ನೈರೋಬಿ:ಮಹಿಳಾ ಅಥ್ಲೀಟ್‌ಗಳಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ನಿಗದಿತ ಪ್ರಮಾಣದಲ್ಲಿ ಇರಬೇಕು ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ಗಳ ಸಂಸ್ಥೆ ಈಚೆಗೆ ನೀಡಿದ ಆದೇಶದಿಂದಾಗಿ ಆತಂಕ ಉಂಟಾಗಿದೆ ಎಂದು ಕಿನ್ಯಾದ ಮಧ್ಯಮ ದೂರ ಓಟಗಾರ್ತಿ ಮಾರ್ಗರೆಟ್ ನೈರೇರ ವಾಂಬುಯಿ ಹೇಳಿದರು.
‘ಹೊಸ ನಿಯಮಾವಳಿಗಳಿಂದಾಗಿ ಮುಂದೆ ಅಂತರರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವೋ ಇಲ್ಲವೋ ಎಂಬ ಸಂದೇಹ ಕಾಡತೊಡಗಿದೆ’ ಎಂದು ನೈರೋಬಿ ಹೊರವಲಯದ ನಾಂಗ್ ಗುಡ್ಡದ ಬಳಿಯಲ್ಲಿ ಅಭ್ಯಾಸ ಮಾಡುತ್ತಿದ್ದ 24 ವರ್ಷದ ವಾಂಬುಯಿ ಹೇಳಿದರು.
ನಾನ್‌ಜಿಂಗ್‌ನಲ್ಲಿ ಮುಂದಿನ ವಾರ ನಡೆಯಲಿರುವ ಐಎಎಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅವರು ಸಿದ್ಧರಾಗಿದ್ದರು. ಆದರೆ ಅಥ್ಲೆಟಿಕ್ ಫೆಡರೇಷನ್‌ಗಳ ಸಂಸ್ಥೆಯ ತೀರ್ಪಿನಿಂದಾಗಿ ಅವರು ನಾನ್‌ಜಿಂಗ್‌ಗೆ ತೆರಳುವುದು ಇನ್ನೂ ನಿರ್ಧಾರವಾಗಲಿಲ್ಲ.
ಮಹಿಳಾ ಅಥ್ಲೀಟ್‌ಗಳಲ್ಲಿ ಪುರುಷ ಹಾರ್ಮೋನ್ ಪ್ರಮಾಣ ಹೆಚ್ಚು ಇರಬಾರದು ಎಂಬ ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ತೀರ್ಪು ಪ್ರಶ್ನಿಸಿ ದಕ್ಷಿಣ ಆಫ್ರಿಕಾದ ಮಧ್ಯಮ ದೂರ ಓಟಗಾರ್ತಿ ಕಾಸ್ಟರ್ ಸೆಮೆನ್ಯಾ ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಅವರಿಗೆ ಸೋಲಾಗಿತ್ತು. ಮೇ ಎಂಟರಿಂದ ಹೊಸ ನಿಯಮಾವಳಿ ಜಾರಿಗೆ ಬಂದಿತ್ತು.
ಹೀಗಾಗಿ ಅನೇಕ ಮಹಿಳಾ ಅಥ್ಲೀಟ್‌ಗಳು ಈಗ ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.