ADVERTISEMENT

ಯೂಕಿ ಭಾಂಬ್ರಿಗೆ ಎಟಿಪಿ ಡಬಲ್ಸ್‌ ಕಿರೀಟ

ಪಿಟಿಐ
Published 2 ಜುಲೈ 2023, 19:35 IST
Last Updated 2 ಜುಲೈ 2023, 19:35 IST
ಯೂಕಿ ಭಾಂಬ್ರಿ
ಯೂಕಿ ಭಾಂಬ್ರಿ   

ಮಯೋರ್ಕ, ಸ್ಪೇನ್‌: ಭಾರತದ ಯೂಕಿ ಭಾಂಬ್ರಿ ಅವರು ಎಟಿಪಿ ವಿಶ್ವ ಟೂರ್‌ನ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡರು.

ಯೂಕಿ ಮತ್ತು ದಕ್ಷಿಣ ಆಫ್ರಿಕಾದ ಲಾಯ್ಡ್ ಹ್ಯಾರಿಸ್‌ ಅವರು ಶನಿವಾರ ಇಲ್ಲಿ ಕೊನೆಗೊಂಡ ಮಯೋರ್ಕ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು.

ಭಾರತ– ದಕ್ಷಿಣ ಆಫ್ರಿಕಾ ಜೋಡಿ ಫೈನಲ್‌ನಲ್ಲಿ 6–3, 6–4 ರಲ್ಲಿ ನೆದರ್ಲೆಂಡ್ಸ್‌ನ ರಾಬಿನ್ ಹಾಸ್ ಮತ್ತು ಆಸ್ಟ್ರಿಯದ ಫಿಲಿಪ್‌ ಓಸ್ವಾಲ್ಡ್‌ ಎದುರು ಗೆದ್ದಿತು.

ADVERTISEMENT

ಎಟಿಪಿ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ 75ನೇ ಸ್ಥಾನದಲ್ಲಿದ್ದ ಯೂಕಿ, ಈ ಗೆಲುವಿನ ಮೂಲಕ 58ನೇ ಸ್ಥಾನಕ್ಕೇರಲಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ರ್‍ಯಾಂಕ್‌ ಎನಿಸಲಿದೆ.

‘ಹುಲ್ಲುಹಾಸಿನ ಅಂಗಳದಲ್ಲಿ ನಡೆದ ಈ ಟೂರ್ನಿಯನ್ನು ಎದುರಾಳಿಗಳಿಗೆ ಒಂದೂ ಸೆಟ್‌ ಬಿಟ್ಟುಕೊಡದೆ ಗೆದ್ದಿರುವುದು ದೊಡ್ಡ ಸಾಧನೆಯೇ ಸರಿ’ ಎಂದು ಮಂಗಳವಾರ 31ನೇ ಹುಟ್ಟುಹಬ್ಬ ಆಚರಿಸಲಿರುವ ಯೂಕಿ ಪ್ರತಿಕ್ರಿಯಿಸಿದ್ದಾರೆ.

ಹಲವು ಸಲ ಗಾಯದಿಂದ ಬಳಲಿದ್ದ ಯೂಕಿ ಅವರು ಸಿಂಗಲ್ಸ್‌ ವಿಭಾಗವನ್ನು ತೊರೆದು, ಡಬಲ್ಸ್‌ನಲ್ಲಿ ಆಡುತ್ತಿದ್ದಾರೆ. ಭಾರತದ ಸಾಕೇತ್ ಮೈನೇನಿ ಜತೆ ಆಡಿದ್ದ ಅವರು ಎರಡು ಚಾಲೆಂಜರ್‌ ಟೂರ್ನಿಗಳನ್ನು ಗೆದ್ದುಕೊಂಡಿದ್ದರು. ಸಾಕೇತ್‌ ವಿಶ್ರಾಂತಿ ಬಯಸಿದ್ದರಿಂದ, ಮಯೋರ್ಕ ಟೂರ್ನಿಯಲ್ಲಿ ಹ್ಯಾರಿಸ್‌ ಜತೆ ಆಡಿದ್ದರು. ಆದರೆ ವಿಂಬಲ್ಡನ್‌ ಟೂರ್ನಿಯಲ್ಲಿ ಸಾಕೇತ್‌ ಜತೆ ಆಡುವುದಾಗಿ ಯೂಕಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.