ADVERTISEMENT

ಶಾರದೆಯ ಗುರುಕುಲ

ವಿ.ಆರ್.ನಂದಕುಮಾರ್
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಕುಮಾರಸ್ವಾಮಿ ಲೇಔಟ್‌ನಿಂದ ಇಸ್ರೋ ಲೇಔಟ್ ಕಡೆಗೆ ಹೊರಟರೆ ಬಿಕಾಸಿಪುರದ ಗಿಡ ಮರಗಳಿಂದ ಕೂಡಿದ ತಣ್ಣನೆಯ ವಾತಾವರಣದ ಮಧ್ಯದಲ್ಲಿ ಕಂಡುಬರುವ `ಶ್ರೀ ಶಾರದಾ ವಿದ್ಯಾನಿಕೇತನ ಶಾಲೆ~, ಕವಿತಾ ಅವರ ಕನಸಿನ ಕೂಸು.

ಈಗಿರುವ ಶಾಲೆಗಳಿಗಿಂತ ಭಿನ್ನವಾದ, ಮಕ್ಕಳು ಮುದದಿಂದ ಕಲಿಯುವ ವಾತಾವರಣದ ಶಾಲೆ ಇರಬೇಕು ಎನ್ನುವ ಉದ್ದೇಶವನ್ನು ಅವರು ಇಲ್ಲಿ ಸಾಕಾರಗೊಳಿಸಿದ್ದಾರೆ.

ಮಾಂಟೆಸ್ಸರಿ ಶಿಕ್ಷಣದಿಂದ ಇಲ್ಲಿನ ಕಲಿಕೆ ಆರಂಭವಾಗುತ್ತದೆ. ಮೊದಲ ಮೂರು ವರ್ಷ ಎ್ಲ್ಲಲಾ ಮಕ್ಕಳು ವಯೋಮಾನ ಭೇದವಿಲ್ಲದೆ ಒಂದೆಡೆ ಕುಳಿತು ಕಲಿಯುವ ವಿನೂತನ ರೀತಿ ಇಲ್ಲಿಯದು. ಬೇಬಿ ನರ್ಸರಿ, ಎಲ್‌ಕೆಜಿ, ಯುಕೆಜಿ ಎಂಬ ಭೇದ ಇಲ್ಲಿಲ್ಲ. ನಂತರ ಒಂದನೇ ತರಗತಿಯಿಂದ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಅಭ್ಯಾಸ ಆರಂಭ.

`ಗುಡ್ ಮಾರ್ನಿಂಗ್~ ಎಂಬ ಒಕ್ಕೊರಲಿನ ನಿನಾದ, `ನೀವು ಇಲ್ಲಿಗೆ ಬಂದದ್ದು ಯಾಕೆ~ ಎಂಬ ಕುತೂಹಲದ ಪ್ರಶ್ನೆ ಕೇಳುವ ಮಕ್ಕಳ ಸೃಜನಶೀಲತೆಗೂ ಇಲ್ಲಿದೆ ಅವಕಾಶ. ಬೇರೆ ಬೇರೆ ದೇಶದ ಬಾವುಟಗಳನ್ನು ಶಿಕ್ಷಕಿ ತೋರಿಸುತ್ತಿದ್ದರೆ ಪಟ ಪಟನೆ ಆ ದೇಶಗಳ ಹೆಸರು ಹೇಳುವ ಮಟ್ಟಿಗೆ ಇಲ್ಲಿನ ಮಕ್ಕಳು ಜಾಣರಾಗಿದ್ದಾರೆ.

ಕಂಪ್ಯೂಟರ್ ಮುಂದೆ ಕುಳಿತು ಮೌಸ್ ತಿರುಗಿಸುವ ಪುಟಾಣಿಗಳನ್ನು, ಜೇಡಿ ಮಣ್ಣಿನಲ್ಲಿ ಮನಸ್ಸಿನ ಭಾವನೆಗಳನ್ನು ರೂಪಿಸುವ ಚಿಣ್ಣರು, ಸುತ್ತಲೂ ಕನ್ನಡಿ ಇರುವ ನೃತ್ಯ ಕೊಠಡಿಯಲ್ಲಿ ನೃತ್ಯ ಹಾಗೂ ಯೋಗಾಭ್ಯಾಸ ಮಾಡುವ ಮಕ್ಕಳನ್ನು ಇಲ್ಲಿ ಕಾಣಬಹುದು.

ವಿಶಾಲವಾದ ಶಾಲಾ ಆವರಣ, ಆಟದ ಮೈದಾನ, ಉದ್ಯಾನವನ, ಸುಸಜ್ಜಿತ ಕೊಠಡಿಗಳು, ಒಳಾಂಗಣ ಕ್ರೀಡೆ, ಪೇಟಿಂಗ್- ಹೀಗೆ ಹಲವು ಚಟುವಟಿಕೆಗಳಿಗೆ `ಶಾರದೆ~ಯಲ್ಲಿ ಅವಕಾಶವಿದೆ.

ಮಗು ಒಮ್ಮೆ ಶಾಲೆಗೆ ಸೇರ್ಪಡೆಯಾದರೆ ಸಾಕು, ಮಕ್ಕಳ ಒಳಿತಿಗಾಗಿ ಪೋಷಕರು ಬಯಸುವ ಎಲ್ಲವೂ ಇಲ್ಲಿದೆ. ಶಾಸ್ತ್ರೀಯ ನೃತ್ಯ ಸಂಗೀತ, ಯೋಗ, ಕರಾಟೆ, ಸ್ಕೇಟಿಂಗ್, ಚೆಸ್, ಕೇರಂ, ಟೆನಿಸ್- ಹೀಗೆ, ಪಾಠದೊಂದಿಗೆ ಆಟಕ್ಕೂ ಸಾಕಷ್ಟು ಪ್ರೋತ್ಸಾಹವನ್ನು ಇಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ಎಲ್ಲಾ ವಿಭಾಗಗಳಲ್ಲೂ ನುರಿತ ಶಿಕ್ಷಕರಿದ್ದಾರೆ.

ಕಲಿಕೆಗೆ ಸಹಾಯವಾಗುವಂತೆ ಪ್ರತಿಯೊಂದು ಮಗುವನ್ನು ಗಮನವಿಟ್ಟು ನೋಡಿಕೊಳ್ಳುವ ದೃಷ್ಟಿಯಿಂದ ಹತ್ತು ಮಕ್ಕಳಿಗೆ ಒಬ್ಬ ಶಿಕ್ಷಕಿ ಇದ್ದಾರೆ. ಒಂದೇ ಕೊಠಡಿಯಲ್ಲಿ ಕುಳಿತು ಮಕ್ಕಳಿಗೆ ಬೇಸರ ಆಗಬಾರದೆಂದು ಒಂದೊಂದು ಸಲ ಶಾಲಾ ಆವರಣದಲ್ಲಿರುವ ಮರಗಳ ನೆರಳಿನಲ್ಲಿ ಕೂರಿಸಿ ತರಗತಿ ನಡೆಸಲಾಗುತ್ತದೆ.  ಮಕ್ಕಳು ಆಟವಾಡಿಕೊಂಡೇ ಪಾಠವನ್ನು ಕಲಿಯಲಿ ಎನ್ನುವುದು ಇದರ ಉದ್ದೇಶ. ಗುರುಕುಲ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡುವುದು ಇಲ್ಲಿನ ವಿಶೇಷ.

`ನಮ್ಮ ಶಾಲೆಗೆ ಸೇರ್ಪಡೆಯಾದ ಮಕ್ಕಳನ್ನು ಕಲಿಕೆಯಲ್ಲಿ ಮಾತ್ರವಲ್ಲ, ಇಷ್ಟದ ಆಟದ್ಲ್ಲಲೂ ಮುಂಚೂಣಿಗೆ ತರುವುದು ನಮ್ಮ ಧ್ಯೇಯ~ ಎಂದು ಹೇಳುತ್ತಾರೆ ಕವಿತಾ. (ಮಾಹಿತಿಗೆ: www.shaarade.org.in/  99450 90919)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.