ಪದ/Word: ಇಂಗ್ಲಿಷ್ ಭಾಷೆಯಲ್ಲಿ ಪದ/Word ಎಂದು ಗುರುತಿಸಬೇಕಾದರೆ ಕನಿಷ್ಠ ಒಂದು ಅಕ್ಷರವಾದರೂ ಇರಲೇಬೇಕು. ಉದಾಹರಣೆಗೆ: I ಅಂದರೆ ನಾನು. ಕೆಲವೊಮ್ಮೆ ಅಕ್ಷರದ ಜೊತೆಗೆ ಅಂಕಿಯೂ ಬರಬಹುದು. ಉದಾಹರಣೆಗೆ : A1 ಅಂದರೆ ಅತ್ಯುತ್ತಮ ಅಥವಾ ಶ್ರೇಷ್ಠ. A2 ಅಂದರೆ ಸಪ್ತ ಸ್ವರಗಳಲ್ಲಿ ಆರನೆಯದು. ಕೆಲವು ಅಕ್ಷರಗಳಿರುವ ಸಮೂಹಕ್ಕೆ ಪದ/Word ಎಂದು ತಿಳಿಯಲು ಒಂದು ನಿಬಂಧನೆ ಏನೆಂದರೆ, ಅದಕ್ಕೆ ಅರ್ಥವಿರಬೇಕು. ಅರ್ಥವನ್ನು ಕೊಡದಿರುವ ಅಕ್ಷರಗಳ ಸಮೂಹವನ್ನು ಪದ/Word ವೆಂದು ಕರೆಯಲಾಗದು.
ಇಂಗ್ಲಿಷ್ ಭಾಷೆಯಲ್ಲಿ ಪದಗಳನ್ನು 8 ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ವರ್ಗೀಕರಣದ ಪ್ರಕಾರ ಆ ಗುಂಪುಗಳು ಅಂದರೆ ಭಾಷೆಯ ಅಂಗಾಂಗಳು/Parts of speech. ಉದ್ದೇಶ ಪೂರ್ವಕವಾಗಿ ಇವುಗಳ ಅತ್ಯಂತ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ. ಮುಂಬರುವ ಪಾಠಗಳಲ್ಲಿ ಅವಶ್ಯವಿದ್ದಲ್ಲೆಲ್ಲಾ ಒಂದೊಂದು ಅಂಗದ ವಿಚಾರವಾಗಿ ಅವಶ್ಯ ವಿದ್ದಷ್ಟೆ ಸಂಬಂಧಪಟ್ಟ ವ್ಯಾಕರಣದ ನಿಯಮಗಳನ್ನು ವಿವರಿಸಲಾಗುವುದು. ಬೋಧನೆಯ ಅಂತ್ಯದ ಮೊದಲು ವ್ಯಾಕರಣದ ಎಲ್ಲಾ ನಿಯಮಗಳ ಅನ್ವಯಿಸುವಿಕೆಯನ್ನು ಸಮಗ್ರವಾಗಿ ಕಲಿತಿರುತ್ತೀರಿ.
ವಿನೂತನ ಬೋಧನಾ ಕ್ರಮದ ಅನುಸಾರವಾಗಿ ಭಾಷಾಂತರ ಪ್ರಕ್ರಿಯೆಯನ್ನು ಸೂಕ್ತವಾಗಿ ಹೆಚ್ಚಿಸುತ್ತಾ ಹೋಗಬೇಕಾಗಿರುವು ದರಿಂದ, ವಿವಿಧ ವಾಕ್ಯಗಳ ರಚಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಅವಶ್ಯವೆನಿಸುವಷ್ಟೇ ವ್ಯಾಕರಣದ ನಿಯಮಗಳನ್ನು ವಿವರಿಸುತ್ತಾ ಕಲಿಕೆಯ ಕೊನೆ ಹಂತ ತಲುಪುವಷ್ಟರಲ್ಲಿ ವ್ಯಾಕರಣದ ಎಲ್ಲಾ ವಿಭಾಗಗಳನ್ನು ಕಲಿಯಬಹುದಾಗಿದೆ.
ಪದ/Wordವೊಂದು ವಾಕ್ಯ/Sentenceನಲ್ಲಿ ವಹಿಸುವ ಪಾತ್ರಕ್ಕೆ ಅನುಸಾರವಾಗಿ ಒಂದು ನಿರ್ದಿಷ್ಟ ಗುಂಪಿಗೆ ಸೇರುವುದು. ಒಂದೇ ಪದ/Wordವು ಬೇರೆ ಬೇರೆ ವಾಕ್ಯಗಳಲ್ಲಿ ಬೇರೆ ಬೇರೆ ಪಾತ್ರವಹಿಸಿದಾಗ ಪಾತ್ರಕ್ಕೆ ಅನುಸಾರವಾಗಿ ಆ ಪದ/Wordವು ನಿರ್ದಿಷ್ಟ ಗುಂಪಿಗೆ ಸೇರುತ್ತದೆ.
ಕೆಲವೊಮ್ಮೆ ಒಂದೇ ವಾಕ್ಯ/ Sentenceದಲ್ಲಿ ಒಂದೇ ರೂಪದ ಎರಡು ಪದ/Wordಗಳು ಇದ್ದು ಆ ಎರಡು ಪದ/Wordಗಳು ಎರಡು ವಿಭಿನ್ನ ಗುಂಪಿಗೆ ಸೇರಿರುತ್ತವೆ.
ಉದಾಹರಣೆಗೆ: I had 1 had 2 a book : ನಾನೊಂದು ಪುಸ್ತಕವನ್ನು ಹೊಂದಿದ್ದೆ. ಈ ವಾಕ್ಯ/Sentenceನಲ್ಲಿ ಮೊದಲನೆ “had1” have ಎಂಬ ಸಹಾಯಕ ಕ್ರಿಯಾಪದ/Helping verb ದ ಭೂತಕಾಲ/Past tense ದ ರೂಪ. ಎರಡನೆ “had2” ಎಂಬುದು have ಮುಖ್ಯ ಕ್ರಿಯಾಪದ/Principal verbದ ಭೂತಕೃದ್ವಾಚಕರೂಪ/Past participle. ಈ ಉದಾಹರಣೆಗೆ ಸಂಬಂಧಪಟ್ಟಂತೆ ವ್ಯಾಕರಣದ ನಿಯಮಗಳನ್ನು ಮುಂಬರುವ ಪಾಠಗಳಲ್ಲಿ ಕಲಿಯುವಿರಿ.
ಮಾಹಿತಿಗೆ: 9342540540
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.