ಹಲವಾರು ಕಾರಣಗಳಿಂದ ಅನೇಕ ವಿದ್ಯಾರ್ಥಿಗಳು ಪಿಯು ಅಥವಾ ಡಿಪ್ಲೊಮಾ ಶಿಕ್ಷಣವನ್ನು ಪೂರ್ತಿಗೊಳಿಸದೆ ಮಧ್ಯದ್ಲಲಿಯೇ ಮೊಟಕುಗೊಳಿಸಿ ನಂತರ ಪರಿತಪಿಸುತ್ತಿರುತ್ತಾರೆ.
ಇಂತಹ ವಿದ್ಯಾರ್ಥಿಗಳು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ್ಲಲಿ ಲಭ್ಯವಿರುವ ವೃತ್ತಿಪರ ಕೋರ್ಸ್‌ಗಳ್ಲಲಿ ತಮ್ಮ ಹವ್ಯಾಸ ಮತ್ತು ಆಸಕ್ತಿಗೆ ಅನುಗುಣವಾದ ಔದ್ಯೋಗಿಕ ಕೋರ್ಸ್‌ಗಳ ಅಧ್ಯಯನ ಮಾಡುವ ಮೂಲಕ ಬದುಕು ರೂಪಿಸಿಕೊಳ್ಳಬಹುದು.
ಇನ್ನು ಬಹುತೇಕ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ / ಪಿಯುನಲ್ಲಿ ಫೇಲಾಗುವುದು ಮತ್ತು ಕಡಿಮೆ ಅಂಕ ಪಡೆಯುವುದು ಕೂಡ ಭವಿಷ್ಯ ಕೊನೆಗೊಡಂತೆ ಎಂದು ಭಾವಿಸುತ್ತಾರೆ. ಕೀಳಿರಿಮೆಯಿಂದ ಬಳಲುವ ಇಂತಹ ವಿದ್ಯಾರ್ಥಿಗಳ ಬಾಳಿಗೆ ಭರವಸೆ ತುಂಬುವಂತಹ ಹತ್ತು ಹಲವು ಉತ್ತಮ ಕೋರ್ಸ್‌ಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿರುವ ಕೋರ್ಸ್‌ಗಳು ಇಂತಿವೆ...
ಅಪ್ಯಾರಲ್ ಟ್ರೈನಿಂಗ್ ಆಂಡ್ ಡಿಸೈನ್ ಕೋರ್ಸ್‌ಗಳು:
1. ಅಪ್ಯಾರಲ್ ಪ್ಯಾಟರ್ನ್ ಮೇಕಿಂಗ್ (ಎಪಿಎಂ) ಕೋರ್ಸ್: 6 ತಿಂಗಳ ಅವಧಿ
2. ಇಂಡಸ್ಟ್ರಿಯಲ್ ಸೋಯಿಂಗ್ ಮಷಿನ್ ಟೇಕ್ನಿಷಿಯನ್ (ಐಎಸ್‌ಎಂಟಿ) ಕೋರ್ಸ್: 4 ತಿಂಗಳ ಅವಧಿ
3. ಗಾರ್ಮೆಂಟ್ ಕನ್‌ಸ್ಟ್ರಕ್ಷನ್ ಟೆಕ್ನಿಕ್ಸ್ (ಜಿಸಿಟಿ): 4 ತಿಂಗಳು
4. ಇಂಡಸ್ಟ್ರಿಯಲ್ ಸೋಯಿಂಗ್ ಮಷಿನ್ ಆಪರೇಷನ್ (ಐಎಸ್‌ಎಂಓ): 3 ತಿಂಗಳ ಅವಧಿ
ಭಾರತ ಸರ್ಕಾರದ ಜವಳಿ ಸಚಿವಾಲಯದ ಉಡುಪು ರಫ್ತು ಉತ್ತೇಜನ ಪರಿಷತ್‌ನಿಂದ (ಅಪೆಕ್) ಪ್ರಾಯೋಜಿತ ಈ ಕೋರ್ಸ್‌ಗಳು ‘ಅಪ್ಯಾರಲ್ ಟ್ರೈನಿಂಗ್ ಆಂಡ್ ಡಿಸೈನ್ ಸೆಂಟರ್’ನಲ್ಲಿ (ಎಟಿಡಿಸಿ) ಲಭ್ಯವಿದೆ. ಮಾಹಿತಿಗೆ: 080–235 72181, 2337 3221. ಬೆಂಗಳೂರು ಸೇರಿದಂತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಮದ್ದೂರು ಮತ್ತು ಗದಗಿನಲ್ಲಿ ಎಟಿಡಿಸಿ ಕೇಂದ್ರಗಳಿವೆ.
ಬಹುವಿಧ ತರಬೇತಿ ಕೋರ್ಸ್‌ಗಳು:
1. ಖಾದಿ ಟೆಕ್ನಾಲಜಿ ಕೋರ್ಸ್: 9 ತಿಂಗಳ ಅವಧಿ
2. ಫುಟ್‌ವೇರ್ ಆಂಡ್ ಲೆದರ್ ಗೂಡ್ಸ್ ಕೋರ್ಸ್: 6 ತಿಂಗಳು
3. ಮಾರ್ಕೆಟಿಂಗ್ ಅಸಿಸ್ಟನ್ಸ್ ಕೋರ್ಸ್: 3 ತಿಂಗಳ ಅವಧಿ
4. ಫ್ರೂಟ್ ಆಂಡ್ ವೆಜಿಟೆಬಲ್ ಪ್ರೋಸೆಸಿಂಗ್ ಕೋರ್ಸ್: 2 ತಿಂಗಳ ಅವಧಿ
5. ಪೇಪರ್ ಕನ್ವರ್ಷನ್ ಕೋರ್ಸ್: 2 ತಿಂಗಳ ಅವಧಿ
6. ಮಾಸ್ಟರ್ ಪಾಟರ್ ಕೋರ್ಸ್: 5 ತಿಂಗಳ ಅವಧಿ
7. ಬೇಕರಿ ಕೋರ್ಸ್: 2 ತಿಂಗಳ ಅವಧಿ
ಸ್ವಉದ್ಯೋಗ ತರಬೇತಿ ನೀಡುವ ಈ ಕೋರ್ಸ್‌ಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ತರಬೇತಿ ವೇಳೆ ಪ್ರತಿ ತಿಂಗಳಿಗೆ ಸ್ಥಳೀಯರಿಗೆ ರೂ 800 ಮತ್ತು ಹೊರಗಿನ ಅಭ್ಯರ್ಥಿಗಳಿಗೆ ರೂ 500 ಭತ್ಯೆ ನೀಡಲಾಗುತ್ತದೆ.
ಮಾಹಿತಿಗೆ: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ಬಹು ವಿಧ ತರಬೇತಿ ಕೇಂದ್ರ, ದೂರವಾಣಿ ನಗರ ಬೆಂಗಳೂರು. 080–25650285
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ ಕೋರ್ಸ್‌ಗಳು:
1. ಆರ್ಕಿಟೆಕ್ಚರಲ್ ಡ್ರಾಫ್ಟ್‌ಮನ್‌ಶಿಫ್ ಕೋರ್ಸ್: 2 ವರ್ಷ
2. ಡ್ರೆಸ್ ಮೇಕಿಂಗ್ ಕೋರ್ಸ್: 1 ವರ್ಷ
3. ಎಲೆಕ್ಟ್ರಾನಿಕ್ ಮೆಕ್ಯಾನಿಕ್: 2 ವರ್ಷ ಅವಧಿ
4. ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್: 2 ವರ್ಷ ಅವಧಿ
ಈ ಮೇಲ್ಕಂಡ ಎಲ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್ ತಿಂಗಳ್ಲಲಿ ಅರ್ಜಿ ಆಹ್ವಾನಿಸಲಾಗುತ್ತದೆ. ವಿವಿಧ ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ.
ಮಾಹಿತಿಗೆ: ಮಹಿಳಾ ಪ್ರಾದೇಶಿಕ ಔದ್ಯೋಗಿಕ ಶಿಕ್ಷಣ ತರಬೇತಿ ಸಂಸ್ಥೆ. ಹೊಸೂರು ರಸ್ತೆ, ಬೆಂಗಳೂರು. 080–26561955/26566348
ಉದ್ಯೋಗಾವಕಾಶಗಳು
ಡಿಪ್ಲೊಮಾ ಉತ್ತಮ ರೀತಿಯಲ್ಲಿ ಪೂರೈಸುವ ವಿದ್ಯಾರ್ಥಿಗಳಿಗಂತೂ ಇಂದು ಉಡುಪು ತಯಾರಿಕೆ ಉದ್ಯಮ, ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಸುವ ಕೈಗಾರಿಕೆಗಳಲ್ಲಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೇರಳವಾದ ಉದ್ಯೋಗಾವಕಾಶಗಳಿವೆ.
ಇನ್ನು, ಡಿಪ್ಲೊಮಾ ಇನ್ ಆರ್ಕಿಟೆಕ್ಚರಲ್ ಡ್ರಾಫ್ಟ್‌ಮನ್‌ಶೀಫ್‌ನಂತಹ ಕೋರ್ಸ್‌ಗಳನ್ನು ಪೂರೈಸಿದವರಿಗೆ ಒಳಾಂಗಣ ವಿನ್ಯಾಸ ಕಂಪೆನಿ ಅಥವಾ ವಿನ್ಯಾಸಕಾರರ ಬಳಿ ಸಹಾಯಕ ಕೆಲಸಗಳು ದೊರೆಯುತ್ತವೆ. ಮುಂದೆ ಅವರು ತಮ್ಮದೇ ಸ್ವಂತ ಉದ್ಯಮ ಕೂಡ ಸ್ಥಾಪಿಸಬಹುದು.
ರಿಫ್ರೆಷರ್ ಮತ್ತು ಸರ್ಟಿಫಿಕೆಟ್ ಕೋರ್ಸ್‌ಗಳು:
1. ಬೇಕರಿ ಆಂಡ್ ಕನ್‌ಫೆಕ್ಷನರಿ ಕೋರ್ಸ್: 2 ತಿಂಗಳ ಅವಧಿ
2. ಫ್ರಂಟ್ ಆಫಿಸ್ ಮ್ಯಾನೇಜ್‌ಮೆಂಟ್ ಕೋರ್ಸ್: 6 ತಿಂಗಳು
3. ಹೌಸ್ ಕೀಪಿಂಗ್ ಕೋರ್ಸ್: ಒಂದು ವರ್ಷ ಕೋರ್ಸ್
4. ಕುಕರಿ ಕೋರ್ಸ್. 5. ಬೇಕರಿ ಕೋರ್ಸ್. 6. ರೆಸ್ಟೋರೆಂಟ್ ಸರ್ವಿಸ್ ಕೋರ್ಸ್. ಹೆಚ್ಚಿನ ಮಾಹಿತಿಗೆ: ಫುಡ್ ಕ್ರಾಫ್ಟ್ ಇನ್‌ಸ್ಟಿಟ್ಯೂಟ್ (ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ -ಐಎಚ್‌ಎಂ) ಎಸ್‌ಜೆಪಿ ಪಾಲಿಟೆಕ್ನಿಕ್ ಕ್ಯಾಂಪಸ್ ಶೇಷಾದ್ರಿ ರಸ್ತೆ, ಬೆಂಗಳೂರು. 080–22262960, 22386763
ಮತ್ಸ್ಯೋದ್ಯಮಕ್ಕೆ ಸಂಬಂಧಿತ ಕೋರ್ಸ್‌ಗಳು:
1. ರೆಫ್ರಿಜರೇಷನ್ ಟೆಕ್ನಿಷಿಯನ್ ಟ್ರೈನಿಂಗ್ ಕೋರ್ಸ್: 10 ತಿಂಗಳ ಅವಧಿ
2. ಟ್ರೈನಿಂಗ್ ಇನ್ ವೆಸಲ್ ನ್ಯಾವಿಗೇಟರ್ ಆಂಡ್ ಮರಿನ್ ಫಿಟರ್ ಟ್ರೆಡ್ ಕೋರ್ಸ್: 2 ವರ್ಷ ಅವಧಿ
ಈ ಕೋರ್ಸ್‌ಗಳ ಪ್ರವೇಶಕ್ಕಾಗಿ ಜೂನ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಜುಲೈನಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.
ಮಾಹಿತಿಗೆ: ಇಂಟಿಗ್ರೆಟೆಡ್ ಫಿಷರಿಸ್ ಪ್ರೊಜೆಕ್ಟ್ಸ್ ಆಂಡ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಷರಿಸ್ ನಾಟಿಕಲ್ ಆಂಡ್ ಎಂಜನಿಯರಿಂಗ್ ಟ್ರೈನಿಂಗ್. ಫೈನ್ ಆರ್ಟ್ಸ್ ಅವೆನ್ಯೂ, ಕೊಚಿನ್ -682016 (www.cifnet.gov.in)
ಸೌಂದರ್ಯ ವರ್ಧಕ ಉದ್ಯಮಕ್ಕೆ ಸಂಬಂಧಿತ ಕೋರ್ಸ್‌ಗಳು:
1. ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಕಾಸ್ಮೆಟಾಲಜಿ ಕೋರ್ಸ್: 8 ತಿಂಗಳ ಅವಧಿ
2. ಡಿಪ್ಲೊಮಾ ಇನ್ ಹೆರ್ ಡಿಸೈನಿಂಗ್ ಕೋರ್ಸ್: 4 ತಿಂಗಳ ಅವಧಿ
3. ಸರ್ಟಿಫಿಕೆಟ್ ಆಂಡ್ ಡಿಪ್ಲೊಮಾ ಇನ್ ಬ್ಯೂಟಿ ಕಲ್ಚರ್ ಕೋರ್ಸ್: 2/4 ತಿಂಗಳ ಅವಧಿ
4. ಸರ್ಟಿಫಿಕೆಟ್ ಕೋರ್ಸ್ ಇನ್ ಪೆಡಿಕ್ಯೂರ್ ಆಂಡ್ ಮ್ಯಾನಿಕ್ಯೂರ್ ಕೋರ್ಸ್: ಒಂದು ತಿಂಗಳ ಅವಧಿ
5. ಸರ್ಟಿಫಿಕೆಟ್ ಕೋರ್ಸ್ ಇನ್ ಬಾಡಿ ಮಸಾಜ್ / ತೆರಪಿಸ್ ಕೋರ್ಸ್ : ಒಂದು ತಿಂಗಳ ಅವಧಿ
ಈ ಕೋರ್ಸ್‌ಗಳನ್ನು ಪೂರೈಸಿದವರಿಗೆ ಇಂದು ಬ್ಯೂಟಿ ಪಾರ್ಲರ್‌ಗಳು, ಹೋಟೆಲ್‌ಗಳು, ಕಾಸ್ಮೆಟಿಕ್ ಉದ್ಯಮಗಳು, ಫ್ಯಾಶನ್ ಮತ್ತು ಸಿನಿಮಾ ಕ್ಷೇತ್ರಗಳ್ಲಲಿ ವಿಫುಲ ಉದ್ಯೋಗಾವಕಾಶಗಳಿವೆ. ಇಷ್ಟೇ ಅಲದೇ, ಸ್ವಂತದಾದ ಬ್ಯೂಟಿ ಸಲೂನ್ ಕೂಡ ತೆರೆಯಬಹುದು.
ಮಾಹಿತಿಗೆ: ವಿಎಲ್‌ಸಿಸಿ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಆಂಡ್ ಫಿಟ್‌ನೆಸ್ ಮ್ಯಾನೇಜ್‌ಮೆಂಟ್, ಬೆಂಗಳೂರು (www.vlccinstitute.com)
ಅಗ್ನಿ ಸುರಕ್ಷತಾ ವೃತ್ತಿಗೆ ಸಂಬಂಧಿತ ಕೋರ್ಸ್‌ಗಳು:
1. ಡಿಪ್ಲೊಮಾ ಇನ್ ಲಿಫ್ಟ್ ಟೆಕ್ನಾಲಜಿ ಕೋರ್ಸ್: 1 ವರ್ಷ
2. ಸರ್ಟಿಫಿಕೆಟ್ ಆಂಡ್ ಡಿಪ್ಲೊಮಾ ಕೋರ್ಸ್ ಇನ್ ಫೈರ್ ಆಂಡ್ ಸೆಫ್ಟಿ ಎಂಜಿನಿಯರಿಂಗ್ ಕೋರ್ಸ್: 6–12 ತಿಂಗಳು
3. ಸರ್ಟಿಫಿಕೆಟ್ ಕೋರ್ಸ್ ಇನ್ ಫೈಬರ್ ಆಫ್ಟಿಕ್ ಟೆಕ್ನಾಲಜಿ ಕೋರ್ಸ್
ಈ ಕೋರ್ಸ್‌ಗಳನ್ನು ಪೂರೈಸಿದವರಿಗೆ ಅನೇಕ ಕೈಗಾರಿಕೆಗಳು, ಕಾರ್ಪೋರೆಟ್ ಕಂಪೆನಿಗಳು ಸೇರಿದಂತೆ ವಿದೇಶಗಳ್ಲಲಿ ವಿಫುಲ ಉದ್ಯೋಗಾವಕಾಶಗಳಿವೆ.
ಮಾಹಿತಿಗೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೈರ್ ಎಂಜಿನಿಯರಿಂಗ್ (ಎನ್‌ಐಎಫ್‌ಇ) ಬೆಂಗಳೂರು (ದೇಶದಾದ್ಯಂತ ಇದರ ಶಾಖೆಗಳಿವೆ) -www.nifeindia.com
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲದ ಕೋರ್ಸ್‌ಗಳು:
1. ಡಿಪ್ಲೊಮಾ ಇನ್ ಡೈರಿ ಟೆಕ್ನಾಲಜಿ: ಒಂದು ವರ್ಷ ಅವಧಿ
2. ಡಿಪ್ಲೊಮಾ ಇನ್ ಮಿಟ್ ಟೆಕ್ನಾಲಜಿ: ಒಂದು ವರ್ಷ ಅವಧಿ
3. ಡಿಪ್ಲೊಮಾ ಇನ್ ವ್ಯಾಲ್ಯೂ ಅಡೆಡ್ ಪ್ರೋಡಕ್ಟ್ಸ್ ಫ್ರಮ್ ಫ್ರೂಟ್ಸ್ ಆಂಡ್ ವೆಜಿಟೆಬಲ್ಸ್: ಒಂದು ವರ್ಷ ಅವಧಿ
ಈ ಕೋರ್ಸ್‌ಗಳನ್ನು ಸೇರಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಬ್ಯಾಚುಲರ್ಸ್ ಪ್ರಿಪ್ರೆಟರಿ ಪ್ರೊಗಾಂ (ಬಿಪಿಪಿ) ಆಫ್ ಇಗ್ನೊಗೆ ಹಾಜರಾಗಬೇಕು.
ಮಾಹಿತಿಗೆ: ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿರ್ವಸಿಟಿ, ನವದೆಹಲಿ -www.ignou.ac.in
ವಿಮಾನಯಾನಕ್ಕೆ ಸಂಬಂಧಿತ ಕೋರ್ಸ್‌ಗಳು:
1. ಡಿಪ್ಲೊಮಾ ಇನ್ ಟ್ರಾವೆಲ್ ಆಂಡ್ ಟೂರಿಸಂ ಫೌಂಡೆಷನ್ ಕೋರ್ಸ್: 21 ತಿಂಗಳ ಅವಧಿ.
ಈ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಮತ್ತು ವಿಮಾನಯಾನ, ಟ್ರಾವೆಲ್ ಏಜೆನ್ಸಿ, ಏರಲೈನ್ಸ್‌ಗಳು ಮತ್ತು ಕಾರ್ಪೋರೆಟ್ ಕಂಪೆನಿಗಲ್ಲಿ ಸೇವಾ ಕ್ಷೇತ್ರಗಳಲ್ಲಿ ಅವಕಾಶಗಳಿವೆ.
ವಿಶ್ವದಾದ್ಯಂತ ಇರುವ ವಿಮಾನ ನಿಲ್ದಾಣಗಳ್ಲಲಿ ಟಿಕೆಟ್ ವಿತರಕರಾಗಿ, ಪ್ರಯಾಣಿಕರ ತಪಾಸಕರಾಗಿ, ಕಾರ್ಗೊ ನಿರ್ವಾಹಕರಾಗಿ... ಹೀಗೆ ಹತ್ತು ಹಲವು ರೀತಿಯಲ್ಲಿ ನಿರ್ವಹಿಸಬಹುದಾದ ಉದ್ಯೋಗ ಅವಕಾಶಗಳಿವೆ. ಒಂದಕ್ಕಿಂತ ಹೆಚ್ಚು ಕೋರ್ಸ್‌ಗಳನ್ನು ಪೂರೈಸಿರುವ ಅಭ್ಯರ್ಥಿಗಳಿಗೆ ಇಲ್ಲಿ ಉತ್ತಮ ಭವಿಷ್ಯವಿದೆ.
ಮಾಹಿತಿಗೆ: ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಷಿಯೇಷನ್ (ಐಎಟಿಎ) (ಅಧಿಕೃತ ತರಬೇತಿ ಕೇಂದ್ರಗಳು ದೇಶದಾದ್ಯಂತ ಇವೆ) -www.iata.org
ಟೊಯೊಟಾ ತಾಂತ್ರಿಕ ಶಿಕ್ಷಣ ಸಂಸ್ಥೆ ಕೋರ್ಸ್‌ಗಳು:
1. ಆಟೋಮೊಬೈಲ್ ಅಸೆಂಬ್ಲಿ
2. ಆಟೋಮೊಬೈಲ್ ಪೆಂಟ್
3. ಆಟೋಮೊಬೈಲ್ ವೆಲ್ಡ್
4. ಮೆಕ್ಯಾಟ್ರಾನಿಕ್ಸ್
ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕಾದರೆ ವಿದ್ಯಾರ್ಥಿಯು ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ 50 ಮತ್ತು ಒಟ್ಟಾರೆ ಶೇ 50ರಷ್ಟು ಅಂಕ ಗಳಿಸಿರಬೇಕು. ವಯಸ್ಸು 15-18 ವರ್ಷಗಳ ಒಳಗಿರಬೇಕು. ಗ್ರಾಮೀಣ ಶಾಲೆಯಲ್ಲಿ ಓದಿರಬೇಕು. ಪ್ರವೇಶಕ್ಕಾಗಿ ಸಂಸ್ಥೆಯು ನಡೆಸುವ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ತರಬೇತಿ ಶಿಕ್ಷಣ ನೀಡಲಾಗುತ್ತದೆ. ಈ ವೇಳೆ ಭತ್ಯೆ ಕೂಡ ನೀಡಲಾಗುತ್ತದೆ.
ಮಾಹಿತಿಗೆ: ಸಂಪರ್ಕಿಸಿ- ಟೊಯೊಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ಬಿಡದಿ ಕೈಗಾರಿಕಾ ಪ್ರದೇಶ, ರಾಮನಗರ ಜಿಲ್ಲೆ - 080–66292532/36.
ಯುವತಿಯರಿಗೆ ಸ್ಕಾಲರ್‌ಶಿಪ್
ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಂದ ಲೋರಿಯಾಲ್ ಇಂಡಿಯಾ ಸಂಸ್ಥೆಯು ವಿಶೇಷ ಸ್ಕಾಲರ್‌ಶಿಪ್ಗೆ ಅರ್ಜಿ ಆಹ್ವಾನಿಸಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ದೆಹಲಿ ಮತ್ತು ಎನ್‌ಸಿಆರ್ ನಿಂದ 12ನೇ ವರ್ಗದ ವಿಜ್ಞಾನ ವಿಭಾಗದ ಅಭ್ಯರ್ಥಿಗಳು ‘ವಿಜ್ಞಾನದಲ್ಲಿರುವ ಮಹಿಳೆಯರಿಗಾಗಿ’ ಸ್ಕಾಲರ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.
50 ಯುವತಿಯರಿಗೆ ನಾಲ್ಕು ವರ್ಷಗಳ ಅವಧಿಗೆ ತಲಾ ರೂ. 2.5 ಲಕ್ಷಗಳ ಸ್ಕಾಲರ್‌ಶಿಪ್ ನೀಡಲಾಗುವುದು. ಮಾನ್ಯತೆ ಪಡೆದ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಪದವಿ ಪಡೆಯಲು ಈ ಸ್ಕಾಲರ್‌ಶಿಪ್ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಈ ಶೈಕ್ಷಣಿಕ ವರ್ಷದಲ್ಲಿ (ಮಾರ್ಚ್ 2014ಕ್ಕೆ ಮುಕ್ತಾಯವಾಗಿರುವುದು), 12ನೇ ವರ್ಗದ ಪರೀಕ್ಷೆಗಳಲ್ಲಿ ಪಿಸಿಎಂ/ಪಿಸಿಬಿಯಲ್ಲಿ ಕನಿಷ್ಠ 85% ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಯುವತಿಯರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬೇಕು. 31.05.2014ರಂದು 19 ವರ್ಷ ದಾಟಿರಬಾರದು.
www.foryoungwomeninscience.com ವೆಬ್ ತಾಣಕ್ಕೆ ಭೇಟಿ ಮಾಡಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡಿ, ಅರ್ಜಿ ಫಾರ್ಮುಗಳನ್ನು ಲೋರಿಯಾಲ್ ಇಂಡಿಯಾ, ಎ-ವಿಂಗ್, 8ನೇ ಮಹಡಿ, ಮ್ಯಾರಥಾನ್ ಫ್ಯೂಚರೆಕ್ಸ್, ಎನ್.ಎಂ.ಜೋಶಿ ಮಾರ್ಗ್, ಲೋವರ್ ಪರೇಲ್, ಮುಂಬೈ 400013ಕ್ಕೆ ಕಳುಹಿಸಬೇಕು. ಕೊನೆಯ ದಿನಾಂಕ ಜೂನ್ 30, 2014.
ಹೆಚ್ಚಿನ ಮಾಹಿತಿಗೆ 022–67003000 fywis@in.loreal.com ಈ ಸ್ಕಾಲರ್‌ಶಿಪ್ ವಿಜ್ಞಾನದ ಯಾವುದೇ ಕ್ಷೇತ್ರದಲ್ಲಿ ಅಧ್ಯಯನಕ್ಕೆ ಲಭ್ಯವಿರುತ್ತದೆ: ವೈದ್ಯಕೀಯ, ಎಂಜಿನಿಯರಿಂಗ್, ಮಾಹಿತಿತಂತ್ರಜ್ಞಾನ, ಫಾರ್ಮಸಿ, ಬಯೋಟೆಕ್ನಾಲೊಜಿ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಇತರ ಪದವಿ ಕೋರ್ಸ್‌ಗಳು (ಬಿ.ಎಸ್‌ಸಿ.).
(ಮಾಹಿತಿಗೆ: ಅಮೀನ್ ಇ ಮುದಸ್ಸರ್ 080 41554225/9241778866 ಅಥವಾ www.after10thwhat.com/www.after12thwhat.com)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.