ಮುಂಬೈ: ಅಗ್ರಮಾನ್ಯ ಆಟಗಾರ ಪಂಕಜ್ ಅಡ್ವಾಣಿ ಅವರು ವೆಸ್ಟರ್ನ್ ಇಂಡಿಯಾ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸೀನಿಯರ್ ಸ್ನೂಕರ್ ಪ್ರಶಸ್ತಿ ಜಯಿಸಿದರು. ಇದರೊಂದಿಗೆ ಡಬಲ್ ಕಿರೀಟ ಸಾಧನೆ ಮಾಡಿದರು.
ಅವರು ಸುಮಾರು ಏಳು ತಾಸುಗಳ ಕಾಲ ನಡೆದ ಫೈನಲ್‌ನಲ್ಲಿ 6–4ರಿಂದ ರೈಲ್ವೆಯ ಕಮಲ್ ಚಾವ್ಲಾ ವಿರುದ್ಧ ಜಯಗಳಿಸಿದರು.
ಖಾರ್ ಜಿಮ್ಖಾನಾದ ಬಿಲಿಯರ್ಡ್ಸ್ ಹಾಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಂಗಳೂರು ನಿವಾಸಿ ಪಂಕಜ್ ಅವರು 11-72, 31-58, 95-40, 52-42, 69-43, 43-74, 22-59, 75-62, 84-58 ಮತ್ತು 58-10ರ ಫ್ರೇಮ್‌ಗಳಲ್ಲಿ ಜಯಶಾಲಿಯಾದರು.
ಸೆಮಿಫೈನಲ್‌ನಲ್ಲಿ ಪಂಕಜ್ 5-1 (131-0, 85-43, 82-53, 58-41, 59-83, 70-35) ರಿಂದ ರೈಲ್ವೆಸ್‌ನ ಫೈಸಲ್ ಖಾನ್ ವಿರುದ್ಧ ಜಯಿಸಿದ್ದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಚಾವ್ಲಾ 5-2 (119-18, 41-46, 51-60, 82-39, 73-0, 86-20, and 62-40) ರಿಂದ ಬಿಪಿಸಿಎಲ್‌ನ ಶ್ರೀಕೃಷ್ಣ ಎದುರು ಗೆದ್ದರು.
ಭಾನುವಾರ ಅವರು ಬಿಲಿಯರ್ಡ್ಸ್ ಫೈನಲ್‌ನಲ್ಲಿ ಶ್ರೀಕೃಷ್ಣ ಅವರ ವಿರುದ್ಧ 3 ತಾಸುಗಳ ಹೋರಾಟದ ನಂತರ ಗೆದ್ದಿದ್ದರು.
ಪಂಕಜ್ ಅವರು ಈಗಾಗಲೇ 27 ವಿಶ್ವ ಪ್ರಶಸ್ತಿಗಳನ್ನು ಗೆದ್ದಿರುವ ಆಟಗಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.