ADVERTISEMENT

ಚಳಿಗಾಲದ ಒಲಿಂಪಿಕ್ಸ್: ನಿಲ್ಸ್ ವ್ಯಾನ್‌ ಡರ್‌ ವಿಶ್ವದಾಖಲೆ

ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಎರಡನೇ ಚಿನ್ನ ಗೆದ್ದ ಸ್ವೀಡನ್ ಅಥ್ಲೀಟ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 12:41 IST
Last Updated 11 ಫೆಬ್ರುವರಿ 2022, 12:41 IST
ನಿಲ್ಸ್ ವ್ಯಾನ್ ಡರ್‌ ಪೋಯಲ್‌– ಎಎಫ್‌ಪಿ ಚಿತ್ರ
ನಿಲ್ಸ್ ವ್ಯಾನ್ ಡರ್‌ ಪೋಯಲ್‌– ಎಎಫ್‌ಪಿ ಚಿತ್ರ   

ಬೀಜಿಂಗ್‌: ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ತಾವೇ ನಿರ್ಮಿಸಿದ್ದ ವಿಶ್ವದಾಖಲೆ ಸುಧಾರಿಸಿದ ಸ್ವೀಡನ್‌ನ ನಿಲ್ಸ್ ವ್ಯಾನ್ ಡರ್‌ ಪೋಯಲ್‌ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಂಡರು.

10 ಸಾವಿರ ಮೀಟರ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ 25 ವರ್ಷದ ನಿಲ್ಸ್ 12 ನಿಮಿಷ 30.74 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ವರ್ಷದ ಹಿಂದೆ ನೆದರ್ಲೆಂಡ್ಸ್‌ನಲ್ಲಿ ಅವರು 12 ನಿಮಿಷ 32.95 ನಿಮಿಷಗಳಲ್ಲಿ ಗುರಿ ಮುಟ್ಟಿದ್ದರು.

34 ವರ್ಷಗಳ ಬಳಿ ಈ ವಿಭಾಗದಲ್ಲಿ ಸ್ವೀಡನ್‌ಗೆ ದಕ್ಕಿದ ಮೊದಲ ಪದಕವಿದು. 1988ರ ಕ್ಯಾಲ್ಗರಿ ಒಲಿಂಪಿಕ್ಸ್‌ನಲ್ಲಿ ಥಾಮಸ್‌ ಗುಸ್ತಾಫ್ಸನ್‌ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

ADVERTISEMENT

ನೆದರ್ಲೆಂಡ್ಸ್‌ನ ಪ್ಯಾಟ್ರಿಕ್ ರೊಯಿಸ್ಟ್ (12:44.59) ಬೆಳ್ಳಿ ಪದಕ ಗೆದ್ದುಕೊಂಡರೆ, ಇಟಲಿಯ ಡೇವಿಡ್‌ ಗಿಯಟ್ಟೊ (12:45.98) ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಇದೇ ಕೂಟದ 5000 ಮೀಟರ್ಸ್ ವಿಭಾಗದಲ್ಲೂನಿಲ್ಸ್ ವ್ಯಾನ್ ಡರ್‌ ಅವರಿಗೆ ಚಿನ್ನದ ಪದಕ ಒಲಿದಿದೆ.

ನಿಸ್ಕಾನೆನ್‌ಗೆ ಚಿನ್ನ: ಉತ್ತಮ ಸಾಮರ್ಥ್ಯ ತೋರಿದ ಫಿನ್ಲೆಂಡ್‌ನ ಇವೊ ನಿಸ್ಕಾನೆನ್‌ ಅವರು ಪುರುಷರ 15 ಕಿ.ಮೀ. ಕ್ಲಾಸಿಕ್ ಸ್ಕೀಯಿಂಗ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. 2018ರ ಪ್ಯಾಯೊಂಚಾಂಗ್‌ ಕ್ರೀಡಾಕೂಟದಲ್ಲೂ ಅವರಿಗೆ ಅಗ್ರಸ್ಥಾನ ಒಲಿದಿತ್ತು.

ನಿಸ್ಕಾನೆನ್‌ 37 ನಿಮಿಷ 54.8 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ, ರಷ್ಯಾ ಒಲಿಂಪಿಕ್ಸ್ ಸಮಿತಿಯ ಅಲೆಕ್ಸಾಂಡರ್‌ ಬೊಲ್ಷುನೊವ್‌ ಬೆಳ್ಳಿ ಮತ್ತು ನಾರ್ವೆಯ ಜೋಹಾನ್ನಸ್‌ ಕ್ಲಾಬೊ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.