ADVERTISEMENT

ಸಾರ್ವಜನಿಕ ಭಾಷಣ ಹೀಗಿರಲಿ

ENGLISH ಕಲಿಯೋಣ ಬನ್ನಿ

ಪ್ರೊ ಆರ್ ರಾಜಾರಾಮ್‌
Published 5 ಏಪ್ರಿಲ್ 2015, 19:30 IST
Last Updated 5 ಏಪ್ರಿಲ್ 2015, 19:30 IST

Voice Culture tips
ಧ್ವನಿಯ ಏರಿಳಿತಗಳು (voice modulation), ಪರಿಣಾಮಕಾರಿ ಪಬ್ಲಿಕ್ ಸ್ಪೀಕಿಂಗ್‌ನ ಒಂದು ಮುಖ್ಯ ಭಾಗ. ನಾವು ಉಚ್ಚರಿಸುವ ವಾಕ್ಯಗಳು ನೀರಸವಾಗಿರದೆ, ನಮ್ಮ ಧ್ವನಿ ಉತ್ಸಾಹ (voice enthusiasm) ಕೇಳುಗರನ್ನು ತಲುಪಬೇಕು. ಉದಾಹರಣೆಗೆ, waterಎಂಬ ಒಂದೇ ಪದವನ್ನು ಒಂದು ಹೇಳಿಕೆಯಾಗಿಯೂ, ಪ್ರಶ್ನೆಯಾಗಿಯೂ, ಆಶ್ಚರ್ಯ ಸೂಚಕವಾಗಿಯೂ ಅಥವಾ ಆಜ್ಞೆಯಾಗಿಯೂ ನಮ್ಮ ಧ್ವನಿಯಿಂದಲೇ ಸೂಚಿಸಬಹುದು.

ಈ ಕಲೆಯನ್ನು tonal shiftನಿಂದ ಕಲಿಯಬಹುದು, ವಾಕ್ಯವೊಂದರ ಒಂದೊಂದೇ ಪದವನ್ನು ಒತ್ತಿ ಹೇಳಿ (emphasize) ಅದರಲ್ಲಿರುವ ಅರ್ಥವ್ಯತ್ಯಾಸಗಳನ್ನು ಹೊಮ್ಮಿಸುವ ಕಲೆಯನ್ನು ನಾವು ಕ್ರಮೇಣ ಸಿದ್ಧಿಸಿಕೊಳ್ಳಬೇಕು.
ಈ ಕೆಳಗಿನ ವಾಕ್ಯ ಸಮೂಹವನ್ನು ಗಮನಿಸಿ:
1. I love ice-creams in summer.
2. I love ice-creams in summer.
3. I love ice-creams in summer.
4. I love ice-creams in summer.

ಬೋಲ್ಡ್ ಮಾಡಿದ ಪದಗಳನ್ನು ಒತ್ತಿ ಹೇಳಿದಾಗ toneನ ವ್ಯತ್ಯಾಸದಿಂದ ಅರ್ಥವ್ಯತ್ಯಾಸವೂ ಆಗುತ್ತಿರುತ್ತದೆ ಎಂಬುದನ್ನು ಗಮನಿಸಿ. ಇದನ್ನೇ tonal shift ಎನ್ನುತ್ತೇವೆ. ಇದು voice modulationನ ಒಂದು ಆಭ್ಯಾಸಕ್ರಮ. ಇದಕ್ಕೆ ಸಂಬಂಧಿಸಿದ ಇನ್ನೊಂದು ವಿಷಯವೆಂದರೆ While speaking, we should pause in between sense groups and not between words.
ಉದಾಹರಣೆಗೆ, The city of Varanasi is on the banks of river Ganges ಎಂಬ ವಾಕ್ಯವನ್ನು ಗಮನಿಸಿ.

ಪರಿಣತಿ ಇಲ್ಲದವರು ಇದನ್ನು ಉಚ್ಚರಿಸುವಾಗ, ಅನೇಕ ಬಾರಿ ಬಿಡಿ ಪದಗಳ ನಡುವೆ pause ಮಾಡುತ್ತಾರೆ. ಹಾಗೆ ಮಾಡದೆ, ಈ ವಾಕ್ಯದಲ್ಲಿರುವ ಮೂರು sence groupಗಳ ನಡುವೆ ಮಾತ್ರ pause ಮಾಡಬೇಕು. ಆ sense groupಗಳೆಂದರೆ  – The city of Varanasi, is on the banks of, river Ganges. ಹೀಗೆ ಮಾಡಿದಾಗ, ನಮ್ಮ ವಾಕ್ಯಕ್ಕೆ ಧ್ವನಿ ಮತ್ತು ಅರ್ಥಸಂಗಮದ ಚೆಲುವು ಒದಗಿಬರುತ್ತದೆ.

ನಮ್ಮ ಧ್ವನಿಯ ಕಸುವನ್ನು ಪೋಷಿಸಲು ಸಣ್ಣ ಪ್ರಮಾಣದ voice culture exercise ತುಂಬಾ ಉಪಯೋಗಕಾರಿ. ಇದರ ಒಂದು ವಿಧಾನ ಇಲ್ಲಿದೆ. ಮೊದಲು ಸಾವಧಾನವಾಗಿ inhale ಮಾಡಿ ಅನಂತರ ನಿಧಾನವಾಗಿ, ದೃಢದನಿಯಲ್ಲಿ ‘ಆ......’ ಎಂದು ಒಂದೇ ಸಮನೆ ಉಚ್ಚರಿಸಿ. ಇದು ಸಂಗೀತಗಾರನೊಬ್ಬ ಷಡ್ಜದ (ಸಪ್ತಸ್ವರದ ಮೊದನೆಯ ಸ್ವರ-ಸ) ಶೃತಿಹಿಡಿದು ಸ್ವರಸಾಧನೆ ಮಾಡಿದ ಹಾಗಿರುತ್ತದೆ.

ಈ ತರಹದ open vowel exhalationನಿಂದ ನಮ್ಮ ಧ್ವನಿತಂತು (breath thread) ದೀರ್ಘವಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ, ಆ..... ಎಂದು open vowel exhalation ಮಾಡಿದಾಗ, ಸುಮಾರು 10-12 ಸೆಕೆಂಡುಗಳ ಹೊತ್ತಿಗೆ ನಮ್ಮ ದನಿ ಕ್ಷೀಣವಾಗುತ್ತಾ, ನಡುಗುತ್ತಾ, ಸತ್ವಕಳೆದು ಇಂಗಿಹೋಗಿರುತ್ತದೆ. ಆದರೆ, ನುರಿತ ಸಂಗೀತಗಾರರ ಧ್ವನಿ ಸುಮಾರು 30 ಸೆಕೆಂಡುಗಳಷ್ಟು ದೀರ್ಘವಾದ ದನಿತಂತನ್ನು ಹೊರಡಿಸಬಲ್ಲದು.

ಪಬ್ಲಿಕ್ ಸ್ಪೀಕಿಂಗ್‌ಗೆ ನಮಗೆ ಸುಮಾರು 20 ಸೆಕೆಂಡುಗಳಷ್ಟು ದೀರ್ಘವಾದ ನಿಶ್ವಾಸ ಸಾಕು. Open vowel exdhalationನ ಮುಖಾಂತರ ಖಂಡಿತವಾಗಿ ಇದನ್ನು ಬೆಳೆಸಿಕೊಳ್ಳಬಹುದು. ಕೊನೆಯದಾಗಿ, ಪಬ್ಲಿಕ್ ಸ್ಪೀಕಿಂಗ್‌ನಲ್ಲಿ nervous body gesturesನ ಬಗ್ಗೆ ಕೆಲವು ಮಾತುಗಳು. ವೇದಿಕೆಯ ಮೇಲೆ ಕಂಬದಂತೆ ಸೆಟೆತು ನಿಲ್ಲದೆ ತುಸು flexible ಆಗಿರಬೇಕು. ನಮ್ಮ ಹಸ್ತ ಹಾಗೂ ಕೈಬೆರಳುಗಳು ನಮ್ಮ ಅಗತ್ಯಕ್ಕೆ ದಕ್ಕುವಂತಿರಬೇಕು.

ನೀವು ನಿಮ್ಮ ಪ್ಯಾಂಟಿನ ಜೇಬುಗಳಲ್ಲಿ ಕೈಯಿಟ್ಟುಕೊಂಡರೆ ಇದು ಸಾಧ್ಯವಾಗುವುದಿಲ್ಲ, ಹಾಗೂ ವೇದಿಕೆಯ ಮೇಲಿನ ನಮ್ಮ ಚಲನೆ ಮಿತಿಮೀರದಂತಿರಬೇಕು. ಇನ್ನೊಂದು ವಿಷಯವೆಂದರೆ, ನಮ್ಮ nervous body gestures ಯಾವುದೆಂಬುದರ ಅರಿವು ನಮಗಿರಬೇಕು. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯದ್ದಾಗಿರುತ್ತದೆ.

ಉದಾಹರಣೆಗೆ, ತಲೆಗೂದಲನ್ನು ಸವರಿಕೊಳ್ಳುವುದು, ನಮ್ಮ ಶರ್ಟ್ ಬಟನ್‌ ಅನ್ನು ಒಂದೇ ಸಮನೆ ಹಿಂಸಿಸುವುದು. ಕೆಲವು ಸಾರಿ ok, you know, alright ಎಂಬ non-wordsಅನ್ನು nervousnessನಿಂದ ಪದೇ ಪದೇ ಹೇಳುವುದು, ಕೈಕಟ್ಟಿ ನಿಂತುಕೊಳ್ಳುವುದು.
ಇವೆಲ್ಲವುಗಳ ಗೋಜಲಿನಿಂದ ಹೊರಬರಬೇಕು. ಎಲ್ಲಕ್ಕೂ ಮಿಗಿಲಾಗಿ. ಪಬ್ಲಿಕ್ ಸ್ಪೀಕಿಂಗ್‌ನಲ್ಲಿ ಯಾರನ್ನೋ ಮಾಡೆಲ್ ಆಗಿ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಂಡು, ಅವರಂತೆ ಮಾತನಾಡಲು ಪ್ರಯತ್ನಿಸುವುದು ಕೋಡಂಗಿತನಕ್ಕೆ ನಾವೇ ಕೊಡುವ ಆಹ್ವಾನ. ನಮ್ಮಂತೆ ನಾವಿದ್ದು, ಹೇಳಬಯಸಿದ್ದನ್ನು ಹೇಳಬೇಕು.

ಮಾಹಿತಿಗೆ: 98452 13417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.