ಮೈಸೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಲಿಫ್ಟರ್‌ಗಳು ಭಾನುವಾರ ಇಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್ ಸಂಸ್ಥೆ ಹಾಗೂ ಮೈಸೂರು ಜಿಲ್ಲಾ ವೇಟ್‌ಲಿಫ್ಟರ್ಸ್ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ಮಹಾಜನ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಪುರುಷ ಹಾಗೂ ಮಹಿಳೆಯರ ಎಲ್ಲ ವಿಭಾಗಗಳಲ್ಲೂ ಆಳ್ವಾಸ್ ಸ್ಪರ್ಧಿಗಳು ಸಾಧನೆ ತೋರಿದ್ದು, ಒಟ್ಟು 247 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ಪರ್ಧಿಗಳು ಉತ್ತಮ ಪೈಪೋಟಿ ತೋರುವ ಮೂಲಕ ಒಟ್ಟಾರೆ 232 ಅಂಕಗಳೊಂದಿಗೆ ರನ್ನರ್ ಅಪ್ ಆದರು.
ಪುರುಷರ ವಿಭಾಗದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ಪ್ರಜ್ವಲ್, ಜೂನಿಯರ್ ವಿಭಾಗದಲ್ಲಿ ಬೆಂಗಳೂರಿನ ಸಂಜೀವಿ ಶೆಟ್ಟಿ ಸ್ಪೋರ್ಟ್ಸ್ ಕ್ಲಬ್‌ನ ದೇವೇಂದ್ರ ಹಾಗೂ ಯೂಥ್ ವಿಭಾಗದಲ್ಲಿ ದಾವಣಗೆರೆಯ ಸಿಎಂಸಿ ಜಿಮ್‌ನ ವಿ. ಗಣೇಶ್ ‘ಉತ್ತಮ ಲಿಫ್ಟರ್’ ಪ್ರಶಸ್ತಿ ಎತ್ತಿ ಹಿಡಿದರು.
ಮಹಿಳೆಯರ ವಿಭಾಗದಲ್ಲಿ ಸಂಜೀವಿ ಶೆಟ್ಟಿ ಸ್ಪೋರ್ಟ್ಸ್ ಕ್ಲಬ್‌ನ ಬಿ. ಲಕ್ಷ್ಮಿ, ಜೂನಿಯರ್ ವಿಭಾಗದಲ್ಲಿ ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ಕೆ. ಸ್ಪಂದನಾ ಹಾಗೂ ಯೂತ್ ವಿಭಾಗದಲ್ಲಿ ಸುಧೀರ್ ಫಿಟ್ನೆಸ್ ಕೇಂದ್ರದ ಎಸ್. ಸಾನಿಕಾ ‘ಉತ್ತಮ ಲಿಫ್ಟರ್’ ಗೌರವಕ್ಕೆ ಪಾತ್ರರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.