ADVERTISEMENT

ಬೇಕೆಂದಾಗ ಮಳೆ

ಮಾಡಿ ನಲಿ ಸರಣಿ -6

ಪ್ರೊ.ಸಿ.ಟಿ.ಪಾಟೀಲ್
Published 3 ಮಾರ್ಚ್ 2013, 19:59 IST
Last Updated 3 ಮಾರ್ಚ್ 2013, 19:59 IST

ಸಾಮಗ್ರಿ: ಖಾಲಿ ಪೌಡರ್ ಡಬ್ಬಿ, ನೀರು, ಡಬ್ಬಳ.
ವಿಧಾನ:

* ಒಂದು ಖಾಲಿ ಪೌಡರ್ ಡಬ್ಬಿಯನ್ನು ತೆಗೆದುಕೊಳ್ಳಿ.

* ಅದರ ಬುರುಡೆಯನ್ನು ತೆಗೆದು ಬಾಯಿಯಲ್ಲಿದ್ದ ರಂಧ್ರಗಳನ್ನು ಸ್ವಲ್ಪ ದೊಡ್ಡದು ಮಾಡಿ.

* ಡಬ್ಬಿಯ ಕೆಳಗೆ ಒಂದು ಚಿಕ್ಕ ರಂಧ್ರ ಮಾಡಿ.

* ಡಬ್ಬಿಯ ಕೆಳಗೆ ಮಾಡಿದ ರಂಧ್ರವನ್ನು ಬೆರಳಿನಿಂದ ಮುಚ್ಚಿ ಡಬ್ಬದಲ್ಲಿ ನೀರು ತುಂಬಿ.

* ಈಗ ಡಬ್ಬಿಯನ್ನು ತಿರುವು ಮುರುವು ಮಾಡಿ.

ಪ್ರಶ್ನೆ
ನೀವು ಮುಚ್ಚಿದ ರಂಧ್ರದ ಮೇಲಿಂದ ಬೆರಳನ್ನು ತೆಗೆದು, ಮತ್ತೆ ಮುಚ್ಚಿದಾಗ ಏನಾಗುತ್ತದೆ? ಯಾಕೆ?

ಉತ್ತರ
ಬೆರಳನ್ನು ರಂಧ್ರದಿಂದ ತೆಗೆದಾಗ ಡಬ್ಬಿಯ ಬಾಯಿಯ ರಂಧ್ರಗಳ ಮೂಲಕ ನೀರು ಮಳೆಯ ಹನಿಗಳಂತೆ ಕೆಳಗೆ ಬೀಳುತ್ತದೆ. ಯಾಕೆಂದರೆ ಡಬ್ಬಿಯ ಒಳಗಿನ ಹಾಗೂ ಹೊರಗಿನ ಒತ್ತಡವು ಒಂದೇ ಆಗಿರುತ್ತದೆ. ರಂಧ್ರವನ್ನು ಬೆರಳಿನಿಂದ ಮುಚ್ಚಿದಾಗ ಡಬ್ಬಿಯಲ್ಲಿನ ಗಾಳಿಯು ಹರಡುತ್ತದೆ (ವ್ಯಾಕೋಚಿಸುತ್ತದೆ) ಆಗ ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ಅಂದರೆ ಬೆರಳಿನಿಂದ ರಂಧ್ರವನ್ನು ಮುಚ್ಚಿದಾಗ ಡಬ್ಬಿಯ ಒಳಗಿನ ಒತ್ತಡವು ವಾತಾವರಣದ ಒತ್ತಡಕ್ಕಿಂತ ಕಡಿಮೆಯಾಗುವುದರಿಂದ ನೀರು ಬೀಳುವುದು ನಿಲ್ಲುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.