ಚೆನ್ನೈ: ಬೆಂಗಳೂರು ಟಾರ್ಪಿಡೋಸ್ ತಂಡ, ಮೂರನೇ ಆವೃತ್ತಿಯ ರುಪೇ ಪ್ರೈಮ್ ವಾಲಿಬಾಲ್ ಲೀಗ್‌ನ ಸೂಪರ್ ಫೈವ್ ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಂಬೈ ಮಿಟಿಯೋರ್ಸ್ ವಿರುದ್ಧ ಶನಿವಾರ ಜಯಗಳಿಸಿತು.
ಈ ಪಂದ್ಯ ಸೋತಿದ್ದಲ್ಲಿ ಬೆಂಗಳೂರು ಟಾರ್ಪಿಡೋಸ್ ತಂಡ ಹೊರಬೀಳುತಿತ್ತು.
ಆದರೆ ಬೆಂಗಳೂರು ತಂಡ ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಮಹತ್ವದ ಪಂದ್ಯದಲ್ಲಿ ಮುಂಬೈ ಮಿಟಿಯೋರ್ಸ್ ತಂಡವನ್ನು 15-13, 16-14, 15-10 ಸೋಲಿಸಿತು. ಜಿಷ್ಣು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಜಿಷ್ಣು ಅವರ ಬ್ಲಾಕ್‌ಗಳು ಟಾರ್ಪಿಡೋಸ್ ತಂಡಕ್ಕೆ ಆರಂಭಿಕ ಮುನ್ನಡೆ ಪಡೆಯಲು ನೆರವಾದವು, ಆದರೆ ಮುಂಬೈ ತಂಡ ಅಮಿತ್ ಗುಲಿಯಾ ಅವರ ದಾಳಿಯ ಮೂಲಕ ಕೆಲಮಟ್ಟಿಗೆ ಪ್ರತಿಹೋರಾಟ ತೋರಿತು.
ದಾಳಿಯಲ್ಲಿ ಶುಭಂ ಅವರ ವೈಫಲ್ಯ ಮುಂಬೈ ತಂಡಕ್ಕೆ ಹಿನ್ನಡೆ ಉಂಟುಮಾಡಿತು. ಬೆಂಗಳೂರು ತಂಡ ಎದುರಾಳಿಗಳ ಕೋರ್ಟ್‌ನ ಮಧ್ಯಭಾಗ ಗುರಿಯಾಗಿಸಿತು. ದಾಳಿಯಲ್ಲಿ ಜಿಷ್ಣು ಅವರನ್ನು ಹೆಚ್ಚು ತೊಡಗಿಸಿಕೊಳ್ಳಲು ಪ್ರಾರಂಭಿಸಿತು. ಮುಂಬೈಗೆ ಅಂಕ ಪಡೆಯಲು ಅವಕಾಶ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.