ADVERTISEMENT

ಎಟಿಪಿ ಫೈನಲ್ಸ್: ನೊವಾಕ್ ಜೊಕೊವಿಚ್‌ಗೆ ಆಘಾತ ನೀಡಿದ ಅಲೆಕ್ಸಾಂಡರ್‌ ಜ್ವೆರೆವ್‌

ಪ್ರಶಸ್ತಿ ಸುತ್ತಿನಲ್ಲಿ ಮೆಡ್ವೆಡೆವ್ ಎದುರಾಳಿ

ಏಜೆನ್ಸೀಸ್
Published 21 ನವೆಂಬರ್ 2021, 13:51 IST
Last Updated 21 ನವೆಂಬರ್ 2021, 13:51 IST
ಅಲೆಕ್ಸಾಂಡರ್ ಜ್ವೆರೆವ್ ಆಟದ ವೈಖರಿ– ಎಪಿ ಚಿತ್ರ
ಅಲೆಕ್ಸಾಂಡರ್ ಜ್ವೆರೆವ್ ಆಟದ ವೈಖರಿ– ಎಪಿ ಚಿತ್ರ   

ಟುರಿನ್‌,ಇಟಲಿ: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು.

ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಅವರು7-6 (4), 4-6, 6-3ರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್‌ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಈ ವರ್ಷದಲ್ಲಿ ಎರಡನೇ ಬಾರಿ ಸರ್ಬಿಯಾ ಆಟಗಾರನಿಗೆ ಪ್ರಮುಖ ಟೂರ್ನಿಯೊಂದರ ಪ್ರಶಸ್ತಿ ಸುತ್ತಿನಲ್ಲಿ ಆಡುವ ಅವಕಾಶವನ್ನು ನಿರಾಕರಿಸಿದರು.

ಟೋಕಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಜ್ವೆರೆವ್‌ ಅವರು ಜೊಕೊವಿಚ್‌ಗೆ ಸೋಲುಣಿಸಿದ್ದರು.

ADVERTISEMENT

ಈ ಸೋಲಿನೊಂದಿಗೆ ಜೊಕೊವಿಚ್ ಅವರಿಗೆ, ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಅವರ ಆರು ಎಟಿಪಿ ಫೈನಲ್ಸ್ ಪ್ರಶಸ್ತಿ ಗೆಲುವಿನ ದಾಖಲೆಯನ್ನು ಸಮಗಟ್ಟುವ ಅವಕಾಶವೂ ಕೈತಪ್ಪಿತು.

ಜ್ವೆರೆವ್ ಅವರು ಫೈನಲ್ ಪಂದ್ಯದಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.