ಸ್ಮಾರ್ಟ್ ಇಂಗ್ಲಿಷ್ ನಮ್ಮ ದೈನಂದಿನ ವೃತ್ತಿಪರ ಅಗತ್ಯಗಳಿಗೆ ಒದಗಿ ಬರುತ್ತದೆ. ಈ ನಿಟ್ಟಿನಲ್ಲಿ Group Discussion ಅಥವಾ GDಗೆ ಬೇಕಾಗಿರುವಂತಹ ಭಾಷಾ ಕೌಶಲಕ್ಕೆ ಸ್ಮಾರ್ಟ್ ಇಂಗ್ಲಿಷ್ ಹೇಗೆ ಅನ್ವಯಿಸುತ್ತದೆ ಎಂಬುದನ್ನು ನೋಡೋಣ. ಇಂದಿನ ಜಾಗತೀಕರಣದ ಹಿನ್ನೆಲೆಯಲ್ಲಿ ಯಾವುದೇ ಉತ್ತಮ ಉದ್ಯೋಗ ಅವಕಾಶವನ್ನು ಪಡೆದುಕೊಳ್ಳಲು ಸಂದರ್ಶನದ ಮೂರು ಸುತ್ತುಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
ಈ ಮೂರು ಹಂತಗಳೆಂದರೆ:
1. Written Exam (ಬರಹ ಪರೀಕ್ಷೆ)
2. Group Discussion (ಸಮೂಹ ಚರ್ಚೆ)
3. Face-to-face interview (ಮುಖಾಮುಖಿ ಸಂದರ್ಶನ)
ಬರಹ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಮಾತ್ರ ಸಮೂಹ ಚರ್ಚೆಗೆ ಅವಕಾಶ ದೊರೆಯುತ್ತದೆ. ಈ ಸುತ್ತಿನಲ್ಲಿ ಕಂಪೆನಿಯ ನಿರೀಕ್ಷೆಯ ಮಟ್ಟವನ್ನು ತಲುಪಿದಾಗ ಮಾತ್ರ ಮುಖಾಮುಖಿ ಸಂದರ್ಶನಕ್ಕೆ ಅವಕಾಶ.
Face-to-face interviewಗೆ ಮುಂಚೆ Group discussionನ ಸುತ್ತಿಗೆ ಹೆಚ್ಚು ಪ್ರಾಮುಖ್ಯ ಕೊಡಲಾಗುತ್ತದೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ಇಲ್ಲಿ, ಕಾರ್ಯಕ್ಷಮತೆ (competence) ಇಲ್ಲದ ಸಾಕಷ್ಟು ಅಭ್ಯರ್ಥಿಗಳನ್ನು ಒಂದೇ ಬಾರಿಗೆ ಕಂಡುಹಿಡಿಯಬಹುದು. ಎರಡನೆಯ ಕಾರಣವೆಂದರೆ, ಈ ಸುತ್ತಿನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಉಪಯೋಗಿಸುವ ಮಾನದಂಡ ಕಂಪೆನಿಯ ನಿರ್ದಿಷ್ಟ ಅಗತ್ಯಗಳನ್ನು ಅವಲಂಬಿಸಿರುತ್ತದೆ.
ಸಮೂಹ ಚರ್ಚೆಯಲ್ಲಿ ಯಶಸ್ವಿಯಾಗಲು ನಮಗೆ ಭಾಷಾನಿರರ್ಗಳತೆ, conversation etiquette ಹಾಗೂ body language awareness - ಈ ಮೂರೂ ಅಯಾಮಗಳ ಮೇಲೆ ಹಿಡಿತವಿರಬೇಕು. ಇಲ್ಲಿ ಪರೀಕ್ಷೆಗೊಳಗಾಗುವ ಕೆಲವು ಗುಣಗಳು ಇಂತಿವೆ interpersonal skills, leadership, analytical, rational thinking, knowledge and personality traits. ಈ ಎಲ್ಲಾ ಗುಣಗಳ ಅಭಿವ್ಯಕ್ತಿಗೆ ಭಾಷೆಯೇ ಆಧಾರ ಎಂಬುದನ್ನು ಗಮನಿಸಬೇಕು.
Group discussionನಲ್ಲಿನ ಪ್ರಮುಖ ವಿಧಗಳು ಮೂರು factual, abstract, case study. Factualನಲ್ಲಿ ಸಮಕಾಲೀನ ಮತ್ತು ವಿವಾದಾತ್ಮಕ ವಿಷಯಗಳ ಬಗೆಗಿನ ಚರ್ಚೆ ಹೆಚ್ಚು ಕಂಡುಬರುತ್ತದೆ. ಇಲ್ಲಿ ಸಾಮಾನ್ಯವಾಗಿ ವಿಷಯಗಳ ವ್ಯಾಪ್ತಿ ತುಂಬಾ ವಿಶಾಲವಾಗಿರುತ್ತದೆ. ಆರ್ಥಿಕತೆಗೆ ಸಂಬಂಧಿಸಿದ ವಾಣಿಜ್ಯ ವಹಿವಾಟಿನ ವಿಷಯಗಳು, ರಾಜಕೀಯ, ಮಾಧ್ಯಮ ಮತ್ತು ಪ್ರಚಲಿತ ವಿದ್ಯಾಮಾನಗಳು ಯಾವುದೇ ವಿಷಯವಾದರೂ ಚರ್ಚೆಗೆ ಗ್ರಾಸವಾಗಬಹುದು. ಕೆಲವು ಉದಾಹರಣೆಗಳು:
1. Are arranged marriages better or love marriages?
2. Has democracy failed in India?
3. Money – a blessing or a curse?
4. The pros and cons of privatization in India.
(ಮುಂದಿನ ವಾರ Abstract ಮಾದರಿಯ ಸಮೂಹ ಚರ್ಚೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.