ಟುರಿನ್, ಇಟಲಿ: ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರು ಇಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ನ ಗುಂಪು ಹಂತದ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು.
ಆರನೇ ಶ್ರೇಯಾಂಕದ ಬೋಪಣ್ಣ– ಎಬ್ಡೆನ್ ಜೋಡಿಯು ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ 2–6, 3–6ರಲ್ಲಿ ನಾಲ್ಕನೇ ಶ್ರೇಯಾಂಕದ ಸಿಮೋನ್ ಬೊಲೆಲಿ ಮತ್ತು ಆ್ಯಂಡ್ರಿಯಾ ವಾವಸ್ಸೊರಿ (ಇಟಲಿ) ಅವರ ಎದುರು ಮುಗ್ಗರಿಸಿತು.
ಇಂಡೊ-ಆಸ್ಟ್ರೇಲಿಯನ್ ಜೋಡಿಗೆ ಇಟಲಿಯ ಆಟಗಾರರ ವಿರುದ್ಧ ಈ ವರ್ಷದಲ್ಲಿ ಸತತ ಮೂರನೇ ಸೋಲಾಗಿದೆ. ಬೋಪಣ್ಣ– ಎಬ್ಡೆನ್ ಅವರು ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಫೈನಲ್ನಲ್ಲಿ ಕೊನೆಯ ಬಾರಿ ಸಿಮೋನ್– ವಾವಸ್ಸೊರಿ ಅವರನ್ನು ಮಣಿಸಿದ್ದರು.
ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಬೋಪಣ್ಣ– ಎಬ್ಡೆನ್ ಜೋಡಿಯು ಮುಂದಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಮಾರ್ಸೆಲೊ ಅರೆವಾಲೊ (ಎಲ್ ಸಾಲ್ವಡಾರ್) ಮತ್ತು ಮೇಟ್ ಪಾವಿಕ್ (ಕ್ರೊವೇಷ್ಯಾ) ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.