ ರಾಜ್ಯ ರ‍್ಯಾಂಕಿಂಗ್ ಬಿಲಿಯರ್ಡ್ಸ್‌ ಮತ್ತು ಸ್ನೂಕರ್ ಟೂರ್ನಿಯ ಲೀಗ್‌ ಹಂತಕ್ಕೆ ಲಗ್ಗೆ ಇರಿಸಿದರು.

ಶುಕ್ರವಾರ ನಡೆದ ನಾಕೌಟ್ ಹಣಾಹಣಿಯಲ್ಲಿ ವೀರೇಶ್ 63-07, 70-48, 68-43ರಲ್ಲಿ ಅರುಣ್ ವಿರುದ್ಧ ಜಯ ಗಳಿಸಿದರು. ಮೈಕೆಲ್ ರೆಬೆಲ್ಲೊ 71-54, 70-05, 42-48, 58-34ರಲ್ಲಿ ಪ್ರದೀಪ್ ಗುರಜಾಲ ವಿರುದ್ಧ ಮತ್ತು ಅಕ್ಮಲ್ ಹುಸೇನ್63-25, 76-46, 82-35ರಲ್ಲಿ ಜುಲ್ಫಿಕರ್ ಅಹಮ್ಮದ್ ವಿರುದ್ಧ ಗೆಲುವು ಸಾಧಿಸಿದರು.

ಸಶಾ ಸಂಬಿ 70-56, 62-17, 62-43ರಲ್ಲಿ ಎಂ.ಮೂರ್ತಿ ಅವರನ್ನು, ಸೀನ್ ಡೇವಿಸ್‌ 55-12, 72-40, 69-20ರಲ್ಲಿ ಮೊಹಮ್ಮದ್ ಅಡ್ನಾನ್‌ ಅವರನ್ನು, ಮೊಹಮ್ಮದ್ ಶಹನಾಜ್‌ 69-25, 58-61, 52-39, 79-37ರಲ್ಲಿ ಮಹೇಶ್ ಆದಿತ್ಯ ಅವರನ್ನು ಮಣಿಸಿದರು.

ADVERTISEMENT

ಮೂರನೇ ಸುತ್ತಿನ ಪಂದ್ಯದಲ್ಲಿ ಮೊಹಮ್ಮದ್ ಶಹನಾಜ್ 3–0ಯಿಂದ ಜಯ ಕೃಷ್ಣ ವಿರುದ್ಧ, ಮಹೇಶ್ ಆದಿತ್ಯ 3–1ರಲ್ಲಿ ಕೈಲಾಶ್‌ ಭತೀಜಾ ವಿರುದ್ಧ, ವೀರೇಶ್ ಎಚ್‌.ಡಿ 3–1ರಲ್ಲಿ ನವೀದ್ ಪಾಶಾ ವಿರುದ್ಧ, ಎಂ.ಎಸ್‌.ಅರುಣ್ 3–0ಯಿಂದ ಬಾಲಾಜಿ ದೀಕ್ಷಿತ್ ವಿರುದ್ಧ, ಸಶಾ ಸಂಬಿ 3–2ರಲ್ಲಿ ಎಸ್‌.ರಾಜು ವಿರುದ್ಧ, ಸೀನ್ ಡೇವಿಸ್ 3–0ಯಿಂದ ಸುಶೀಲ್ ದುಬೆ ವಿರುದ್ಧ, ಮೊಹಮ್ಮದ್ ಅಡ್ನಾನ್ 3–2ರಲ್ಲಿ ವರುಣ್ ಕುಮಾರ್ ವಿರುದ್ಧ, ಎಂ.ಮೂರ್ತಿ 3–1ರಲ್ಲಿ ಹನುಮಂತು ವಿರುದ್ಧ ಜಯ ಗಳಿಸಿದರು.

ತೌಸಿಫ್ ಖಾನ್ 3–1ರಲ್ಲಿ ಆದಿತ್ಯ ರಜಾವತ್‌ ವಿರುದ್ಧ, ಬಿ.ಸಿ.ಕಾರ್ತಿಕ್ 3–1ರಲ್ಲಿ ಹರೀಶ್ ಎ.ಆರ್.ವಿರುದ್ಧ, ಪ್ರವೀಣ್ ಮಾನೆ 3–2ರಲ್ಲಿ ಜಸೀಮ್ ತವಿನ್ ವಿರುದ್ಧ, ಕಿರಣ್ ರಾಜ್‌ 3–2ರಲ್ಲಿ ಪೃಥ್ವಿ ವಿರುದ್ಧ, ಪ್ರದೀಪ್‌ 3–1ರಲ್ಲಿ ಮನೀಷ್ ವಿರುದ್ಧ, ಮೈಕೆಲ್‌ 3–0ಯಿಂದ ಮನೋಜ್ ಪ್ರತಾಪ್ ವಿರುದ್ಧ, ಜುಲ್ಫಿಕರ್ 3–0ಯಿಂದ ಆಲೋಕ್‌ ಅಯ್ಯಂಗಾರ್ ವಿರುದ್ಧ, ಅಕ್ಮಲ್ ಹುಸೇನ್‌ 3–0ಯಿಂದ ಫ್ರಾನ್ಸಿಸ್ ಜೋ ವಿರುದ್ಧ, ಯುಗಂಧರ್‌ 3–0ಯಿಂದ ಅಫ್ಸಾನ್ ಸೇಠ್ ವಿರುದ್ಧ, ಯೋಗೇಶ್‌ 3–0ಯಿಂದ ಯಾದವ್ ವಿರುದ್ಧ, ಪ್ರಭಾಕರ್‌ 3–0ಯಿಂದ ನವೀನ್ ಕುಮಾರ್ ವಿರುದ್ಧ, ನದೀಮ್ 3–0ಯಿಂದ ಉದಯ್ ದೇವ್ ವಿರುದ್ಧ ಗೆಲುವು ದಾಖಲಿಸಿದರು.

ನಿಖಿಲ್ ದೇವ್ 3–2ರಲ್ಲಿ ಜರ್ಮೈನ್ ಗಿರೀಶ್‌ ಎದುರು, ಮೊಹಮ್ಮದ್ ತನ್ವೀರ್ 3–1ರಲ್ಲಿ ಪಾರ್ಥಿಬನ್ ಎದುರು, ಸಂತೋಷ್‌ 3–0ಯಿಂದ ವೆಂಕಟ್‌ ಎದುರು, ಇರ್ಫಾನ್ ಖಾನ್ 3–0ಯಿಂದ ಶ್ರೀವತ್ಸ ಎದುರು, ಮಧುಚಂದ್ರ 3–0ಯಿಂದ ಶ್ರೀಧರ್ ಎದುರು, ಆದಿಲ್ ಶೆರಾಜಿ 3–0ಯಿಂದ ಜುಮೇರ್ ಜಹೀರ್‌ ಎದುರು, ಸಂದೀಪ್ ಪಾಟೀಲ್ 3–2ರಲ್ಲಿ ಆನಂದ್ ಎದುರು, ಬಿ.ವಿ.ಎಸ್‌.ಮೂರ್ತಿ 3–0ಯಿಂದ ಅಹಮ್ಮದ್ ಸೈಯದ್‌ ಎದುರು, ಸುಪ್ರೀತ್‌ 3–2ರಲ್ಲಿ ಮಯಂಕ್ ಕಾರ್ತಿಕ್ ಎದುರು ಗೆಲುವು ದಾಖಲಿಸಿದರು.

ಸುನಿಲ್ ಕುಮಾರ್ ವಿರುದ್ಧ ವೈಭವ್‌ ವಿವೇಕ್‌ 3–2ರಲ್ಲಿ, ತಾಂಡವೇಶ್ವರ್‌ ವಿರುದ್ಧ ಸೂಫಿಯಾನ್ ಅಹಮ್ಮದ್ 3–1ರಲ್ಲಿ, ರಿಹಾನ್ ವಿರುದ್ಧ ನಾಗರಾಜ್ 3–0ಯಿಂದ, ಸೈಯದ್‌ ಇಮ್ರಾನ್ ವಿರುದ್ಧ ಶೋಯೆಬ್‌ ಗರಗ 3–0ಯಿಂದ, ಮಧು ವಿರುದ್ಧ ಅಭಿಜಿತ್ ಮೋರೆ 3–1ರಲ್ಲಿ, ರಾಕೇಶ್‌ ವಿರುದ್ಧ ನಿಖಿಲ್ ಪಿಸೆ 3–0ಯಿಂದ, ದೀಪಕ್ ಮಾರ್ಟಿನ್ ವಿರುದ್ಧ ರೋಹಿತ್‌ 3–2ರಲ್ಲಿ, ಸುದಿನ್‌ ವಿರುದ್ಧ ಶಿವರಾಂ 3–2ರಲ್ಲಿ, ಪುಗಳ್‌ ವಿರುದ್ಧ ಆಲ್ಡ್ರಿನ್‌ ಮೋಸೆಸ್ 3–1ರಲ್ಲಿ, ಪ್ರದೀಪ್ ವಿರುದ್ಧ ಅನಿಲ್ ಕುಮಾರ್ 3–2ರಲ್ಲಿ ಜಯ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.