ಪ್ರಶ್ನೆ 1
ಒಣ ಕೂದಲನ್ನು ಹಣಿಗೆಯಿಂದ ಬಾಚಿಕೊಂಡು ಕಾಗದದ ಚೂರುಗಳ ಹತ್ತಿರ ತಂದಾಗ ಅವು ಹೇಗೆ ವರ್ತಿಸುತ್ತವೆ? ಯಾಕೆ?
ಉತ್ತರ 1. ಒಣ ಕೂದಲನ್ನು ಒಣ ಹಣಿೆಯಿಂದ ಬಾಚಿಕೊಂಡಾಗ, ಹಣಿಗೆ `ಋಣ ಆವೇಶ'ವನ್ನು ಪಡೆದುಕೊಳ್ಳುತ್ತದೆ. ಅಂಥ ಹಣಿಗೆಯನ್ನು ಕಾಗದದ ಚೂರುಗಳ (ಧನ ಆವೇಶ) ಪಕ್ಕದಲ್ಲಿ ತಂದರೆ ಹಣಿಗೆ ಕಾಗದದ ಚೂರುಗಳನ್ನು ಆಕರ್ಷಿಸುತ್ತದೆ. ಆಗ ಕಾಗದದ ಚೂರುಗಳು ಕುಣಿಯುವಂತೆ ಗೋಚರಿಸುತ್ತವೆ.
ಪ್ರಶ್ನೆ 2
ಹಸಿ ಕೂದಲನ್ನು ಹಣಿಗೆಯಿಂದ ಬಾಚಿಕೊಂಡು, ಕಾಗದದ ಚೂರುಗಳ ಹತ್ತಿರ ತಂದಾಗ ಅವು ಹೇಗೆ ವರ್ತಿಸುತ್ತವೆ? ಯಾಕೆ?
ಉತ್ತರ 2. ತಲೆಗೂದಲನ್ನು ಒದ್ದೆಮಾಡಿ ಬಾಚಿಕೊಂಡಾಗ ಆವೇಶವು ಉತ್ಪತ್ತಿಯಾಗದೇ ಕಾಗದದ ಚೂರುಗಳು ಆಕರ್ಷಣೆಗೆ ಒಳಗಾಗುವುದಿಲ್ಲ. ಅಂದರೆ ಕುಣಿದಾಡುವುದಿಲ್ಲ.
ಸಾಮಗ್ರಿ: ಕಾಗದ, ಟೇಬಲ್, ಬಾಚಣಿಗೆ
ವಿಧಾನ
1. ಚಿತ್ರದಲ್ಲಿ ತೋರಿಸಿದಂತೆ ಚಿಕ್ಕ ಚಿಕ್ಕ ಕಾಗದದ ತುಂಡುಗಳನ್ನು ಟೇಬಲ್ ಮೇಲೆ ಹರಡಿ.
2. ಒಣ ಹಣಿಗೆಯನ್ನು ತೆಗೆದುಕೊಂಡು, ನಿಮ್ಮ ತಲೆಯ ಒಣ ಕೂದಲುಗಳನ್ನು 4-5 ಸಲ ಬಾಚಿಕೊಳ್ಳಿ.
3. ತಕ್ಷಣ ಬಾಚಣಿಗೆಯನ್ನು ಕಾಗದದ ಚೂರುಗಳ ಮೇಲೆ ಹಿಡಿಯಿರಿ.
4. ತಲೆಗೂದಲನ್ನು ಒದ್ದೆ ಮಾಡಿ ಬಾಚಿಕೊಂಡು, ಹಣಿಗೆಯನ್ನು ಕಾಗದದ ಚೂರುಗಳ ಹತ್ತಿರ ಹಿಡಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.