ಕ್ವಾಲಾಲಂಪುರ: ಭಾರತದ ತ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಇಲ್ಲಿ ಆರಂಭವಾದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಲು ಅನುಭವಿಸಿತು.
ಮಂಗಳವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಆಟಗಾರ್ತಿಯರು 14–21, 14–21 ರಲ್ಲಿ ಮಲೇಷ್ಯಾದ ಪರ್ಲಿ ಟಾನ್ ಮತ್ತು ತಿನಾ ಮುರಳೀಧರನ್ ಎದುರು ಸೋತರು.
ಚಾಂಪಿಯನ್‌ಷಿಪ್‌ನ ಮೊದಲ ದಿನ ಕಣಕ್ಕಿಳಿದ ಭಾರತದ ಯಾರಿಗೂ ಗೆಲುವು ಒಲಿಯಲಿಲ್ಲ. ಡಬಲ್ಸ್ ವಿಭಾಗದಲ್ಲಿ ಇತರ ಎರಡು ಜೋಡಿಗಳು ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದವು.
ಅಶ್ವಿನಿ ಭಟ್– ಶಿಖಾ ಗೌತಮ್ 7–21, 10–21 ರಲ್ಲಿ ಜಪಾನ್‌ನ ಯೂಕಿ ಫುಕುಶಿಮ ಮತ್ತು ಸಯಾಕ ಹಿರೊಟ ಎದುರು ಪರಾಭವಗೊಂಡರೆ, ಪೂಜಾ– ಆರತಿ ಸಾರಾ ಸುನಿಲ್ 17–21, 17–21 ರಲ್ಲಿ ಬಲ್ಗೇರಿಯದ ಗ್ಯಾಬ್ರಿಯೆಲಾ ಸ್ಟೊಯೆವಾ ಮತ್ತು ಸ್ಟೆಫಾನಿ ಸ್ಟೊಯೆವಾ ಕೈಯಲ್ಲಿ ಸೋಲು ಅನಭವಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಾಳವಿಕಾ ಬನ್ಸೊದ್ 10–21, 17–21 ರಲ್ಲಿ ಮಲೇಷ್ಯಾದ ಗೊ ಜಿನ್ ವೀ ಎದುರು ಸೋತರು.
ಒಲಿಂಪಿಕ್ ಪದಕ ವಿಜೇತರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬುಧವಾರ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಪುರುಷರ ವಿಭಾಗದಲ್ಲಿ ಪಿ.ಕಶ್ಯಪ್, ಎಚ್.ಎಸ್.ಪ್ರಣಯ್ ಮತ್ತು ಬಿ.ಸಾಯಿ ಪ್ರಣೀತ್ ಅವರೂ ಕಣಕ್ಕಿಳಿಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.