ADVERTISEMENT

ಕಿನ್‌ವೆನ್ ವಿರುದ್ಧ ಗೆದ್ದು ಆಸ್ಟ್ರೇಲಿಯಾ ಓಪನ್ ಕಿರೀಟ ಮುಡಿಗೇರಿಸಿಕೊಂಡ ಅರಿನಾ

ಏಜೆನ್ಸೀಸ್
Published 27 ಜನವರಿ 2024, 12:22 IST
Last Updated 27 ಜನವರಿ 2024, 12:22 IST
<div class="paragraphs"><p>ಅರಿನಾ ಸಬಲೆಂಕಾ</p></div>

ಅರಿನಾ ಸಬಲೆಂಕಾ

   

ಮೆಲ್ಬರ್ನ್: ಬೆಲಾರಸ್‌ ದೇಶದ ಅರಿನಾ ಸಬಲೆಂಕಾ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ಲ್ಲಿ ಸತತ ಎರಡನೇ ವರ್ಷವೂ ಪ್ರಶಸ್ತಿ ಗೆದ್ದುಕೊಂಡರು.

ಎರಡನೇ ಶ್ರೇಯಾಂಕದ ಸಬಲೆಂಕಾ ಶನಿವಾರ ಫೈನಲ್‌ನಲ್ಲಿ 6–3, 6–2ರ ನೇರ ಸೆಟ್‌ಗಳಲ್ಲಿ ಚೀನಾದ ಝೆಂಗ್ ಕಿನ್‌ವೆನ್ ವಿರುದ್ಧ ಸುಲಭ ಜಯ ಸಾಧಿಸಿದರು. 

ADVERTISEMENT

12ನೇ ಶ್ರೇಯಾಂಕದ ಝೆಂಗ್ ಅವರು ಯಾವುದೇ ಹಂತದಲ್ಲಿಯೂ ಸಬಲೆಂಕಾ ಅವರಿಗೆ ಸರಿಸಾಟಿಯಾಗಲಿಲ್ಲ.

‘ಕಳೆದ ಎರಡು ವಾರಗಳು ನನ್ನ ಪಾಲಿಗೆ ಅಮೋಘವಾಗಿದ್ದವು.  ಒಂದು ರೀತಿಯ ವಿಶೇಷವಾದ ಸಂತಸದ ಭಾವ ನನ್ನಲ್ಲಿದೆ ಈಗ ‘ ಎಂದು ಸಬಲೆಂಕಾ ಸಂತಸ ವ್ಯಕ್ತಪಡಿಸಿದರು.

ಸಬಲೆಂಕಾ ಅವರು ಕಳೆದ 13 ತಿಂಗಳುಗಳಲ್ಲಿ  ಒಟ್ಟು ಮೂರು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಪಂದ್ಯಕ್ಕೆ ಅಡ್ಡಿ: ಪಂದ್ಯದಲ್ಲಿ ಎರಡನೇ ಸೆಟ್‌ನ ಮೂರನೇ ಗೇಮ್ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ (ಪ್ರತಿಭಟನಕಾರ) ಕೂಗಾಡತೊಡಗಿದ.  ಇದರಿಂದಾಗಿ ಕೆಲಹೊತ್ತು ಪಂದ್ಯ ಸ್ಥಗಿತವಾಯಿತು. ಭದ್ರತಾ ಸಿಬ್ಬಂದಿಯು ಆ ವ್ಯಕ್ತಿಯನ್ನು ಹೊರಗೆ ಕಳಿಸಿದ ನಂತರ ಪಂದ್ಯ ಮತ್ತೆ ಮುಂದುವರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.