ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಕಂಚಿನ ಪದಕಕ್ಕೆ ನೇಹಾ ಶರ್ಮಾ ಪೈಪೋಟಿ

ಪಿಟಿಐ
Published 19 ಸೆಪ್ಟೆಂಬರ್ 2023, 19:05 IST
Last Updated 19 ಸೆಪ್ಟೆಂಬರ್ 2023, 19:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಲ್‌ಗ್ರೇಡ್‌: ಭಾರತದ ಮಹಿಳಾ ಕುಸ್ತಿಪಟು ನೇಹಾ ಶರ್ಮಾ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕದ ಭರವಸೆ ಮೂಡಿಸಿದ್ದಾರೆ. ಆದರೆ ಸರಿತಾ ಮೋರ್, ದಿವ್ಯಾ ಕಾಕರಾನ್ ಅವರು ಪ್ರಾಥಮಿಕ ಸುತ್ತಿನ ಬೌಟ್‌ನಲ್ಲಿ ಸೋತರು.

ಮಂಗಳವಾರ ನಡೆದ 55 ಕೆ.ಜಿ. ವಿಭಾಗದ ‘ರೀಪೇಜ್‌’ ಬೌಟ್‌ನಲ್ಲಿ ನೇಹಾ ಅವರು 7–4 ರಿಂದ ಉಕ್ರೇನ್‌ನ ಮರಿಯಾ ವಿನಿಕ್‌ ಅವರನ್ನು ಮಣಿಸಿದರು. ಕಂಚಿನ ಪದಕಕ್ಕಾಗಿ ನಡೆಯುವ ಹಣಾಹಣಿಯಲ್ಲಿ ಅವರು ಜರ್ಮನಿಯ ಅನಸ್ತೇಸಿಯ ಬ್ಲೇವಸ್‌ ವಿರುದ್ಧ ಪೈಪೋಟಿ ನಡೆಸುವರು.

ಸರಿತಾ (57 ಕೆ.ಜಿ ವಿಭಾಗ) ಮತ್ತು ದಿವ್ಯಾ (76 ಕೆ.ಜಿ) ಅವರು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದರು. ಅಂತಿಮ್‌ ಕುಂದು (65 ಕೆ.ಜಿ) ಮತ್ತು ನೀಲಂ (50 ಕೆ.ಜಿ.) ಅವರೂ ಪ್ರಾಥಮಿಕ ಸುತ್ತಿನಲ್ಲಿ ನಿರ್ಗಮಿಸಿದರು.

ADVERTISEMENT

ಮೊದಲ ಸುತ್ತಿನಲ್ಲಿ ವೆನಿಜುವೆಲದ ಬೆತ್‌ಜಬೆತ್ ಕೊಲ್ಮನರೆಜ್‌ ಅವರನ್ನು 6–1 ರಿಂದ ಮಣಿಸಿದ ಸರಿತಾ, ಮುಂದಿನ ಹಣಾಹಣಿಯಲ್ಲಿ ನೈಜೀರಿಯಾದ ಒಡುನಯೊ ಅಡೆಕುರೊಯೆ ಎದುರು 4–6 ರಿಂದ ಸೋತರು.

ಆರಂಭಿಕ ಸುತ್ತಿನಲ್ಲಿ ಟರ್ಕಿಯ ಮೆಹ್ತಪ್ ಗಲ್ಟೆಕಿನ್‌ ವಿರುದ್ಧ 7–5 ರಿಂದ ಗೆದ್ದ ದಿವ್ಯಾ, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಕೆನಡಾದ ಜಸ್ಟಿನ್‌ ರಿನೇ ಕೈಯಲ್ಲಿ ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.