ಬೆಂಗಳೂರು: ಜೀವನದಲ್ಲಿ ಅತ್ಯುನ್ನತ ಸಾಧನೆ ಮಾಡುವ ಕನಸು ಕಾಣಬೇಕು. ಆ ಕನಸು ನನಸು ಮಾಡಲು ಕಠಿಣ ಪರಿಶ್ರಮ ಮತ್ತು ಶ್ರದ್ಧೆ ವಹಿಸಬೇಕು ಎಂದು ಒಲಿಂಪಿಯನ್ ಈಜುಪಟು ನಿಶಾ ಮಿಲೆಟ್ ಹೇಳಿದರು.
ಶನಿವಾರ ಸಂಜೆ ನೆಟ್ಟಕಲ್ಲಪ್ಪ ಅಕ್ವಾಟೆಕ್ ಸೆಂಟರ್‌ನಲ್ಲಿ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್ ಉದ್ಘಾಟಿಸಿದ ಅವರು ಮಾತನಾಡಿದರು.
‘ಕ್ರೀಡಾಪಟುಗಳ ಯಶಸ್ಸಿನಲ್ಲಿ ತಂದೆ, ತಾಯಿ ಮತ್ತು ಉತ್ತಮ ತರಬೇತುದಾರರ ಪಾತ್ರ ದೊಡ್ಡದು. ನಾನು ಈಜುಪಟುವಾಗಲು ಕುಟುಂಬವು ಬೆಂಬಲಿಸಿತು. ತರಬೇತುದಾರ ಪ್ರದೀಪ್ ಕುಮಾರ್ ಅವರು ನೀಡಿದ ಮಾರ್ಗದರ್ಶನ ಮತ್ತು ಬೆಂಬಲ ಬಹಳ ದೊಡ್ಡದು. ಅವರು ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದರು. ಉನ್ನತ ಸಾಧನೆ ಮಾಡಲು ಕಾರಣರಾದರು’ ಎಂದರು.
ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಈಜು ಕೋಚ್ ಪ್ರದೀಪಕುಮಾರ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.