ADVERTISEMENT

ಬ್ಲ್ಯುಟಿಟಿ ಫೀಟರ್‌ ಟೇಬಲ್‌ ಟೆನಿಸ್‌ ಟೂರ್ನಿ: ಯಶಸ್ವಿನಿ ಘೋರ್ಪಡೆಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:26 IST
Last Updated 8 ಅಕ್ಟೋಬರ್ 2024, 15:26 IST
ಯಶಸ್ವಿನಿ ಘೋರ್ಪಡೆ
ಯಶಸ್ವಿನಿ ಘೋರ್ಪಡೆ   

ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ಕತಾರ್‌ನ ದೋಹಾದಲ್ಲಿ ನಡೆದ ಡಬ್ಲ್ಯುಟಿಟಿ ಫೀಟರ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ 19 ವರ್ಷ ವಯಸ್ಸಿನ ಯಶಸ್ವಿನಿ 9-11, 11-7, 8-11, 7-11ರಿಂದ ಜಪಾನ್‌ನ ಹಿಟೊಮಿ ಸಾಟೊ ಅವರಿಗೆ ಶರಣಾದರು.

ಇದಕ್ಕೂ ಮೊದಲು ಸೆಮಿಫೈನಲ್‌ನಲ್ಲಿ 11-7, 11-8, 13-11ರಿಂದ ಜಪಾನ್‌ನ ಸಾಕಿ ಶಿಬಾಟಾ ಅವರನ್ನು; ಕ್ವಾರ್ಟರ್‌ ಫೈನಲ್‌ನಲ್ಲಿ 5-11, 11-7, 11-8, 8-11, 11-6ರಿಂದ ಅದೇ ದೇಶದ ಹರುನಾ ಓಜಿಯೊ ಅವರನ್ನು ಹಿಮ್ಮೆಟ್ಟಿಸಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.