ADVERTISEMENT

ಅಲ್ಲಲ್ಲಿ ಉದ್ಯೋಗಾವಕಾಶ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2014, 19:30 IST
Last Updated 3 ಆಗಸ್ಟ್ 2014, 19:30 IST

ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್ ರಿಸರ್ಚ್‌
ಐಸಿಎಂಆರ್‌ನಲ್ಲಿ 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/9/2014.
ಹುದ್ದೆ ಹೆಸರು: ಸೈಂಟಿಸ್ಟ್‌ ಬಿ
ವೇತನ ಶ್ರೇಣಿ: ರೂ. 15600ರಿಂದ 39100
ವಯೋಮಿತಿ: 35 ವರ್ಷ ದಾಟಿರಬಾರದು. / ಅರ್ಜಿ ಶುಲ್ಕ: ರೂ. 500 /ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ/ ವಿಳಾಸ: ಡೈರೆಕ್ಟರ್‌ ಜನರಲ್‌, ಐಸಿಎಂಆರ್‌, ವಿ.ರಾಮಲಿಂಗಸ್ವಾಮಿ ಭವನ್‌, ಅನ್ಸಾರಿ ನಗರ, ನವದೆಹಲಿ: 110029
ಹೆಚ್ಚಿನ ಮಾಹಿತಿಗೆ http://icmr.nic.in

ಇಂಡಿಯನ್‌ ಆರ್ಡನೆನ್ಸ್‌ ಫ್ಯಾಕ್ಟರಿ
ಐಒಎಫ್‌ನಲ್ಲಿ (ಕೋಲ್ಕತ್ತ) 1572 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನ 9/8/2014. ಹುದ್ದೆ ಹೆಸರು: 1) ಮೆಕಾನಿಕಲ್‌: 875 ಹುದ್ದೆ, 2) ಇನ್‌ಫಾರ್ಮೇಷನ್‌ ಟೆಕ್ನಾಲಜಿ: 23 ಹುದ್ದೆ, 3) ಎಲೆಕ್ಟ್ರಿಕಲ್‌: 133 ಹುದ್ದೆ, 4) ಕೆಮಿಕಲ್‌: 296, 5) ಸಿವಿಲ್‌: 39 ಹುದ್ದೆ, 6) ಮೆಟಾಲರ್ಜಿ: 46 ಹುದ್ದೆ, 7) ಕ್ಲಾಥಿಂಗ್‌ ಟೆಕ್ನಾಲಜಿ: 32 ಹುದ್ದೆ, 8) ಲೆದರ್‌ ಟೆಕ್ನಾಲಜಿ: 4 ಹುದ್ದೆ, 9) ನಾನ್‌ ಟೆಕ್ನಾಲಜಿ (ಸ್ಟೋರ್ಸ್‌): 41 ಹುದ್ದೆ, 10) ನಾನ್‌ ಟೆಕ್ನಾಲಜಿ (ಒಟಿಎಸ್‌): 60 ಹುದ್ದೆ, 11) ಆಟೊ ಮೊಬೈಲ್‌: 3 ಹುದ್ದೆ, 12) ಎಲೆಕ್ಟ್ರಾನಿಕ್ಸ್‌: 20 ಹುದ್ದೆ.
ವೇತನ ಶ್ರೇಣಿ: ರೂ. 9300ರಿಂದ 34800
ವಯೋಮಿತಿ: 27 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿ ಪ್ರಿಂಟ್‌ಔಟ್‌ ತೆಗೆದು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 16/8/2014 ಮಾಹಿತಿಗೆ www.ofbindia.gov.in

ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ
27 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/8/2014.
ಹುದ್ದೆ ಹೆಸರು: 1) ಸಹಾಯಕ ವ್ಯವಸ್ಥಾಪಕರು: 9 ಹುದ್ದೆ, ವೇತನ ಶ್ರೇಣಿ: ರೂ. 28100ರಿಂದ 50100, 2) ಆಡಳಿತ ಸಹಾಯಕ ದರ್ಜೆ 2: ಹುದ್ದೆ: 18, ವೇತನ ಶ್ರೇಣಿ: ರೂ. 14550ರಿಂದ 26700 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35. ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 100 (ಅರ್ಜಿ ಫಾರಂ). ಬಳಿಕ ರೂ. 400 ಕಟ್ಟಬೇಕು. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ . ಮಾಹಿತಿಗೆ ವಿಳಾಸ: ವ್ಯವಸ್ಥಾಪಕ ನಿರ್ದೇಶಕರು, ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಕೈಗಾರಿಕಾ ಕ್ಷೇತ್ರ, ಬಿ.ಎಂ.ರಸ್ತೆ, ಹಾಸನ: 573201

ಆಯಿಲ್‌ ಅಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌
ಒಎನ್‌ಜಿಸಿನಲ್ಲಿ 138 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/8/2014.
ಹುದ್ದೆ ಹೆಸರು: 1) ಅಸಿಸ್ಟೆಂಟ್‌ ಟೆಕ್ನಿಷಿಯನ್‌: 97 ಹುದ್ದೆ, ವೇತನ ಶ್ರೇಣಿ: ರೂ. 12000ರಿಂದ 27000, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ, (2) ಜೂನಿಯರ್‌ ಅಸಿಸ್ಟೆಂಟ್‌ ಟೆಕ್ನಿಷಿಯನ್: 40 ಹುದ್ದೆ, ವೇತನ ಶ್ರೇಣಿ: ರೂ. 11000ರಿಂದ 24000, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ, (3) ಹೆಲ್ತ್‌ ಕೇರ್‌ ಅಟೆಂಡೆಂಟ್‌ ಗ್ರೇಡ್‌ 1: 1 ಹುದ್ದೆ, ವೇತನ ಶ್ರೇಣಿ: ರೂ. 10000ರಿಂದ 18000, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ, ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 300 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಪರೀಕ್ಷೆ ದಿನಾಂಕ: 28/9/2014. ಹೆಚ್ಚಿನ ಮಾಹಿತಿಗೆ http://www.ongc.co.in ಅಥವಾ www.ongcindia.com

ಅಗ್ರಿಕಲ್ಚರ್‌ ಸೈಂಟಿಸ್ಟ್‌ ರಿಕ್ರೂಟ್‌ಮೆಂಟ್‌ ಬೋರ್ಡ್‌
ಎಎಸ್‌ಆರ್‌ಬಿನಲ್ಲಿ 28 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1/9/2014. ಹುದ್ದೆ ಹೆಸರು: 1) ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌ (ಎಒ): 18 ಹುದ್ದೆ, 2) ಫೈನಾನ್ಸ್‌ ಅಂಡ್‌ ಅಕೌಂಟೆಂಟ್ಸ್‌ ಆಫೀಸರ್‌ (ಎಫ್‌ ಅಂಡ್‌ ಒ): 10 ಹುದ್ದೆ. ವೇತನ ಶ್ರೇಣಿ: ರೂ. 15600ರಿಂದ 39100
ವಿದ್ಯಾರ್ಹತೆ: ಶೇ 55 ಅಂಕಗಳೊಂದಿಗೆ ಪದವಿ
ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಪರೀಕ್ಷೆಯು 23/11/2014ರಂದು ನಡೆಯಲಿದೆ. ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ http://www.icar.org.in/ ಅಥವಾ http://asrb.org.in/ 

ಸೆಂಟ್ರಲ್‌ ಇಂಡುಸ್ಟ್ರಿಯಲ್‌ ಸೆಕ್ಯೂರಿಟಿ ಫೋರ್ಸ್‌
ಸಿಐಎಸ್‌ಎಫ್‌ನಲ್ಲಿ 119 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19/8/2014. ಹುದ್ದೆ ಹೆಸರು: ಅಸಿಸ್ಟೆಂಟ್‌ ಸಬ್‌ಇನ್‌ಸ್ಪೆಕ್ಟರ್‌ (ಎಕ್ಸಿಕ್ಯೂಟೀವ್‌) ವಿದ್ಯಾರ್ಹತೆ: ಪದವಿ. ವಯೋಮಿತಿ: 35 ವರ್ಷ ದಾಟಿರಬಾರದು. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ
ವಿಳಾಸ: ಡಿಐಜಿ, ಸಿಐಎಸ್‌ಎಫ್‌ (ದಕ್ಷಿಣ ವಲಯ), ರಾಜಾಜಿ ಭವನ್‌, ‘ಡಿ’ ಬ್ಲಾಕ್‌, ಬೆಸೆಂಟ್‌ ನಗರ, ಚೆನ್ನೈ, ತಮಿಳುನಾಡು: 600090
ಮಾಹಿತಿಗೆ www.cisf.nic.in  n

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.