ಲಂಡನ್: ಆಸ್ಟ್ರೀಯಾದ ಡೊಮಿನಿಕ್ ಥೀಮ್ ಎದುರು ಗೆಲುವು ಸಾಧಿಸಿದ ಗ್ರೀಸ್ ಆಟಗಾರ ಸ್ಟೆಫಾನೊಸ್ ಸಿಸಿಪಸ್, ಈ ಬಾರಿಯ ಎಟಿಪಿ ಫೈನಲ್ಸ್ ಪ್ರಶಸ್ತಿಗೆ ಮುತ್ತಿಕ್ಕಿದರು.
21 ವರ್ಷದಸಿಸಿಪಸ್, ಥೀಮ್ ಅವರನ್ನು6–7, 6–2, 6–4 ಅಂತರದಿಂದ ಮಣಿಸಿದರು. ಮೊದಲ ಸೆಟ್‌ನಲ್ಲಿ ವೈಫಲ್ಯ ಅನುಭವಿಸಿದರೂ, ಬಳಿಕ ಅತ್ಯುತ್ತಮ ಆಟವಾಡಿದ ಸಿಸಿಪಸ್ ಮೊದಲ ಯತ್ನದಲ್ಲೇ ಈ ಪ್ರಶಸ್ತಿ ಗೆದ್ದ ನಾಲ್ಕನೇಆಟಗಾರ ಎನಿಸಿದರು.
2001ರಲ್ಲಿ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾದ ಲೀಟನ್ ಹೆವಿಟ್ ನಂತರ ಈ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು.
ಅಮೆರಿಕದ ಜಿಮ್ ಕೊರಿಯರ್(2001) ಬಳಿಕ ಮೊದಲ ಯತ್ನದಲ್ಲೇ ಫೈನಲ್ ತಲುಪಿದ ಆಟಗಾರ ಎಂಬ ಖ್ಯಾತಿಯೂ ಅವರದಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.