ADVERTISEMENT

ಕ್ರೀಡಾ ಕ್ಷೇತ್ರದಿಂದ ಬ್ರಿಜ್ ಭೂಷಣ್ ಹೊರಹಾಕಿ: ಮೋದಿಗೆ ವಿನೇಶ್, ಸಾಕ್ಷಿ ಮನವಿ

ಪಿಟಿಐ
Published 19 ಮಾರ್ಚ್ 2024, 16:22 IST
Last Updated 19 ಮಾರ್ಚ್ 2024, 16:22 IST
ವಿನೇಶಾ ಫೋಗಾಟ್
ವಿನೇಶಾ ಫೋಗಾಟ್   

ನವದೆಹಲಿ; ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಂತಹ ದಬ್ಬಾಳಿಕೆಗಾರರನ್ನು ಭಾರತದ ಕ್ರೀಡಾ ಕ್ಷೇತ್ರದಿಂದ ಹೊರಹಾಕಲು ಏನಾದರೂ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿರುವ ಪ್ರತಿಭಟನನಿರತ  ಕುಸ್ತಿಪಟುಗಳಾದ ವಿನೇಶಾ ಫೋಗಾಟ್‌ ಮತ್ತು ಸಾಕ್ಷಿ ಮಲಿಕ್, ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)ಗೆ ಆಡಳಿತಾತ್ಮಕ ಅಧಿಕಾರ ಹಸ್ತಾಂತರಿಸಿರುವ ಐಒಎ ನಿರ್ಧಾರವನ್ನು ಖಂಡಿಸಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಇಬ್ಬರು ಕುಸ್ತಿಪಟುಗಳು ಪ್ರಧಾನಿ  ಅವರು ಮಧ್ಯಪ್ರವೇಶಿಸಬೇಕು ಎಂದು ಎಕ್ಸ್‌ನಲ್ಲಿ ಮನವಿ ಮಾಡಿದ್ದಾರೆ.  

‘ಪ್ರಧಾನಿ ಸ್ಪಿನ್ ಒಬ್ಬ ಮಾಸ್ಟರ್, ತಮ್ಮ ಪ್ರತಿಸ್ಪರ್ಧಿಗಳ ಭಾಷಣಗಳನ್ನು ಎದುರಿಸಲು ‘ಮಹಿಳಾ ಶಕ್ತಿ’ ಯನ್ನು ಬಳಸುವ ಮೂಲಕ  ಹೇಗೆ ತಿರುಗೇಟು ನೀಡಬೇಕು ಎಂಬುದನ್ನು ತಿಳಿದಿದ್ದಾರೆ. ನರೇಂದ್ರ ಮೋದಿ ಅವರೇ ಮಹಿಳಾ ಶಕ್ತಿಯ ನಿಜವಾದ ಸತ್ಯವನ್ನು ನಾವು ತಿಳಿದುಕೊಳ್ಳೋಣ’ ಎಂದು ಮುಂದಿನ ತಿಂಗಳು 50 ಕೆ.ಜಿ ವಿಭಾಗದಲ್ಲಿ ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ಸಜ್ಜಾಗಿರುವ ಫೋಗಾಟ್‌ ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಮಹಿಳಾ ಕುಸ್ತಿಪಟುಗಳನ್ನು ಶೋಷಿಸಿದ ಬ್ರಿಜ್ ಭೂಷಣ್ ಮತ್ತೆ ಕುಸ್ತಿಯ ಚುಕ್ಕಾಣಿ ಹಿಡಿದಿದ್ದಾರೆ. ನೀವು (ಪ್ರಧಾನಿ) ಮಹಿಳೆಯರನ್ನು ಗುರಾಣಿಗಳಾಗಿ ಬಳಸುವುದಲ್ಲದೆ, ಅಂತಹ ದಬ್ಬಾಳಿಕೆಗಾರರನ್ನು ದೇಶದ ಕ್ರೀಡಾ ಸಂಸ್ಥೆಗಳಿಂದ ಹೊರಹಾಕಲು ಏನಾದರೂ ಮಾಡುತ್ತೀರಿ ಎಂದು ಆಶಿಸುತ್ತೇವೆ’ ಎಂದ ಹೇಳಿದ್ದಾರೆ. 

ಒಲಿಂಪಿಕ್ ಪದಕ ವಿಜೇತ ಸಾಕ್ಷಿ ಮಲಿಕ್ ಕೂಡ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಪದಾಧಿಕಾರಿಗಳು ತಾವು ಕಾನೂನಿಗಿಂತ ಮೇಲಿರುವಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

‘ಈ ದೇಶದ ಶಕ್ತಿಶಾಲಿ ಜನರು ಶತಮಾನಗಳಿಂದ ಮಹಿಳೆಯರ ಗೌರವದೊಂದಿಗೆ ಆಟವಾಡಿದ್ದಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.  ಶ್ರೀಮಂತ ದುಷ್ಕರ್ಮಿ ಎಷ್ಟು ಶಕ್ತಿಶಾಲಿ ಎಂದರೆ ಅವನು ಸರ್ಕಾರ, ಸಂವಿಧಾನ ಮತ್ತು ನ್ಯಾಯಾಂಗಕ್ಕಿಂತ ಮೇಲಿದ್ದಾನೆ’ ಎಂದು ಅವರು ಆರೋಪಿಸಿದ್ದಾರೆ. 

ಸಾಕ್ಷಿ ಮಲಿಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.