ADVERTISEMENT

ಚಿಕಿತ್ಸೆಯಲ್ಲಿ ಥ್ರೋಬಾಲ್ ನೆರವು: ಕಾರ್ಯಾಗಾರ ಇಂದು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 19:04 IST
Last Updated 10 ಮಾರ್ಚ್ 2021, 19:04 IST

ಬೆಂಗಳೂರು: ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಗುರುವಾರ ನೆಫ್ರಾಲಜಿ ಅಸೋಸಿಯೇಷನ್ ಮತ್ತು ಅಂತರರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಸಹಯೋಗದಲ್ಲಿ ಕಿಡ್ನಿ ಡಯಾಲಿಸಿಸ್‌ ರೋಗಿಗಳಿಗೆ ವ್ಯಾಯಾಮದ ನೆರವು ಕುರಿತ ಕಾರ್ಯಗಾರ ಆಯೋಜಿಸಲಾಗಿದೆ.

ಜೆಸಿ ರಸ್ತೆಯ ಟ್ರಸ್ಟ್‌ವೆಲ್ ಆಸ್ಪತ್ರೆಯ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ನೆಫ್ರಾಲಜಿ್ಸ್ಟ್ ಡಾ. ಅರವಿಂದ್ ಕಾಂಚಿ, ಐಟಿಎಫ್‌ ಪ್ರಧಾನ ಕಾರ್ಯದರ್ಶಿ ಡಾ. ಟಿ ರಾಮಣ್ಣ ಹಾಜರಿರುವರು.

’ಕಿಡ್ನಿ ಡಯಾಲಿಸಿಸ್‌ ಚಿಕಿತ್ಸೆ ಪಡೆಯುವವರ ಮಾನಸಿಕ ಮತ್ತು ದೈಹಿಕ ಕ್ಷಮತೆ ಹೆಚ್ಚಿಸಲು ಆಟ ನೆರವಾಗುತ್ತದೆ. ಥ್ರೋಬಾಲ್‌ನಲ್ಲಿ ಗಾಯದ ಸಂಭವಗಳು ಕಡಿಮೆ ಇರುವುದರಿಂದ ಈ ಆಟದ ವ್ಯಾಯಾಮಗಳನ್ನು ಬಳಸಿಕೊಳ್ಳಬಹುದು‘ ಎಂದು ಐಟಿಎಫ್‌ ಸಹಪ್ರಧಾನ ಕಾರ್ಯದರ್ಶಿ ಸಂಪೂರ್ಣಾ ಹೆಗಡೆ ’ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.