ಕಾಕಮಿಗಾರಾ (ಜಪಾನ್): ಅನು ಅವರ ಡಬಲ್ ಹ್ಯಾಟ್ರಿಕ್ ಸಾಧನೆಯ ನೆರವಿನಿಂದ ಭಾರತ ತಂಡ ಮಹಿಳಾ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಉಜ್ಬೇಕಿಸ್ತಾನ ತಂಡವನ್ನು ಶನಿವಾರ 22–0 ಗೋಲಿನಿಂದ ಸದೆಬಡಿದು ಭರ್ಜರಿಯಾಗಿ ಅಭಿಯಾನ ಆರಂಭಿಸಿತು.
ಅನು ಪಂದ್ಯದ 13, 29, 30, 38, 43 ಮತ್ತು 51ನೇ ನಿಮಿಷ ಗೋಲುಗಳನ್ನು ಗಳಿಸಿ ಭಾರತ ತಂಡದ ಗೆಲುವಿನಲ್ಲಿ ಗಮನ ಸೆಳೆದರು. ವೈಷ್ಣವಿ ವಿಠ್ಠಲ್ ಫಾಲ್ಕೆ (3 ಮತ್ತು 56ನೇ), ಮುಮ್ತಾಜ್ ಖಾನ್ (6, 44, 47 ಮತ್ತು 60ನೇ ನಿಮಿಷ), ಸುನೆಲಿಟಾ ಟೊಪ್ಪೊ (17, 27ನೇ ನಿಮಿಷ), ಮಂಜಾ ಚೋರ್ಸಿವಾ (26), ದೀಪಿಕಾ ಸೊರೆಂಗ್ (18 ಮತ್ತು 25ನೇ), ದೀಪಿಕಾ (32, 44, 46 ಮತ್ತು 57ನೇ) ಮತ್ತು ನೀಲಂ (47ನೇ ನಿಮಿಷ) ಗೋಲುಗಳನ್ನು ಚೆಂಡನ್ನು ಗುರಿಮುಟ್ಟಿಸಿದರು.
ಮೂರನೇ ನಿಮಿಷವೇ ವೈಷ್ಣವಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ರು. ನಂತರ ತಂಡ ಮನಬಂದಂತೆ ಗೋಲುಗಳನ್ನು ಗಳಿಸಿತು. ವಿರಾಮದ ವೇಳೆಗೇ ಭಾರತ 10–0 ಗೋಲುಗಳಿಂದ ಮುಂದಿತ್ತು. ಉತ್ತರಾರ್ಧದಲ್ಲೂ ಪರಿಸ್ಥಿತಿ ಬದಲಾಗಲಿಲ್ಲ.
ಭಾರತ ಜೂನ್ 5ರಂದು ಮಲೇಷಿಯಾ ವಿರುದ್ಧ ತನ್ನ ಎರಡನೇ ಪಂದ್ಯ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.