ADVERTISEMENT

ವಿಶ್ವ ವಿ.ವಿ. ಶೂಟಿಂಗ್ ಚಾಂಪಿಯನ್‌ಷಿಪ್‌: ಐಶ್ವರಿ– ಸಂಜೀತಾ ಜೋಡಿಗೆ ಚಿನ್ನ

ಪಿಟಿಐ
Published 14 ನವೆಂಬರ್ 2024, 0:32 IST
Last Updated 14 ನವೆಂಬರ್ 2024, 0:32 IST
<div class="paragraphs"><p>ಶೂಟಿಂಗ್ ( ಸಾಂದರ್ಭಿಕ ಚಿತ್ರ)</p></div>

ಶೂಟಿಂಗ್ ( ಸಾಂದರ್ಭಿಕ ಚಿತ್ರ)

   

ನವದೆಹಲಿ: ಒಲಿಂಪಿಯನ್ ಐಶ್ವರಿ ಪ್ರತಾಪ್ ತೋಮಾರ್ ಮತ್ತು ಸಂಜೀತಾ ದಾಸ್ ಜೋಡಿ ಇಲ್ಲಿ ನಡೆಯುತ್ತಿರುವ ವಿಶ್ವ ವಿಶ್ವವಿದ್ಯಾಲಯಗಳ ಶೂಟಿಂಗ್ ಚಾಂಪಿಯನ್‌ಷಿಪ್‌ನ 10 ಮೀ. ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಬುಧವಾರ ಚಿನ್ನದ ಪದಕ ಗಳಿಸಿಕೊಟ್ಟಿತು. ಇದು ಭಾರತಕ್ಕೆ ಈ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಚಿನ್ನ.

ಪುರುಷರ 10 ಮೀ. ಏರ್‌ ರೈಫಲ್‌ನಲ್ಲಿ ಐದನೇ ಸ್ಥಾನ ಮತ್ತು 50 ಮೀ. ರೈಫಲ್ 3–ಪೊಸಿಷನ್ಸ್‌ನಲ್ಲಿ ಬೆಳ್ಳಿಗೆ ಸೀಮಿತಗೊಂಡಿದ್ದ ಐಶ್ವರಿ, ಕೊನೆಗೂ ಸಂಜೀತಾ ಜೊತೆಗೂಡಿ ಚಿನ್ನದ ಪದಕ ಗೆದ್ದರು. ಈ ಇಬ್ಬರು, ದಕ್ಷಿಣ ಕೊರಿಯಾದ ಕಿಮ್‌ ಹ್ಯೊಬೀನ್‌– ಲೀ ಜುನ್‌ವಾನ್ ಜೋಡಿಯ ಪ್ರಬಲ ಸವಾಲನ್ನು 17–15 ರಿಂದ ಪ್ರಯಾಸದಿಂದ ಬದಿಗೊತ್ತಿದ್ದರು.

ADVERTISEMENT

ಕಂಚಿನ ಪದಕಕ್ಕೆ ನಡೆದ ಪ್ಲೇ ಆಫ್‌ನಲ್ಲಿ ಪೋಲೆಂಡ್‌ನ ಜೂಲಿಯಾ ಪಿಯೊಟ್ರೊವ್‌ಸ್ಕಾ– ಮಸಿಜ್ ಕೊವಾಲೆವಿಕ್ಝ್ ಜೋಡಿ 16–0 ಯಿಂದ ಭಾರತದ ಮಾನಿನಿ ಕೌಶಿಕ್‌– ಉಮಾಮಹೇಶ್‌ ಮದ್ದಿನೇನಿ ಜೋಡಿಯನ್ನು ಸೋಲಿಸಿತು.

ಕ್ವಾಲಿಫಿಕೇಷನ್ ಸುತ್ತಿನಲ್ಲಿ ಸಂಜೀತಾ (316.8) ಮತ್ತು ಐಶ್ವರಿ (316.2) ಒಟ್ಟು 633 ಸ್ಕೋರ್ ಗಳಿಸಿ ಫೈನಲ್ ತಲುಪಿದ್ದರು. ಕೊರಿಯಾದ ಜೋಡಿ 631.7ರ ಸ್ಕೋರ್ ಪಡೆದಿತ್ತು. ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ಜೋಡಿಗಳು ಕಂಚಿನ ಪದಕಕ್ಕಾಗಿ ಸೆಣಸಿದವು.

ಮಾನಿನಿ ಮತ್ತು ಉಮಾಮಹೇಶ್ ಜೋಡಿ ಕ್ವಾಲಿಫಿಕೇಷನ್ ಸುತ್ತಿನಲ್ಲಿ 628.7 ಸ್ಕೋರ್‌ ಕಲೆಹಾಕಿ ನಾಲ್ಕನೇ ಸ್ಥಾನ ಗಳಿಸಿತ್ತು. ಮೂರನೇ ಸ್ಥಾನ ಗಳಿಸಿದ ಪೋಲೆಂಡ್‌ನ ಜೋಡಿ 629.8ರ ಸ್ಕೋರ್ ಗಳಿಸಿತ್ತು. ಮಂಗಳವಾರ ಭಾರತದ ಸ್ಕೀಟ್‌ ಶೂಟರ್ ಭವತೇಗ್ ಸಿಂಗ್ ಗಿಲ್ ಎರಡನೇ ಚಿನ್ನ ಗೆದ್ದುಕೊಟ್ಟಿದ್ದರು.  ಪಲಕ್ ಗುಲಿಯಾ ಮತ್ತು ಅಮಿತ್ ರ್ಮಾ ಏರ್‌ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.