ನವದೆಹಲಿ: ಟೆನಿಸ್ ತಾರೆ ರೋಹನ್ ಬೋಪಣ್ಣ ಅವರು ತಮ್ಮ ವೃತ್ತಿಜೀವನದ ಕೊನೆಯ ಒಲಿಂಪಿಕ್ಸ್‌ನಲ್ಲಿ ಆಡಲು ಸಿದ್ಧರಾಗಿದ್ದಾರೆ.
ಪ್ಯಾರಿಸ್‌ನಲ್ಲಿ ಅವರು ಎನ್. ಶ್ರೀರಾಮ್ ಬಾಲಾಜಿ ಅವರೊಂದಿಗೆ ಡಬಲ್ಸ್‌ನಲ್ಲಿ ಆಡಲಿದ್ದಾರೆ. 44 ವರ್ಷದ ಬೋಪಣ್ಣ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ ಹತ್ತರಲ್ಲಿದ್ದರು. ಅದರಿಂದಾಗಿ ಒಲಿಂಪಿಕ್ ಅರ್ಹತೆ ಪಡೆಯುವುದು ಭಾರತಕ್ಕೆ ಸರಾಗವಾಯಿತು. ಅವರು ಬಾಲಾಜಿ ಅಥವಾ ಯೂಜಿ ಬಾಂಭ್ರಿ ಅವರಲ್ಲಿ ಒಬ್ಬರನ್ನು ತಮ್ಮ ಜೊತೆಗಾರನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಇತ್ತು.
ತಮ್ಮ ಕೋಚ್ ಸ್ಕಾಟ್ ಡೇವಿಡಾಫ್ ಮತ್ತು ಬಾಲಚಂದರನ್ ಮಣಿಕಾಂತ್ ಅವರ ಸಲಹೆ ಪಡೆದ ನಂತರ ಬಾಲಾಜಿ ಅವರನ್ನು ಆಯ್ಕೆ ಮಾಡಿಕೊಂಡಿದ್ದರು.
‘ನಾವು ಕಣಕ್ಕಿಳಿದಾಗ ಪ್ರತಿಯೊಂದು ಪಂದ್ಯದಲ್ಲಿಯೂ ಗೆಲುವಿನ ಉತ್ತಮ ಅವಕಾಶ ಇರುತ್ತದೆ. ನಮ್ಮ ಎದುರಾಳಿ ಯಾರೇ ಇರಲಿ. ಅವರಿಗೆ ದಿಟ್ಟ ಪೈಪೋಟಿಯೊಡ್ಡಬೇಕು. ಮಹತ್ವದ ಘಟ್ಟಗಳಲ್ಲಿ ಪುಟಿದೇಳುವ ಸಾಮರ್ಥ್ಯ ಬಾಲಾಜಿಗೆ ಇದೆ. ಚುರುಕಾದ ಆಟವಾಡುವ ಅವರು ಉತ್ತಮ ಫಲಿತಾಂಶ ನೀಡುವ ನಿರೀಕ್ಷೆ ಇದೆ’ ಎಂದು ಪಿಟಿಐ ಸಂದರ್ಶನದಲ್ಲಿ ಬೋಪಣ್ಣ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.