ಕಾಲಿ (ಕೊಲಂಬಿಯಾ): ಇಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ತ್ರಿಪಲ್ ಜಂಪ್ ಸ್ಪರ್ಧೆಯಲ್ಲಿಭಾರತದ ಸೆಲ್ವ ಪಿ. ತಿರುಮಾರನ್ ಬೆಳ್ಳಿ ಪದಕ ಜಯಿಸಿದ್ದಾರೆ.ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ತೋರಿದ17 ವರ್ಷದ ಸೆಲ್ವ, 16.15 ಮೀ. ಜಿಗಿದು ಈ ಸಾಧನೆ ಮಾಡಿದ್ದಾರೆ.
ಜಮೈಕಾದ ಜೇಯ್ಡನ್ ಹಿಬ್ಬರ್ಟ್ ಅವರು17.27 ಮೀ. ದೂರ ಜಿಗಿಯುವ ಮೂಲಕ ಈ ಕೂಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಸೆಲ್ವ ಅವರಿಗಿಂತ ಕೇವಲ 2 ಸೆಂಟಿಮೀಟರ್ ಹಿಂದುಳಿದ ಎಸ್ಟೋನಿಯಾದ ವಿಕ್ಟರ್ ಮೊರೊಜೊವ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಏತನ್ಮಧ್ಯೆ ಭಾರತದ ಮಹಿಳಾ ತಂಡ 4X400 ಮೀಟರ್ ರಿಲೇ ಸ್ಪರ್ಧೆಯ ಫೈನಲ್‌ಗೆ ಅರ್ಹತೆ ಗಿಟ್ಟಿಸಿದೆ. ಸಮ್ಮಿ, ಪ್ರಿಯಾ ಎಚ್. ಮೋಹನ್, ರಜಿತಾ ಕುಂಜಾ ಹಾಗೂ ರುಪಾಲ್ ಅವರನ್ನೊಳಗೊಂಡ ತಂಡ ಸೆಮಿಫೈನಲ್‌ನ ಮೂರನೇ ಹೀಟ್‌ನಲ್ಲಿ ಎರಡನೇ ಸ್ಥಾನ ಪಡೆದು ಹಾಗೂ ಒಟ್ಟಾರೆ ನಾಲ್ಕನೇ ಸ್ಥಾನ ಪಡೆದು (3:34.18 ನಿಮಿಷಗಳಲ್ಲಿ) ಗುರಿ ತಲುಪಿತು.
ನೀರಜ್ ಚೋಪ್ರಾ ಅವರುಈ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎನಿಸಿದ್ದಾರೆ. ಅವರು 2016ರಲ್ಲಿ ಪೋಲೆಂಡ್‌ನಲ್ಲಿ ನಡೆದ ಕ್ರೀಡಾಕೂಟದ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.