ಬೆಂಗಳೂರು: ಕಾರ್ಟಿಂಗ್ ಮತ್ತು ಫಾರ್ಮುಲಾ ಫೋರ್‌ನಲ್ಲಿ ಹಲವು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಬೆಂಗಳೂರಿನ ಹುಡುಗ ಯಶ್ ಆರಾಧ್ಯ ಇದೀಗ ಫ್ರೆಂಚ್ ಫಾರ್ಮುಲಾ 4 ರೇಸಿಂಗ್‍ನಲ್ಲಿ ಸ್ಪರ್ಧಿಸಲಿದ್ದಾರೆ. ಫ್ರೆಂಚ್ ಮೋಟರ್ ಸ್ಪೋರ್ಟ್ಸ್ ಫೆಡರೇಷನ್ ಆಫ್ ಆಟೊ ಸ್ಪೋರ್ಟ್ಸ್ಅಕಾಡೆಮಿಯು(ಎಫ್‍ಎಫ್‍ಎಸ್‍ಎ), ಅಂತರರಾಷ್ಟ್ರೀಯ ಮೋಟರ್‌ಸ್ಪೋರ್ಟ್ಸ್ ಫೆಡರೇಷನ್ (ಎಫ್‍ಐಎ) ಸಹಯೋಗದಲ್ಲಿಈ ಚಾಂಪಿಯನ್‌ಷಿಪ್‌ಅನ್ನು ಆಯೋಜಿಸಿದೆ.
ಫ್ರಾನ್ಸ್‌ನಲ್ಲಿ ಅಕ್ಟೋಬರ್ 2ರಿಂದ ಚಾಂಪಿಯನ್‌ಷಿಪ್ ಆರಂಭವಾಗಲಿದೆ. ಟೂರ್ನಿಯ ಮುಕ್ತ ವಿಭಾಗದಲ್ಲಿ ಯಶ್ ಸ್ಪರ್ಧಿಸುತ್ತಿದ್ದಾರೆ.ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಚಾಂಪಿಯನ್‍ಷಿಪ್ ವೇಳಾಪಟ್ಟಿಯನ್ನು ಹಲವು ಬಾರಿ ಬದಲಿಸಲಾಗಿದ್ದು, ಅಂತಿಮವಾಗಿ ಆಗಸ್ಟ್‌ನಲ್ಲಿ ಚಾಲನೆ ಪಡೆದಿತ್ತು. ವೀಸಾ ಸಂಬಂಧಿತ ವಿಳಂಬದಿಂದಾಗಿ ಮೊದಲ ಮೂರು ಸುತ್ತುಗಳಲ್ಲಿ ಸ್ಪರ್ಧಿಸಲು ಯಶ್ ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಉಳಿದ ನಾಲ್ಕು ಸುತ್ತುಗಳಲ್ಲಿ ಭಾಗವಹಿಸಲು ಇದೀಗ ಸಜ್ಜಾಗಿದ್ದಾರೆ.
ಯಶ್ ಅಕ್ಟೋಬರ್ 2ರಿಂದ 4ರವರೆಗೆ ಮೊದಲ ರೇಸ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ 16 ರಿಂದ 18, ನವೆಂಬರ್ 6ರಿಂದ 8 ಮತ್ತು ನವೆಂಬರ್ 13ರಿಂದ 18ರಂದು ಫ್ರಾನ್ಸ್‌ನಲ್ಲೇನಡೆಯುವ ನಂತರದ ರೇಸ್‍ಗಳಲ್ಲಿ ಸ್ಪರ್ಧಿಸಲಿದ್ದಾರೆ.
ಯಶ್ಜನವರಿಯಲ್ಲಿಪ್ರಧಾನಮಂತ್ರಿ ಬಾಲ ಶಕ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.