ಹುಬ್ಬಳ್ಳಿ: ಒಡಿಶಾದ ಭುವನೇಶ್ವರದಲ್ಲಿ ಜೂನ್ 9ರಿಂದ 12ರವರೆಗೆ ನಡೆದ ಜನಜಾತಿಯ ಖೇಲ್ ಮಹೋತ್ಸವ ವಾಲಿಬಾಲ್ ಟೂರ್ನಿಯಲ್ಲಿ ರಾಜ್ಯದ ಪುರುಷರ ಮತ್ತು ಮಹಿಳೆಯರ (ಪರಿಶಿಷ್ಟ ಪಂಗಡ) ತಂಡಗಳು ಚಿನ್ನದ ಪದಕ ಗಳಿಸಿವೆ.
ಪುರುಷರ ತಂಡವು 18–25, 25–16, 20–25, 15–11ರಿಂದ ಉತ್ತರಾಖಂಡ ತಂಡವನ್ನು ಮಣಿಸಿತು. ಮಹಿಳೆಯರ ತಂಡವು 25–21, 25–10ರಿಂದ ಒಡಿಶಾ ತಂಡದ ವಿರುದ್ಧ ಗೆಲುವು ಸಾಧಿಸಿತು.
‘ಎರಡೂ ತಂಡಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಪುರುಷರ ತಂಡಕ್ಕೆ ಎಂ.ಆರ್.ರಮೇಶ್ ಮತ್ತು ಮಹಿಳೆಯರ ತಂಡಕ್ಕೆ ಗೀತಾ ತರಬೇತಿ ನೀಡಿದರು’ ಎಂದು ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್‌ನ ಅಡ್‌ಹಾಕ್ ಸಮಿತಿಯ ಅಧ್ಯಕ್ಷ ಎಲ್.ಪಿ.ಅಂಟೋನಿ ಜೋಸೆಫ್ ಮತ್ತು ಸದಸ್ಯ ಎಂ.ಎಂ.ಗುಡಿ ತಿಳಿಸಿದ್ದಾರೆ.
ಪುರುಷರ ತಂಡದಲ್ಲಿ ಮನು ಬಿ.ಎಲ್., ಯಶವಂತ್ ನಾಯಕ್ ಪಿ., ಧನುಶ್ ಎಂ.ಎನ್., ಸಂದೇಶ್ ಜೆ.ಆರ್., ನಂದೀಶ್ ಎನ್., ಸಂತೋಷ್, ಸುಬ್ರಮಣಿ, ಶಿವಕುಮಾರ್, ಟಿ.ಮಂಜುನಾಥ, ನವೀನ್, ಅಶೋಕ್, ಅಮರೇಶ್ ಇದ್ದರು.
ಮಹಿಳೆಯರ ತಂಡದಲ್ಲಿ ಝಾನ್ಸಿ, ಅಂಜಲಿ, ಭವ್ಯಾ, ಇಂದುಮತಿ, ಕವಿತಾ, ಸವಿತಾ, ದೀಕ್ಷಿತಾ, ಶಿಲ್ಪಾ, ಲೇಖನಾ, ಸಿಂಚನಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.