ನವದೆಹಲಿ: ಪ್ರಬಲ ಪಂಚ್‌ಗಳ ಮೂಲಕ ಮಿಂಚಿದ ಭಾರತದ ನೀತು ಗಂಗಾಸ್ ಮತ್ತು ಮನೀಷಾ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಕಾಮನ್‌ವೆಲ್ತ್ ಕೂಟದ ಚಾಂಪಿಯನ್ ನೀತು ಅವರು ಮಂಗಳವಾರ ನಡೆದ 48 ಕೆ.ಜಿ. ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಬೌಟ್‌ನಲ್ಲಿ ತಜಿಕಿಸ್ತಾನದ ಸುಮೈಯಾ ಒಸಿಮೊವಾ ವಿರುದ್ಧ ಆರ್‌ಎಸ್‌ಸಿ ಆಧಾರದಲ್ಲಿ ಗೆದ್ದರು. 57 ಕೆ.ಜಿ. ವಿಭಾಗದ ಹಣಾಹಣಿಯಲ್ಲಿ ಮನೀಷಾ ಅವರು ಟರ್ಕಿಯ ನೂರ್ ಎಲಿಫ್ ತುರ್ಹಾನ್ ಅವರನ್ನು ಮಣಿಸಿದರು.
ನೀತು ಅವರು ಒಸಿಮೊವಾ ವಿರುದ್ಧ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಮೇಲಿಂದ ಮೇಲೆ ಪಂಚ್‌ಗಳನ್ನು ನೀಡಿ ಎದುರಾಳಿ ನೆಲಕ್ಕುರುಳುವಂತೆ ಮಾಡಿದರು. ತಜಿಕಿಸ್ತಾನದ ಬಾಕ್ಸರ್ ಎದ್ದು ನಿಂತು ಮತ್ತೆ ಹೋರಾಟ ಮುಂದುವರಿಸಿದರೂ, ನೀತು ಅವರ ಪ್ರಬಲ ಪಂಚ್‌ಗಳ ಮುಂದೆ ತಬ್ಬಿಬ್ಬಾದರು.
ಹಣಾಹಣಿಯನ್ನು ನಿಲ್ಲಿಸಿದ ರೆಫರಿ, ನೀತು ಪರವಾಗಿ ತೀರ್ಪು ನೀಡಿದರು. ಆದರೆ ರೆಫರಿಯು ಬೌಟ್ ನಿಲ್ಲಿಸಿದ್ದಕ್ಕೆ ಒಸಿಮೊವಾ ಅಸಮಾಧಾನ ಹೊರಹಾಕಿದರು. ಭಾರತದ ಬಾಕ್ಸರ್ ಸತತ ಎರಡನೇ ಬಾರಿ ಆರ್‌ಎಸ್‌ಸಿ ಆಧಾರದಲ್ಲಿ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.