ಟೆಲಿಫೋನ್ ಸಂಭಾಷಣೆಯು, ನಾವು ಇಂಗ್ಲಿಷ್ ಬಳಸುವ ಸಹಜ ಸಂದರ್ಭಗಳಲ್ಲಿ ಅತಿ ಮುಖ್ಯವಾದ ಭಾಗ, ಈ ಕೆಳಗೆ, ಸುಲಭವಾಗಿ ಕಲಿಯಬಹುದಾದಂತಹ ಟೆಲಿಫೋನ್ ಎಟಿಕೆಟ್‌ನ ಸಂಕ್ಷಿಪ್ತ ಪರಿಚಯವಿದೆ.
ಟೆಲಿಫೋನ್ ಸಂಭಾಷಣೆಗೆ ಸಂಬಂಧಿಸಿದ ಕೆಲವು ಪದಗಳನ್ನು ನಾವು ತಿಳಿದಿರಬೇಕು- ಅವೆಂದರೆ:
Answering machine–ನಾವು ಫೋನ್ ಮಾಡಿದಂತಹ ವ್ಯಕ್ತಿ ಫೋನ್‌ನ ಬಳಿ ಇಲ್ಲದಿದ್ದಾಗ, ನಮ್ಮ message ಅನ್ನು ರೆಕಾರ್ಡ್ ಮಾಡಿಕೊಳ್ಳುವಂತಹ ಒಂದು ಮಶೀನ್.
Call–ಫೋನ್ ಮಾಡುವುದು
Caller - ಫೋನ್ ಮಾಡುವವರು.
Call back -ನಮಗೆ ಮುಂಚೆಯೇ ಫೋನ್ ಮಾಡಿದವರಿಗೆ ಮತ್ತೆ ಫೋನ್ ಮಾಡುವುದು.
Call display - ಫೋನ್ ಮಾಡಿರುವವರ ನಂಬರ್ ಅಥವಾ ಹೆಸರನ್ನು ತೋರಿಸುವ ಸ್ಕ್ರೀನ್.
Hang up -ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸುವುದು.
Pick up - ಫೋನ್ ರಿಂಗ್ ಆದಾಗ, ಅದಕ್ಕೆ ಉತ್ತರಿಸುವುದು.
ಟೆಲಿಫೋನ್‌ನಲ್ಲಿ ಮಾತನಾಡುವಾಗ, ನಾವು ಮಾತನಾಡುವ ರೀತಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಮ್ಮ ಭಾವನೆಗಳು ಫೋನ್‌ನಲ್ಲಿ ಕಾಣದಿರುವುದರಿಂದ ನಾವಾಡುವ ಮಾತುಗಳ ಬಗ್ಗೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ, ನಾವು ಅನುಸರಿಸಬೇಕಾದ ಕೆಲವು ಮುಖ್ಯವಾದ ಸೂತ್ರಗಳನ್ನು ಇಲ್ಲಿ ಗಮನಿಸಿ:
*ನಾವು ಮಾತನಾಡುವಾಗ, ನಮ್ಮ ಮುಖ ಅಥವಾ body language ಕಾಣದಿರುವುದರಿಂದ, ನಾವು ನಿಧಾನವಾಗಿ, ಸ್ಪಷ್ಟವಾಗಿ ಹಾಗೂ ಉತ್ಸಾಹದಿಂದ ಮಾತನಾಡಬೇಕು.
*ಎತ್ತರದ ದನಿಯಿಂದಲಾಗಲೀ ಅಥವಾ ತುಂಬಾ ಮೆಲುದನಿಯಿಂದಲಾಗಲೀ ಮಾತನಾಡಬಾರದು. ನಮ್ಮ ದನಿಯಲ್ಲಿ normal tone ಇರಬೇಕು.
*ಟೆಲಿಫೋನ್‌ನಲ್ಲಿ ಮಾತನಾಡುವಾಗ ಏನನ್ನಾದರೂ ತಿನ್ನುವುದು, ಕುಡಿಯುವುದು ಮಾಡಬಾರದು.
*ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಸಂದರ್ಭದಲ್ಲಿ Ya ಎನ್ನುವುದಾಗಲೀ ಅಥವಾ ಬೇರೆ slangs ಉಪಯೋಗಿಸುವುದಾಗಲೀ ಮಾಡದೆ, ಶುದ್ಧವಾದ yes ಅಥವಾ no ಎಂದೇ ಉತ್ತರಿಸಬೇಕು.
*Caller ಅನ್ನು ಸರಿಯಾದ ರೀತಿಯಲ್ಲಿ address ಮಾಡಬೇಕು. ಉದಾ: Good morning Mr. Akshay, Good afternoon Ms. Ashwini...
*ಟೆಲಿಫೋನ್‌ನಲ್ಲಿ ಮಾತನಾಡುವಾಗ ವಿಷಯವನ್ನು ಸರಿಯಾಗಿ ಕೇಳಿಸಿಕೊಳ್ಳುವ ವ್ಯವಧಾನವಿರಬೇಕು. ನಾವು ಇನ್ನೊಬ್ಬರಿಂದ message ತೆಗೆದುಕೊಳ್ಳುವಾಗ, ಆ message ಅನ್ನು ರಿಪೀಟ್ ಮಾಡಿ ಅವರಿಗೆ ಹೇಳಬೇಕು. ಹಾಗೆ ಮಾಡಿದಾಗ, message ಕೊಟ್ಟವರಿಗೆ ನಾವು ಸರಿಯಾಗಿ ಅವರ message ಅನ್ನು ತೆಗೆದುಕೊಂಡಿದ್ದೇವೆ ಎಂಬ ಭರವಸೆಯುಂಟಾಗುತ್ತದೆ.
*Caller ಹೇಳುತ್ತಿರುವುದು ನಮಗೆ ಸರಿಯಾಗಿ ಕೇಳಿಸದಿದ್ದಾಗ, pardon me ಅಥವಾ could you come again please? ಎಂದು ಹೇಳಬೇಕು.
*Callerನ ದನಿ ಯಾವುದೇ ರೀತಿ ಇದ್ದರೂ ನಮ್ಮ ದನಿಯಲ್ಲಿನ ಶಾಂತತೆಯನ್ನು ನಾವು ಕಳೆದುಕೊಳ್ಳದೆ ಉತ್ತರಿಸಬೇಕು.
*ಇವು ನಾವು call receive ಮಾಡಿದಾಗ ಅನುಸರಿಸಬೇಕಾದ ಕೆಲವು ಸೂತ್ರಗಳಾದರೆ, ನಾವು call ಮಾಡುವಾಗ ಅನುಸರಿಸಬೇಕಾದ ಕೆಲವು ಕ್ರಮಗಳೆಂದರೆ-
*ನಾವು call ಮಾಡಿದ ತಕ್ಷಣ ನಮ್ಮ ಪರಿಚಯವನ್ನು ಮಾಡಿಕೊಂಡ ನಂತರವೇ ವಿಷಯವನ್ನು ತಿಳಿಸಬೇಕಾಗುತ್ತದೆ.
ಉದಾ: Hello, good morning Mr. Suraj. This is Mr. Akshay from Infosys speaking.....
*ನಾವು ಇನ್ನೊಬ್ಬರಿಗೆ call ಮಾಡಿದಾಗ, ಥಟ್ಟನೆ ಮಾತಿಗಿಳಿಯುವ ಮುಂಚೆ ಹೀಗೆ ಹೇಳಬಹುದು Can I have a word with you? ಅಥವಾ Is it a good time to talk to you for a few minutes? ಎಂದು ಕೇಳಿ ಮುಂದುವರೆಯಬೇಕು.
ನಾವು ಏನನ್ನು ಹೇಳಬಯಸುತ್ತೇವೆಯೋ ಅದನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಬೇಕೇ ಹೊರತು ಸುತ್ತಿ ಬಳಸಿ ಮಾತನಾಡಬಾರದು. ನಾವು ಮಾತನಾಡುವಾಗ, ದನಿಯಲ್ಲಿ ಶಾಂತಿ, ಉತ್ಸಾಹ ಹಾಗೂ ಮಾತುಗಳಲ್ಲಿ ಸಭ್ಯತೆಯಿರಬೇಕು.
Key phrases for Telephone Conversation: ಸರಾಗವಾಗಿ ಟೆಲಿಫೋನ್ ಸಂಭಾಷಣೆಯನ್ನು ನಡೆಸಲು ಈ ಕೆಳಗಿನ ವಾಕ್ಯಗಳು ಬಹು ಉಪಯೋಗಕಾರಿ. ಟೆಲಿಫೋನ್‌ನಲ್ಲಿ ಮಾತನಾಡುವಾಗ, ವಿವಿಧ ಸಂದರ್ಭಗಳಲ್ಲಿ ಉಪಯೋಗಿಸುವಂತಹ ವಿವಿಧ ಪದಗಳು ಹಾಗೂ ಪದಪುಂಜಗಳನ್ನು ನಾವು ತಿಳಿದಿರಬೇಕು. ಟೆಲಿಫೋನ್ ಇಂಗ್ಲಿಷ್‌ನಲ್ಲಿ ಉಪಯೋಗಿಸಬಹುದಾದಂತಹ ಕೆಲವು phraseಗಳನ್ನು ಇಲ್ಲಿ ಗಮನಿಸಿ:
ನಾವೇ ಕರೆಯನ್ನು ಮಾಡಿದಾಗ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಉಪಯೋಗಿಸಬಹುದಾದ ಕೆಲವು phraseಗಳು ಹೀಗಿವೆ-
*Hello, it is Akshay calling
*Hello, this is Akshay here
*Hello, it’s Akshay from Bangalore
ನಾವು ಫೋನ್ ಮಾಡಿದ ಮೇಲೆ ಯಾರ ಜೊತೆಯಲ್ಲಾದರೂ ಮಾತನಾಡಬೇಕಾದಾಗ ಹೀಗೆ ಕೇಳಬಹುದು.
ಅನೌಪಚಾರಿಕವಾಗಿ (informal) ಕೇಳಬೇಕಾದರೆ
Is Tarun in? ಅಥವಾ
Is Tarun there, please? ಎಂದು ಕೇಳಬಹುದು.
Formal ಆಗಿ ಕೇಳಬೇಕಾದ ಸಂದರ್ಭದಲ್ಲಿ ಬಳಸ ಬಹುದಾದ phraseಗಳೆಂದರೆ.
*May I speak to Tarun?
*Could I have a word with Tarun?
*Can I speak to Tarun?
ನಾವು ಕರೆಯೊಂದನ್ನು ಸ್ವೀಕರಿಸುವಾಗ ಹೀಗೆ ಹೇಳಬಹುದು-
*Hello, this is Akshay speaking, who is speaking?
*May I know who is on line?
*May I know who I am speaking to?
*Who is speaking please?
ನಾವು ಕರೆಯನ್ನು ಸ್ವೀಕರಿಸಿ callerಅನ್ನು ಇನ್ನೊಬ್ಬರಿಗೆ connect ಮಾಡುವಾಗ ಉಪಯೋಗಿಸುವ ವಾಕ್ಯಗಳೆಂದರೆ,
lJust a second, I will get him
*Hang on one second
ಎಂದುInformal ಆಗಿಯೂ ಹಾಗೂ
*Please hold on, I will put him on to you
*Just a moment please
*Please be on line, I will connect you to her ಎಂದು formalಆಗಿಯೂ ಹೇಳಬಹುದು.
Caller ನಿಂದ ನಾವು message ತೆಗೆದುಕೊಳ್ಳಬೇಕಾದಾಗ ಉಪಯೋಗಿಸ ಬಹುದಾದ ಕೆಲವು ವಾಕ್ಯಗಳನ್ನು ಗಮನಿಸಿ:
*Would you like him to call you back?
*Can I take a message?
*Would you like to leave a message?
Phone ರಿಂಗ್ ಆದಾಗ ಅದು wrong number ಆಗಿದ್ದರೆ, ಹೀಗೆ ಹೇಳಬಹುದು-
*Sorry, it’s a wrong number
* am afraid you got the wrong number
*Wrong number please
ಕರೆಯ ಕೊನೆಯಲ್ಲಿ ಬಳಸಬಹುದಾದ ವಾಕ್ಯಗಳೆಂದರೆ-
*Nice talking to you
*Talk to you later
*t was a pleasure talking to you
* have to sign off now, take care
*Thanks for calling, bye for now
ಮೇಲಿನ ಈ ವಾಕ್ಯಗಳು ಹೆಚ್ಚು ಕಷ್ಟವಿಲ್ಲದೆ, ನಮ್ಮ ಸ್ಮಾರ್ಟ್ ಇಂಗ್ಲಿಷ್ ಬತ್ತಳಿಕೆಯ ಭಾಗವಾಗುತ್ತಾ ಹೋಗುತ್ತವೆ.
ಮಾಹಿತಿಗೆ: 98452 13417
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.